ಮುದ್ದೆಬಿಹಾಲ್

ಕಾರ್ಗಿಲ್ ವಿಜಯೋತ್ಸವ: ವೀರ ಯೋಧರ ತ್ಯಾಗಕ್ಕೆ ಮುದ್ದೇಬಿಹಾಳದಲ್ಲಿ ಅದ್ದೂರಿ ನಮನ

ಕಾರ್ಗಿಲ್ ವಿಜಯೋತ್ಸವ: ವೀರ ಯೋಧರ ತ್ಯಾಗಕ್ಕೆ ಮುದ್ದೇಬಿಹಾಳದಲ್ಲಿ ಅದ್ದೂರಿ ನಮನ

ಮುದ್ದೇಬಿಹಾಳ 27 : ಭಾರತ ಮಾತೆಯ ವೀರ ಯೋಧರ ಶೌರ್ಯ, ತ್ಯಾಗ ಹಾಗೂ ದೇಶಭಕ್ತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮುದ್ದೇಬಿಹಾಳ ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ನಡೆದ ಧ್ವಜಾರೋಹಣ ಸಮಾರಂಭದಲ್ಲಿ  ಕ್ರೈಂ ಪಿಎಸ್‌ಐ ಆರ್‌.ಎಸ್‌. ಬಂಗಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರು, ದೇಶಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.  ಸಂಜೆ 4 ಗಂಟೆಗೆ  ದಾವಲಸಾಬ ಕಂಬಾರ ಅವರ ನಿವಾಸದಿಂದ ಕಾರ್ಗಿಲ್ ಸ್ಮಾರಕದವರೆಗೆ ಭವ್ಯ ಬೈಕ್ ರ್ಯಾಲಿ, ರಾಷ್ಟ್ರಧ್ವಜ ಮೆರವಣಿಗೆ ಹಾಗೂ ಜ್ಯೋತಿ ಯಾತ್ರೆ ನಡೆಯಿತು.

ದೇಶಭಕ್ತ ಯುವಕರು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.  ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಭಾಷಣ ಸ್ಪರ್ಧೆ, ವಿವಿಧ ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪೂಜ್ಯ ಅಮರೇಶ್ವರ     ಆಶೀರ್ವಚನ ನೀಡಿದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುನೀತ್ ಹಿಪ್ಪರಗಿ ಮಾತನಾಡಿದರು. ರಾಜಶೇಖರ ಹೊಳಿ ಸ್ವಾಗತಿಸಿದರು. ರವಿ ನಾಲತವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಲ್ಟಾನ್,   ಲಕ್ಷ್ಮಿ ಅಲಗುಂಡಿ, ನಬಿಸಾ ನದಾಫ, ಶ್ರೀಕಾಂತ ಹಿರೇಮಠ, ಉಪಾಧ್ಯಕ್ಷ ಸೊಮನಗೌಡ ಬಿರಾದಾರ, ಕಾರ್ಯದರ್ಶಿ ಕಾಶಿನಾಥ ಹುಗ್ಗಿ, ಸಂತೋಷ ಬಾದರಬಂಡಿ, ರಾಜು ಮ್ಯಾಗೇರಿ, ರಾಜು ಬಳ್ಳೊಳ್ಳಿ, ಶೇಖರ ಢವಳಗಿ, ಸಂಸ್ಥಾಪಕ ಅಧ್ಯಕ್ಷ ಬಸಯ್ಯ ನಂದಿಕೇಶ್ವರಮಠ, ಮಾಜಿ ಸೈನಿಕ ಚಿರಲದಿನ್ನಿ ಹಾಗೂ ವೀರನಾರಿಯರ ಸಂಘದ ರೇಖಾ ಕೊಂಡಗೋಳಿ ಉಪಸ್ಥಿತರಿದ್ದರು.  ಚಂದ್ರು ಕಲಾಲ ಕಾರ್ಯಕ್ರಮ ನಿರೂಪಿಸಿದರು. ಉದಯ ರಾಯಚೂರು ವಂದಿಸಿದರು.  ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಾಜಿ ಸೈನಿಕರು, ವೀರನಾರಿಯರು, ವಿದ್ಯಾರ್ಥಿಗಳು, ಯುವಕರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಗಿಲ್ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. 


ಸುದ್ದಿ ಓದಿ