ಬಳ್ಳಾರಿ

ಕರಾಟೆ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲಿ ಉತ್ತಮವಾದ ಅನೂಕೂಲವಾಗಲಿದೆ: ಕಟ್ಟೆಸ್ವಾಮಿ

ಕರಾಟೆ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲಿ ಉತ್ತಮವಾದ ಅನೂಕೂಲವಾಗಲಿದೆ: ಕಟ್ಟೆಸ್ವಾಮಿ

ಬಳ್ಳಾರಿ 07: ನಗರದ  ಟ್ರೆಡಿಶನಲ್ ಶೋಟೋಕನ್ ಕರಾಟೆ  ಅಕಾಡಾಮಿ ಕರ್ನಾಟಕ ವತಿಯಿಂದ  ಸಂತ ಜಾನರ ಪ್ರೌಢಶಾಲಾ ಮೈದಾನದಲ್ಲಿ 350ಕ್ಕೂ ಹೆಚ್ಚು ಕರಾಟೆ ಪರೀಕ್ಷೆ ಮತ್ತು ಬೆಲ್ಟ್‌ ವಿತರಣಾ ಸಮಾರಂಭ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಬೆಲ್ಟ್‌ ಪರೀಕ್ಷೆ ನಡೆಸಲಾಯಿತು. ಈ ಬೆಲ್ಟ್‌ ಪರೀಕ್ಷೆಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹರಿಶಂಕರ್ ಅಗರ್ವಾಲ್ ರವರು ಅಧ್ಯಕ್ಷರು ಬಳ್ಳಾರಿ ಜಿಲ್ಲಾ ಕರಾಟೆ ಸ್ಪೋರ್ಟ್ಸ ಅಸೋಸಿಯೇಷನ್ ಹಾಗೂ ಶಾಂತ ಸಲನ್ ಪ್ರಾಂಶುಪಾಲರು ಸಂತ ಜಾನ ಪ್ರೌಢಶಾಲೆ ಹಾಗೂ ಇಂದ್ರೇಶ್  ಕಾರ್ಯಾಕ್ರಮ ಕುರಿತು ಹರಿಶಂಕರ್ ರವರು ಮಾತಾಡಿದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಲ್ಲಿ ಕರಾಟೆ ತರಬೇದಾರರನ್ನು ಕಡ್ಡಾಯವಾಗಿ ನೇಮಿಸಬೇಕು. ದೈಹಿಕ ಶಿಕ್ಷಣ ಯಾವ ರೀತಿ ಸಿಕ್ತಾ ಇದೆಯೋ ಆ ರೀತಿ ಕರಾಟೆ ಆತ್ಮ ರಕ್ಷಣೆ ತರಬೇತಿ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ದೈಹಿಕ ಮಾನಸಿಕವಾಗಿ ಕರಾಟೆ ತರಬೇತಿ ಬಹಳ ಅತ್ಯವಶ್ಯಕವಾಗಿದೆ  ಎಂದು ಹೇಳಿದರು. 

 ಶಾಂತಸೆಲಂ ನಗರದಲ್ಲಿ   ಯಾವುದೇ ಕ್ರೀಡೆಗೆ ಇಷ್ಟು ವಿದ್ಯಾರ್ಥಿಗಳು ನಾನು ಯಾವತ್ತು ನೋಡಿಲ್ಲ ವಿಶೇಷ ಕರಾಟೆಯಲ್ಲಿ ಸುಮಾರು ಇಷ್ಟು ವಿದ್ಯಾರ್ಥಿಗಳ ಜೀವನಗಳಲ್ಲಿ ವಿದ್ಯಬ್ಯಾಸದ  ಜೊತೆ ಕರಾಟೆ ಅತ್ಯಶವಕವಾಗಿದೆ. ಇದು ಶಿಸ್ತು ಸಂಯಮ ದೈಹಿಕ ಮಾನಸಿಕವಾಗಿ ಸದೃಢನಾಗಿ ಮಾಡಲು ಬಹಳ ಉಪಯುಕ್ತವಾಗಲಿದೆ ಕರಾಟೆ ಎಂದು ಹೇಳಿದರು. ನಂತರದಲ್ಲಿ ಕಟ್ಟೆಸ್ವಾಮಿಯವರು ಮಾತನಾಡಿ  ಕರಾಟೆ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲಿ ಉತ್ತಮವಾದ ಅನೂಕೂಲವಾಗಲಿದೆ ಎಂದು ಈ ಕರಾಟೆ  ತರಬೇತಿಗೆ ಪ್ರೋತ್ಸಹಿಸುತ್ತಿರುವ  ಎಲ್ಲಾ ಪೋಷಕರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಕರಾಟೆ ತರಬೇತಿದಾರಾದ ಹುಲಿಗಣ್ಣ, ಜಡೇಶ್, ಪ್ರಸಾದ್ ಹನುಮಂತ,  ಗುರುನಾಥ್, ಯುವರಾಜ್, ನಬಿಸಾಬ್, ರಿಜ್ವಾನಾ, ವೆಂಕಟ ಲಕ್ಷ್ಮ ಇನ್ನು ಅನೇಕ ಕರಾಟೆ ತರಬೇತುದಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ