ಮಹಲಿಂಗಪುರ

'ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌' ವಿಶೇಷ ಉಪನ್ಯಾಸ ಕಾರ್ಯಕ್ರಮ

'ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌' ವಿಶೇಷ ಉಪನ್ಯಾಸ ಕಾರ್ಯಕ್ರಮ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿಯವರಿಂದ “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌” ವಿ

ಮಹಾಲಿಂಗಪುರ16:  ಅಕ್ಷರ ಜ್ಞಾನವಿಲ್ಲದ ಹಳ್ಳಿಯ ಮೂಲೆಯೊಂದರಲ್ಲಿ ಸಣ್ಣ ಪುಟ್ಟ ಕವಿತೆಗಳನ್ನು ಬರೆಯುತ್ತಿದ್ದ ನನಗೆ ಆ ಬರವಣಿಗೆಯಿಂದಲೆ ಇಂದು ಹಲವಾರು ಪುಸ್ತಕಗಳನ್ನು ಬರೆದು ಪ್ರಶಸ್ತಿ ಪಡೆಯುವಂತಾಯಿತು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ ಹೇಳಿದರು. 

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗದ ವತಿಯಿಂದ ಕನ್ನಡ ವರ್ಷಾಚರಣೆ ಅಂಗವಾಗಿ “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌” ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅಶೋಕ ನರೋಡೆ ಮಾತನಾಡಿ, ಹಂತಿಪದ, ಜಾನಪದ ಹಾಡು ಜೊತೆಗೆ ಯಾವುದೇ ವಸ್ತು ವಿಷಯಗಳ ಮೇಲೆ ತಕ್ಷಣ ಹಾಡು ಕಟ್ಟಿ ಹಾಡುವ ಕಂಚಿನ ಕಂಠದ ಗಾಯಕ ಸಿದ್ದಪ್ಪ ಬಿದರಿ ಅವರುಸಾಹಿತ್ಯದ ಸದಭಿರುಚಿ ಹೊಂದಿರುವ ಇವರ ಸಾಧನೆ ಅಪಾರ ಎಂದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ನಿವೃತ್ತ ಪ್ರಾಧ್ಯಾಪಕ ಎ. ಎಸ್‌. ದಾಮನ್ನವರ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ನರೋಡೆ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಪೂಜಾ ಕಲ್ಯಾಣಶೆಟ್ಟಿ, ಉಪನ್ಯಾಸಕ ಆಯ್‌.ಸಿ.ಶಿರೋಳ ಹಲವರು ಇದ್ದರು.  

ಸುದ್ದಿ ಓದಿ