ಕರವೇ ಜಿಲ್ಲಾಧ್ಯಕ್ಷ ಜಿ ರಾಜಶೇಖರ್‌ಗೆ ಕರುನಾಡ ರಕ್ಷಕ ರಾಜ್ಯ ಪ್ರಶಸ್ತಿ
ಬಳ್ಳಾರಿ :ನ(30)ರಂದು ಕರ್ನಾಟಕ ರಕ್ಷಣಾ ವೇದಿಕೆಯ ಶೈಕ್ಷಣಿಕ ವಿಭಾದ ರಾಜ್ಯ ಘಟಕ ಎಚ್. ಶಿವರಾಮೇಗೌಡರ ಸಾರಥ್ಯದಲ್ಲಿ ಕರುನಾಡ ರಕ್ಷಕ ರತ್ನ ಪ್ರಶಸ್ತಿ ಜಿಲ್ಲಾಧ್ಯಕ್ಷರಾದ ಜಿ ರಾಜಶೇಖರ್ ರವರಿಗೆ ಲಭಿಸಿದೆ.
ನಂತರ ರಾಜ್ಯದ್ಯಕ್ಷರಾದ ಎಚ್. ಶಿವರಾಮೇಗೌಡ ರವರು ಮಾತನಾಡುತ್ತಾ, ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಸುವಲ್ಲಿ ಬೆಳೆಸುವಲ್ಲಿ ಹಾಗೂ ಇವರ ಸಾಮಾಜಿಕ ಕ್ಷೇತ್ರದ ಸೇವೆ ಮತ್ತು ಸಾಧನೆಯನ್ನು ಒಳ್ಳೆಯ ವ್ಯಕ್ತಿತ್ವವನ್ನು ಗುರುತಿಸಿ ಹಾಗೂ ಜನರು ಮೆಚ್ಚುವಂತಹ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಆದುದರಿಂದ ಕರ್ನಾಟಕ ರಕ್ಷಣಾ ವೇದಿಕೆಯು ನ,30 ಗುರುವಾರ ದಂದು ರಾಜ್ಯಮಟ್ಟದ “ಕರುನಾಡ ರಕ್ಷಕ ರತ್ನ” ಪ್ರಶಸ್ತಿಯನ್ನು ಕರವೇ ರಾಜ್ಯ ಶೈಕ್ಷಣಿಕ ವಿಭಾಗದ ಅಧ್ಯಕ್ಷರಾದ ಸುರೇಂದ್ರ ನಾಡಗುಡ್ಡೆ ಹೋಟೆಲ್ ಕರವೇ, ರಾಜ್ಯ ಶೈಕ್ಷಣಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ.ಮಲ್ಕಪ್ಪ ಅಲಿಯಾಸ್ ಮಹೇಶ್ ಅವರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಧ್ಯಕ್ಷರಾದ ಜಿ ರಾಜಶೇಖರ್ (ಕುರಟ್ಟಿ ರಾಜಣ್ಣ ) ಅವರಿಗೆ ಕರುನಾಡ ರಕ್ಷಕ ರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ ಸನ್ಮಾನಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪದಾಧಿಕಾರಿಗಳು, ಹಾಗೂ ತಾಲೂಕು ಪದಾಧಿಕಾರಿಗಳು ಕರವೇ ಜಿಲ್ಲಾ ಅಧ್ಯಕ್ಷ ಜಿ ರಾಜಶೇಖರ್ ಅವರಿಗೆ ಕರುನಾಡ ರಕ್ಷಕ ರತ್ನ ಪ್ರಶಸ್ತಿ ಲಭಿಸಿರೋದು ನಮಗೆ ಬಹಳ ಹೆಮ್ಮೆ ಹಾಗೂ ಸಂತೋಷದಾಯಕ ಎಂದರು.