ಕರ್ನಾಟಕ ಸಂಭ್ರಮ ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮ.
ಮುಂಡರಗಿ 16: ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘ ಹೂವಿನಹಡಗಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ ಇವರ ಸಹಯೋಗದಲ್ಲಿ ಸರಕಾರಿ ಪ್ರೌಡಶಾಲೆ ಹೆಸರೂರ ಗ್ರಾಮದಲ್ಲಿ ನಡೆದ ಕರ್ನಾಟಕ ಸಂಭ್ರಮ 50 ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಈ ವೇಳೆ ಅತಿಥಿಯಾಗಿ ಭಾಗವಹಿಸಿದ ಹನುಮರಡ್ಡಿ ಇಟಗಿಯವರು ಮಾತನಾಡಿ, ಕನ್ನಡ ನಾಡು ನುಡಿಯ ಕುರಿತು ಹಳೆಗನ್ನಡವನ್ನು ಹಾಡುವ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತು ಎಲ್ಲರ ಮನೆ ಸೆಳೆದರು, ಅವರ ಮಾತುಗಳಿಂದ ಅವರೊಬ್ಬ ಕನ್ನಡ ಪಂಡಿತರು ಅನ್ನೋದರಲ್ಲಿ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.
ಉಪನ್ಯಾಸಕ ಬಿ.ಬಿ.ಬೆನಕನವಾರಿ ಮಾತನಾಡಿ, ಕನ್ನಡ ಸಾಹಿತ್ಯ ಅಂದು ಇಂದು ಕುರಿತು ಸರ್ವಶ್ರೇಷ್ಠ ಸಾಹಿತಿಗಳು, ಕೃತಿಕಾರರು, ಛಂದಸ್ಸು, ಅಲಂಕಾರ, ಷಟ್ಪದಿ ಇನ್ನಿತರ ಅಂದಿನ ಪ್ರಾಸ ಲಯ ಸ್ಥಿತಿ ಕುರಿತು ಯಾವ ರೀತಿ ಕವನ ಪದ್ಯ ಬರೆಯುತ್ತಿದ್ದರು, ಹಾಡುತ್ತಿದ್ದರು, ಎನ್ನುದನ್ನು ಬಹಳ ಸೋಗಸಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎಮ್.ಜಿ.ಗಚ್ಚನ್ನವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಬಹಳ ಕ್ರಿಯಾಶೀಲತೆಯಿಂದ ಕಾರ್ಯಕ್ರಮಗಳಿಂದದ ಎಲ್ಲರ ಗಮನ ಸೇಳೆಯುತ್ತಿದೆ, ಕರ್ನಾಟಕ ಸಂಬ್ರಮ 50ರ ಪ್ರಯುಕ್ತ ತಾಲೂಕಿನ ವಿವಿದ ಶಾಲೆ ಕಾಲೇಜಗಳಲ್ಲಿ 50 ಕಾರ್ಯಕ್ರಮಗಳನ್ನು ಆಯೋಜಿಸಲು ಸನ್ನದ್ದರಾಗಿದ್ದೆವೆ. ಎಲ್ಲರೂ ಕೂಡಿ ಕನ್ನಡ ಸಾಹಿತ್ಯ ಸಂಸ್ಕೃತಿ, ನಾಡು, ನುಡಿಗಾಗಿ ಸೇವೆ ಮಾಡೋಣ,ಬಹಳ ಅಚ್ಚಕಟ್ಟಾಗಿ ಕಾರ್ಯಕ್ರಮದ ಆಯೋಜಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನಂತರ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ,ನಾಡು ನುಡಿ ಇತಿಹಾಸ ಗತವೈಭವ ಕುರಿತು ಆಗಮಿಸಿದ ಎಲ್ಲಾ ಕವಿಗಳು ಕವನ ವಾಚನ ಮಾಡಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ ಹಳ್ಳಿಕೇರಿ,ವಹಿಸಿದ್ದರು, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಿಂಗಪ್ಪ ಚೂರಿ ಉದ್ಘಾಟಿಸಿದರು.
ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಸುರೇಶ ಬಾವಿಹಳ್ಳಿ,ಸದಸ್ಯರುಗಳಾದ ಕೃಷ್ಣಮೂರ್ತಿ ಸಾಹುಕಾರ,ಅಕ್ಕಮಹಾದೇವಿ ಕೊಟ್ಟುರಶೆಟ್ಟರ,ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಂಘದ ಎಲ್ಲಾ ಪದಾಧಿಕಾರಿಗಳು,ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೋಳಿಸಿದರು. ಸಾಹಿತಿಗಳು ಶಿಕ್ಷಕರಾದ ಮಹೇಶ ಎಸ್ ಎಚ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.