ಶ್ರದ್ಧಾಭಕ್ತಿಯಿಂದ ಕರಿಸಿದ್ದೇಶ್ವರ ಜಾತ್ರೆ
ಮಹಾಲಿಂಗಪುರ 07: ಪ್ರತಿವರ್ಷದಂತೆ ಈ ವರ್ಷ ದೀಪಾವಳಿಯ ಪಾಡ್ಯದಂದು ಕರಿಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಭಂಡಾರ ಅರ್ಿಸಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಿದರು.
ಕರಿಸಿದ್ದೇಶ್ವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಮತ್ತು ಅಹೋರಾತ್ರಿ ಡೊಳ್ಳಿನ ಪದಗಳ ಗಾಯನ ಮನಸೂರೆಗೊಂಡಿತು.
ಜಾತ್ರೆಯ ನಿಮಿತ್ಯ ಡೊಳ್ಳಿನ ವಾಲಗದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ದಾರಿಯುದ್ದಕ್ಕೂ ಭಕ್ತರು ಬಂಡಾರದಲ್ಲಿ ಮಿಂದೆದ್ದು ಭಕ್ತಿ ಪರವಶರಾದದ್ದು ಕಂಡುಬಂದಿತು.
ಹಾಲುಮತದ ಕುಲದೈವವಾದ ಕರಿಸಿದ್ದೇಶನಿಗೆ ಅಂಬಲಿ ನೈವೇದ್ಯ ಮಾಡಿ ಬಂದ ಭಕ್ತರಿಗೆ ಹಾಲುಗ್ಗಿ, ಅನ್ನ, ಸಾಂಬಾರು, ಅಂಬಲಿ ಪ್ರಸಾದ ವ್ಯವಸ್ಥೆಯನ್ನು ಕಮಿಟಿ ವತಿಯಿಂದ ಕಲ್ಪಿಸಲಾಗಿತ್ತು. ಪಟ್ಟಣದ ಎಲ್ಲ ಸಮುದಾಯದಗಳು ಭಕ್ತಿ ಭಾವೈಕ್ಯತೆಯೊಂದಿಗೆ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದ ಸವಿದರು.
ಟ್ರಸ್ಟಿಗಳಾದ ಮಹಾಲಿಂಗಪ್ಪ ಜಕ್ಕಣ್ಣವರ, ಚಂದ್ರ್ಪ ಡೋಣಿ, ಗಂಗಪ್ಪ ಮೇಟಿ, ಲಕ್ಷ್ಮಣ ಕಿಶೋರ,ನಾಗಪ್ಪ ಪೂಜೇರಿ, ಗೌಡಪ್ಪಗೌಡ ಪಾಟೀಲ, ಬಾಬುರಾವ ಹಾದಿಮನಿ, ಹನಮಂತ ಅವಟಗಿ, ರಾಮಣ್ಣ ಬಂಡಿ, ಶ್ರೀಶೈಲ ಅವಟಿ, ಕರೆಪ್ಪ ಮೇಟಿ ಇದ್ದರು.