ಬಳ್ಳಾರಿ

ಕರ್ನಾಟಕದ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಕರವೇ ಕಾರ‌್ಯ ಶ್ಲಾಘನೀಯ: ನಿಷ್ಠಿ ರುದ್ರಪ್ಪ

ಕರ್ನಾಟಕದ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಕರವೇ ಕಾರ‌್ಯ ಶ್ಲಾಘನೀಯ: ನಿಷ್ಠಿ ರುದ್ರಪ್ಪ

ಬಳ್ಳಾರಿ 01: ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವನ್ನು ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್ ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಯುವ ಮುಖಂಡರಾದ ವೆಂಕಟೇಶ್ ಪ್ರಸಾದ್ ಇವರು ಕನ್ನಡ ಧಜ್ವಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕ.ಸಾ.ಪ. ಅವಳಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರ​‍್ಪ ನವರು ಮಾತನಾಡುತ್ತಾ ಕರ್ನಾಟಕದ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಹಾಗೂ ಬಳ್ಳಾರಿ ಗ್ರಾಮಾಂತರ ಠಾಣೆಯ ಜನಪರ ಅಧಿಕಾರಿಯಾದ ಸಿ.ಪಿ.ಐ. ಎನ್‌.ಸತೀಶ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್, ಕರ್ನಾಟಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಮಗ್ರ ಕರ್ನಾಟಕದ ಅಭಿವೃದ್ಧಿ ಅನ್ನುವ ಪೋಷವಾಕ್ಯದಡಿ ಕರ್ನಾಟಕದ ಎಲ್ಲಾ ಭಾಗಗಳ ಸಮಸ್ಯೆಗಳಿಗೂ ಸ್ಪಂದಿಸುವ, ಪ್ರತೀ ವರ್ಷದಂತೆ ಜಿಲ್ಲಾಡಳಿತ ಸಹಕಾರದಿಂದ ಹಂಪಿಯಿಂದ ಬಳ್ಳಾರಿಗೆ ಕನ್ನಡ ಭುವನೇಶ್ವರಿ ಜ್ಯೋತಿ ಮೆರವಣಿಗೆ ಮೂಲಕ ತಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕರಾದ ನಾರಾ ಭರತ್‌ರೆಡ್ಡಿ ಇವರ ಸಮ್ಮುಖದಲ್ಲಿ ಜಿಲ್ಲಾಡಳತಕ್ಕೆ ಹಸ್ತಾಂತರಿಸಲಾಯಿತು.   

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷರಾದ ಡಿ.ಕಗ್ಗಲ್ ಶಂಕರ್, ಕೆ.ಎಂ.ಶಿವಕುಮಾರ್, ಜಿ.ತಿಪ್ಪಾರೆಡ್ಡಿ, ಮೃತ್ಯುಂಜಯಸ್ವಾಮಿ, ಸಂಗನಕಲ್ಲು ಹನುಮಂತರೆಡ್ಡಿ, ಮೋಕಾ ಪಂಪನಗೌಡ, ಶಬರಿ ರವಿ, ಹಬ್ಬಳಿ ರಾಜ್, ತೋಟದ ವಿರೇಶ್, ದೇವರಾಜ, ಜಂಗ್ಲಿಸಾಬ್, ಸಿಂಧಿಗೇರಿ ಗೋವಿಂದ, ಶಂಕರಬಂಡೆ ರಾಜೇಶ್, ಗೆಣಿಕೆಹಾಳ್ ವಿರೇಶ್, ಬಸವರಾಜ, ಮಸ್ಕಿ ಮಹಾಂತೇಶ್, ಶಿವು, ಮಲ್ಲಿಕಾರ್ಜುನ ಚಾನಾಳ್,  ಮುಂತಾದವರು ಉಪಸ್ಥಿತರಿದ್ದರು 


ಸುದ್ದಿ ಓದಿ