ಹಗರಿಬೊಮ್ಮನಹಳ್ಳಿ

ಜೆಸ್ಕಾಂ ವಿಭಾಗೀಯ ಉಗ್ರಾಣ ಸ್ಥಳಾಂತರ, ಸಿಬ್ಬಂದಿ ವರ್ಗಾವಣೆಗೆ ಒತ್ತಾಯಿಸಿ ಕರವೇ ಮನವಿ

ಜೆಸ್ಕಾಂ ವಿಭಾಗೀಯ ಉಗ್ರಾಣ ಸ್ಥಳಾಂತರ, ಸಿಬ್ಬಂದಿ ವರ್ಗಾವಣೆಗೆ ಒತ್ತಾಯಿಸಿ ಕರವೇ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 21: ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಜೆಸ್ಕಾಂ ವಿಭಾಗೀಯ ಕಚೇರಿಯ ಉಗ್ರಾಣ ಸ್ಥಳಾಂತರಕ್ಕೆ ಒತ್ತಾಯಿಸಿ ಮತ್ತು ಐದರಿಂದ ಹದಿನೈದು ವರ್ಷದವರೆಗೆ ಉಪವಿಭಾಗ, ವಿಭಾಗೀಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ವರ್ಗಾವಣೆಗೊಳಿಸುವಂತೆ ನಾರಾಯಣ ಗೌಡರ ಕರವೇ ತಾಲೂಕು ಘಟಕವು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಬಳ್ಳಾರಿ ವಿಭಾಗದ ಅಧಿಕ್ಷಕ ಅಭಿಯಂತರ ವೆಂಕಟೇಶಲು ಅವರಿಗೆ ಸೋಮವಾರ ಮನವಿ ನೀಡಿತು. 

ಈ ವೇಳೆ ಕರವೇ ತಾಲೂಕು ಘಟಕದ ಅಧ್ಯಕ್ಷ ಎನ್‌.ಎಂ.ಗೌಸ್ ಮಾತನಾಡಿ ಹೊಸಪೇಟೆಯಿಂದ ಜೆಸ್ಕಾಂ ವಿಭಾಗೀಯ ಕಚೇರಿ ಹಗರಿಬೊಮ್ಮನಹಳ್ಳಿಗೆ ಸ್ಥಳಾಂತರಗೊಂಡು ಇದು ವರ್ಷ ಕಳೆದರೂ ಅಲ್ಲಿರುವ ಉಗ್ರಾಣ ಇನ್ನು ಸ್ಥಳಾಂತವಾಗಿರುವುದಿಲ್ಲ, ಈ ವಿಷಯವಾಗಿ ಹಲವುಬಾರಿ ಸ್ಥಳಾಂತರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ಸ್ಥಳಾಂತರ ಮಡಿಸಬೇಕು ಹಾಗೂ ಇಲ್ಲಿನ ವಿಭಾಗೀಯ ಹಾಗೂ ಉಪವಿಭಾಗೀಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ನೌಕರರ ದಬ್ಬಾಳಿಕೆ ಹೆಚ್ಚಾಗಿದೆ ಇದಕ್ಕೆ ಸಂಭಂಧಿಸಿದಂತೆ ಪ್ರತಿಭಟನೆಗಳು ಮಾಡಲಾಗಿದೆ ಕ್ರಮ ಕೈಗೊಂಡಿಲ್ಲ, ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. 

 ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಕಾರ್ಯದರ್ಶಿ ಬಿ.ಎಂ.ಎಸ್‌.ಮಂಜುನಾಥ್, ಖಜಾಂಚಿ ಕೊಟ್ರೇಶ್ ಇದ್ದರು. 


ಸುದ್ದಿ ಓದಿ