ಬಳ್ಳಾರಿ

ನಗರದ ಅಂಗಡಿ ಮುಂಗಟ್ಟುಗಳ ನಾಮಫಲಕಗಳಿಗೆ ಕನ್ನಡ ಕಡ್ಡಾಯ

ನಗರದ ಅಂಗಡಿ ಮುಂಗಟ್ಟುಗಳ ನಾಮಫಲಕಗಳಿಗೆ ಕನ್ನಡ ಕಡ್ಡಾಯ

ಬಳ್ಳಾರಿ 18: ನಗರದ ಮಹಾನಗರ ಪಾಲಿಕೆಯ ಆಯುಕ್ತರಿಗೆ ಅಂಗಡಿ ಮುಂಗಟ್ಟುಗಳ ನಾಮ ಫಲಕಗಳಿಗೆ ಕನ್ನಡ ಕಡ್ಡಾಯವಾಗಿ ಇರಬೇಕೆಂದು ಕರ್ನಾಟಕ ಜನ ಸೈನ್ಯದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.  

ಕರ್ನಾಟಕ ಜನ ಸೈನ್ಯ ರಾಜ್ಯಾಧ್ಯಕ್ಷರಾದ ಕೆ ಎರಿಸ್ವಾಮಿ ರವರು ಮಾತನಾಡುತ್ತಾ, ನಗರದ ಎಲ್ಲಾ ವ್ಯಾಪಾರ ವಹಿವಾಟು ಮತ್ತು ಸಂಘ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಮಾಯವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ವಿಷಯ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಜನಸೈನ್ಯದ ವತಿಯಿಂದ ಸಾಕಷ್ಟು ಬಾರಿ ಹೋರಾಟಗಳ ಮುಖಾಂತರ ಮನವಿ ಮಾಡಿದರೂ ಕೂಡಾ ಯಾವುದೇ ರೀತಿಯ ಪ್ರಯೋಜನ ಕಂಡು ಬಂದಿರುವುದಿಲ್ಲ. ಅಷ್ಟಲ್ಲದೇ ವರ್ಷಕ್ಕೊಮ್ಮೆ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ಕರೆದಾಗ ಈ ವಿಷಯ ಕುರಿತು ಪ್ರಸ್ತಾವಿಸಿದಾಗ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡದರೂ ಕೂಡಾ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಲ್ಲದೇ ನಾವು ವೈಯಕ್ತಿಕವಾಗಿ ತಮ್ಮ ಕಛೇರಿಗೆ ಭೇಟಿ ನೀಡಿ ತಮ್ಮ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಾಕಷ್ಟು ಬಾರಿ ಈ ವಿಷಯ ಕುರಿತು ಚರ್ಚೆ ಮಾಡಿದರೂ ಕೂಡಾ ಯಾವುದೇ ರೀತಿಯ ಕ್ರಮ ವಹಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇದೇ ತಿಂಗಳು ಡಿಸೆಂಬರ್ ಅಂತ್ಯದೊಳಗೆ ನಗರದ ಎಲ್ಲಾ ನಾಮಫಲಕಗಳಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಶೇ. 70ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿಬೇಕು. ಇಲ್ಲದಿದ್ದಲ್ಲಿ ಜನವರಿ ಮೊದಲ ವಾರದಲ್ಲಿ ಕರ್ನಾಟಕ ಜನಸೈನ್ಯದ ವತಿಯಿಂದ ನಾಮಫಲಕಗಳಿಗೆ ಕಪ್ಪು ಮಸಿ ಬಳಸುವುದಾಗಿ, ತರುವಾಯ  ಯಾವುದಾದರೂ ಅಹಿತಕರ ಘಟನೆಗಳು ನಡೆದಲ್ಲಿ ತಾವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  

ಕರ್ನಾಟಕ ಜನ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎರಿ​‍್ರಸ್ವಾಮಿ, ಉಪಾಧ್ಯಕ್ಷ ಬಿ ಹೊನ್ನೂರ​‍್ಪ, ಫಯಾಜ್ ಬಾಷಾ, ಪ್ರದೀಪ್ ಉಂಡೇಕರ್, ನಾಸೀರ್, ಮೊಹಮ್ಮದ್ ಅಲಿ, ಹೊನ್ನೂರ್ ಸ್ವಾಮಿ, ಸುಹೆಲ್, ಇಬ್ರಾಹಿಂ, ಕೈಸರ್, ಫಿರೋಜ್ ಖಾನ್ , ವಲಿಸಾಬ್, ಮತ್ತು ವಿವಿಧ ಕಾರ್ಯಕರ್ತರು ಸಂಘದ ಸದಸ್ಯರು ಇತರರು ಆಗಮಿಸಿದ್ದರು. 


ಸುದ್ದಿ ಓದಿ