ಬಳ್ಳಾರಿ

ಕನ್ನಡ-ತಮಿಳು ಭಾಷೆಗಳಲ್ಲಿ ಪರಸ್ಪರ ಆಪ್ತ ಸಂಬಂಧ: ಡಾ. ಜಯಲಲಿತಾ

ಕನ್ನಡ-ತಮಿಳು ಭಾಷೆಗಳಲ್ಲಿ ಪರಸ್ಪರ ಆಪ್ತ ಸಂಬಂಧ: ಡಾ. ಜಯಲಲಿತಾ

ಲೋಕದರ್ಶನ ವರದಿ 

 ಬಳ್ಳಾರಿ 03: ಕನ್ನಡ-ತಮಿಳು ಭಾಷೆಗಳು ಪ್ರಾಚೀನ ಕಾಲದಿಂದಲೂ ಪರಸ್ಪರ ಆಪ್ತವಾದ ಸಂಬಂಧವನ್ನು ಹೊಂದಿವೆ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತದ ಪ್ರಭಾವವಿರುವಂತೆ ಸ್ಥಳೀಯವಾದ ದ್ರಾವಿಡ ಮೂಲದ ಅನೇಕ ಶಾಸ್ತ್ರ ವಿಚಾರಗಳು ಪ್ರಯೋಗಗೊಂಡಿರುವುದನ್ನು ಕಾಣಬಹುದು’ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಯಲಲಿತಾ ಅವರು ಹೇಳಿದರು.  

ಅವರು ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ವೈ. ಕೆ. ರಾಮಯ್ಯ ದತ್ತಿ ನಿಧಿ ಮತ್ತು ವಿಜಯನಗರ ಮಹಾವಿದ್ಯಾಲಯದ ಕರ್ನಾಟಕ ಸಂಘವು ಜಂಟಿಯಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ‘ಕನ್ನಡ-ತಮಿಳು ಸಾಹಿತ್ಯ ಸಂಬಂಧ’ ಎಂಬ ವಿಷಯವನ್ನು ಕುರಿತು ಮಾತನಾಡುತ್ತಿದ್ದರು. ಮುಂದುವರೆದು ಅವರು ಕನ್ನಡ ಕಾವ್ಯಗಳಲ್ಲಿ ಪ್ರಯೋಗಗೊಂಡ ಅಲಂಕಾರ, ಪ್ರಾಸ, ಛಂದಸ್ಸು ಇತ್ಯಾದಿ ಶಾಸ್ತ್ರ ವಿಚಾರಗಳನ್ನು ಉದಾಹರಣೆ ಸಹಿತವಾಗಿ ವಿಶ್ಲೇಷಿಸಿದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ ಕುಂಟಾರ್ ಅವರು ‘ಕನ್ನಡಹಿತಮಿಳು ಬಾಂಧವ್ಯವು ಕೇವಲ ಸಾಹಿತ್ಯಕಷ್ಟೇ ಸೀಮಿತವಾಗಿ ಉಳಿದಿಲ್ಲ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಸಂಬಂಧವನ್ನು ಬೆಳೆಸಿದೆ. ಇವುಗಳನ್ನು ‘ತೌಲನಿಕ ಅಧ್ಯಯನಗಳ ಮೂಲಕ ಆಸಕ್ತರು ಇನ್ನಷ್ಟು ನಿಖರವಾಗಿ ಗುರುತಿಸಬೇಕಾಗಿದೆ’ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಕಾಲೇಜಿನ ಡಾ. ಪ್ರಭುಗೌಡ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಡಾ. ಮೃತ್ಯುಂಜಯ ರುಮಾಲೆ ಅವರು ಎಲ್ಲರನ್ನು ಸ್ವಾಗತಿಸಿದರು. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರರಾದ ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು ಧನ್ಯವಾದ ಸಮರ​‍್ಿಸಿದರು. ಬಸವರಾಜ ಮೇಟಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. 


ಸುದ್ದಿ ಓದಿ