ಹಗರಿಬೊಮ್ಮನಹಳ್ಳಿ

ಕರಾಟೆ ಮೌಲ್ಯಯುತ ಶಿಕ್ಷಣವಾಗಿದೆ : ಡಾ.ಬಂಡ್ರಿ ವಿಶ್ವನಾಥ್

ಕರಾಟೆ ಮೌಲ್ಯಯುತ ಶಿಕ್ಷಣವಾಗಿದೆ : ಡಾ.ಬಂಡ್ರಿ ವಿಶ್ವನಾಥ್

ಹಗರಿಬೊಮ್ಮನಹಳ್ಳಿ 14 : ಕರಾಟೆಯಿಂದ ಸಿಸ್ತು ಬಧ್ಧ ಜೀವನ ರೂಪಿಸಿಕೊಳ್ಳುವುದರ ಜೊತೆ ಮೌಲ್ಯಯುತ ಶಿಕ್ಷಣವಾಗಿದೆ ಎಂದು ಪಟ್ಟಣದ ಖ್ಯಾತ ವೈದ್ಯ ಡಾ.ಬಂಡ್ರಿ ವಿಶ್ವನಾಥ್ ಹೇಳಿದರು. 

ತಾಲೂಕಿನ ಬಂಡಿಹಳ್ಳಿ ಗುಡ್ಡದ ಬಳಿ ಏರಿ​‍್ಡಸಿದ್ದ ಟ್ರಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದು ಕೇವಲ ಹಣದಿಂದ ಜೀವನ ಅಸಾಧ್ಯ ಮೊದಲಿಗೆ ಉತ್ತಮ ಆರೋಗ್ಯ ಹಾಗೂ ಸುಸಂಸ್ಕೃತಿ ಅತ್ಯವಶ್ಯಕವಾಗಿದೆ , ಉತ್ತಮ ಆರೋಗ್ಯವಿರದಿದ್ದರೆ ಎಷ್ಟು ಹಣವಿದ್ದರೂ ವ್ಯರ್ಥ,ಇಂದು ನಮ್ಮ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಆತ್ಮ ರಕ್ಷಾಣಾ ಕಲೆಯನ್ನು ಉಣಬಡಿಸುತ್ತಿರುವ ಈ ಅಕಾಡೆಮಿಯ ಸದಸ್ಯರು ನಿಜಕ್ಕೂ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಮುಂದಿನ  ದಿನಗಳಲ್ಲಿ ಈ ಅಕಾಡೆಮಿಗೆ ಸದಾ ಸಾಥ್ ನೀಡುವುದಾಗಿ ಭರವಸೆ ನೀಡಿದರು. 

ಕರ್ನಾಟಕ ಕರಾಟೆ ಡೊ ಸ್ಪೋರ್ಟ್ಸ್‌ ಅಸೋಷಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ ಮಾತನಾಡಿ ಕರಾಟೆ ಒಂದು ಸ್ವಾಭಿಮಾನಿ ಕಲೆಯಾಗಿದೆ, ಈ ಕಲೆಯಲ್ಲಿ ಹೊಡೆತ ಮತ್ತು ತಡೆತಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರಬೇಕು, ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕಲೆಯುವಂತಹ ಕಲೆ ಕರಾಟೆಯಾಗಿದೆ,ಇದು ಕೇವಲ ಆತ್ಮ ರಕ್ಷಣಾ ಕಲೆಯಾಗಿರದೆ ದೈಹಿಕ ಹಾಗೂ ಮಾನಸಿಕ,ಮನೋಜ್ಞಾನದ ಬಲವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ,ಒಲಂಪಿಕ್ ಗೇಮ್‌ನಲ್ಲಿಯೂ ಕರಾಟೆ ಸ್ಥಾನ ಪಡೆದಿದೆ, ಕರಾಟೆಯಲ್ಲಿ ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿಯೂ ಸಾಧನೆ ಮಾಡಬಹುದಾಗಿದೆ ಎಂದರು. 

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ಮಾತನಾಡಿ ಕಳೆದ ಎರೆಡು ವರ್ಷಗಳ ಕಾಲ ಕರೋನಾ ಹೊಡೆತಕ್ಕೆ ಕರಾಟೆ ತರಗತಿಗಳು ನಡೆಯದಿದ್ದರೂ ,ಕೆಲ ತಿಂಗಳುಗಳಲ್ಲಿಯೇ ಮಕ್ಕಳು ಉತ್ತಮ ಅಭ್ಯಾಸ ಮಾಡಿ ಉತ್ತಮ ಪ್ರದರ್ಶನ ಪಡೆಯುವಲ್ಲಿ ತರಬೇತುದಾರ ಸುಭಾಶ್ ಮುತ್ಕೂರ್ ಹಾಗೂ ಸದಸ್ಯರು ಪಟ್ಟ ಶ್ರಮ ನೀಡಿದ ತರಬೇತಿ ನಿಜಕ್ಕೂ ಅಮೋಘವೆಂದರು.ಸುಭಾಶ್ ಅವರು ತಮಗಾಗಿ ಮಾಡಿಕೊಂಡ ಆಸ್ತಿ ಎಂದರೆ ಅದು ಕೇವಲ ಮಕ್ಕಳಿಗೆ ನೀಡಿದ ತರಬೇತಿಯಾಗಿದೆ,ಕೊಡುಗೈ ದಾನಿಗಳಿಂದ ಉತ್ತಮ ಕಟ್ಟಡವನ್ನು ರೂಪಿಸಲು ಮುಂದಾಗುವ ಭರವಸೆಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಕನ್ನಡದ ಮೇರು ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ  ಶ್ರಧ್ಧಾಂಜಲಿಯನ್ನು ಅರ​‍್ಿಸಲಾಯಿತು. 

ಈ ಸಂಧರ್ಭದಲ್ಲಿ ಕರ್ನಾಟಕ ಕರಾಟೆ ಡೊ ಸ್ಪೋರ್ಟ್ಸ್‌ ಅಸೋಷಿಯೇಷನ್‌ನ ರಾಜ್ಯಾಧ್ಯಕ್ಷ ಶಿವಕುಮಾರ ಶಾರದಳ್ಳಿ,ಟ್ರಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿಯ ಅಧ್ಯಕ್ಷ ಗುಂಡ್ರು ಹನುಮಂತಪ್ಪ, ಟ್ರಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿಯ ಕೊಪ್ಪಳದ ಅಧ್ಯಕ್ಷ ಮೌನೇಶ್ ವಡ್ಡಟ್ಟಿ, ವಿಜಯನಗರದ ಹಂಸ ಟೂರ​‍್ಸ‌ ಅಂಡ್ ಟ್ರಾವೆಲ್ಸ್‌ನ ಮಾಲೀಕ ವಿ.ಶಿವಪ್ರಕಾಶ್, ಮುಖಂಡ ಎಣ್ಣಿ ಬಾಷಾ, ಕರಾಟೆ ತರಬೇತಿ ಪಡೆಯುತ್ತಿರುವ ಮಕ್ಕಳು ಪೋಷಕರು ಇದ್ದರು. 

ಕಾರ್ಯಕ್ರಮವನ್ನು ಶಿವಶಂಕ್ರಯ್ಯ ನಿರೂಪಿಸಿದರು,ಕೆ.ರಾಮಣ್ಣ ಸ್ವಾಗತಿಸಿದರೆ, ಕರಾಟೆ ತರಬೇತುದಾರ ಸುಭಾಷ್ ಮುತ್ಕೂರು ವಂದಿಸಿದರು. 


ಸುದ್ದಿ ಓದಿ