ಮಹಲಿಂಗಪುರ

ವಿದ್ಯಾರ್ಥಿ ಆಲೋಚನಾ ಅಭಿವೃದ್ಧಿಯ ಪಠ್ಯಕ್ರಮ ಅಗತ್ಯ : ಪ್ರೊ.ಎಸ್.ಎಂ.ಗಂಗಾಧರಯ್ಯ

ವಿದ್ಯಾರ್ಥಿ ಆಲೋಚನಾ ಅಭಿವೃದ್ಧಿಯ ಪಠ್ಯಕ್ರಮ ಅಗತ್ಯ : ಪ್ರೊ.ಎಸ್.ಎಂ.ಗಂಗಾಧರಯ್ಯ

ಮಹಾಲಿಂಗಪುರ19 ವಿದ್ಯಾರ್ಥಿ ಆಲೋಚನಾ ಕ್ರಮಕ್ಕೆ ಪ್ರೋತ್ಸಾಹ ನೀಡುವ ಪಠ್ಯಕ್ರಮ ರಚನೆಯಾಗಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳ ಜ್ಞಾನಾರ್ಜನೆ ಸಾಧ್ಯ ಎಂದು ಬೆಳಗಾವಿಯ ಶಾಸ್ತ್ರೀಯ ಕನ್ನಡ ಭಾಷೆ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ಎಂ.ಗಂಗಾಧರಯ್ಯ ಹೇಳಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ, ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಾಸ್ತ್ರೀಯ ಕನ್ನಡ ಭಾಷೆ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ಕಾಯಕ ವರ್ಷಾಚರಣೆ ಹಿನ್ನೆಲೆಯಲ್ಲಿ ಸ್ನಾತಕ ಕನ್ನಡ ಪಠ್ಯ ಸಿದ್ಧತೆ ರಚನೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಕೇವಲ ಭಾಷೆಯಲ್ಲ ಅದೊಂದು ಜ್ಞಾನ, ಸಂಸ್ಕೃತಿ. ಆದ್ದರಿಂದ ಕನ್ನಡ ಪಠ್ಯಸಿದ್ಧತೆ ಚಿಂತನೆ ಕ್ರಮಗಳನ್ನು ವಿಸ್ತರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರೊ.ಎಸ್.ಎಂ.ಗಂಗಾಧರಯ್ಯ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರು, ಶಾಸ್ತಿ ್ರೀಯ ಕನ್ನಡ ಭಾಷೆ ಅಧ್ಯಯನ ಸಂಸ್ಥೆಯ ಬೋಧಕ ಸಿಬ್ಬಂದಿ ವರ್ಗದವರು ಪಠ್ಯಸಿದ್ಧತೆ ರಚನೆ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಮತ್ತು ಪಠ್ಯಕ್ರಮದ ಕುರಿತು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಮಾತನಾಡುತ್ತಾ ಕಾರ್ಯಾಗಾರ ಸಣ್ಣದಾಗಿರಬಹುದು ಭವಿಷ್ಯದಲ್ಲಿ ಇದರ ಪರಿಣಾಮ ಬಹಳ ದೊಡ್ಡದಾಗಿರುತ್ತದೆ ಎಂದು ಕಾರ್ಯಾಗಾರದ ಮಹತ್ವ ತಿಳಿಸಿದರು.  

ಬೆಳಗಾವಿ ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಆಯ್.ತಿಮ್ಮಾಪುರ, ಗುಳೇದಗುಡ್ಡ ಪದವಿ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಬಸುಪಟ್ಟದ, ಕಾರ್ಯಕ್ರಮದ ಸಂಯೋಜಕ ಡಾ.ಅಶೋಕ ನರೋಡೆ, ಡಾ.ಆಶಾರಾಣಿ ಚಿನಗುಂಡಿ,  ಡಾ.ಶಂಕರ ಕೋಳಿ ಹಲವರು ಇದ್ದರು.


ಸುದ್ದಿ ಓದಿ