21ರಂದು ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ
ಲೋಕದರ್ಶನ ವರದಿ
ಬಳ್ಳಾರಿ 09: ಇದೇ 21ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಯಣ್ಣ ಅವರು ದಿ. 09ರಂದು ಬೆಳಿಗ್ಗೆ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಮತ್ತು ಸಾರ್ವಜನಿಕರ ಪರಿಷತ್ತನ್ನಾಗಿ ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಸಬಲತೆಯನ್ನು ತರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ, ಅಲ್ಲದೇ ಪರಿಷತನ್ನು ನೂತನ ತಂತ್ರಜ್ಞಾನದೊಂದಿಗೆ ಆಧುನೀಕರಣಗೊಳಿಸುವುದಾಗಿ, ಈ ನಿಟ್ಟಿನಲ್ಲಿ ಹಲವಾರು ಕಾರ್ಯಯೋಜನೆಗಳು ಈ ಹಿಂದೆಯೇ ಬೆಂಗಳೂರು ಜಿಲ್ಲೆ, ನಗರ ಅಧ್ಯಕ್ಷರನ್ನಾಗಿ ಕಾರ್ಯನಿರ್ವಹಿಸಿ, ರಾಜ್ಯಾದ್ಯಂತ ಜನಮನ್ನಣೆ ಗಳಿಸಿರುವುದಾಗಿ, ಆದುದರಿಂದ ಹಿರಿಯರು, ಬುದ್ಧಿಜೀವಿಗಳು, ಸಾಹಿತಿಗಳ ಒತ್ತಾಯ ಮೇರೆಗೆ ಸ್ಪರ್ಧಿಸಿರುವುದಾಗಿ ವಿವರಿಸಿದರು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸದಸ್ಯರೆಲ್ಲರೂ ನನಗೆ ಮತ ನೀಡಿ ವಿಜಯಶಾಲಿಯನ್ನಾಗಿಸಿ, ಸಾಹಿತ್ಯ ಸೇವೆಗೆ ಅನುವು ಮಾಡಿಕೊಡಬೇಕಾಗಿ ವಿನಂತಿಸಿದರು.
ಕರ್ನಾಟಕ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರಿ್ರಸ್ವಾಮಿ ಅವರು ಮಾತನಾಡುತ್ತಾ ಮಾಯಣ್ಣನವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ಬೆಂಗಳೂರು ನಗರ ಅಧ್ಯಕ್ಷ ಸಂದರ್ಭದಲ್ಲಿ ಹಲವಾರು ಕನ್ನಡಪರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಕನ್ನಡ ನಾಡು, ನುಡಿ, ನೆಲ, ಭಾಷೆ, ಸಂಸ್ಕೃತಿ, ಸಂಪ್ರದಾಯ ಬೆಳೆಸಿಕೊಳ್ಳುತ್ತಾ ನಾಡಿನ ಗಡಿ ವಿಚಾರಕ್ಕೆ ತೊಂದರೆಯಾದಾಗ ನಮ್ಮ ಜೊತೆಗೆಯಲ್ಲೇ ನಿಂತು ಹೋರಾಟ ಮಾಡುವ ಮುಖಾಂತರ ಕನ್ನಡ ಸೇವೆ ನಿರಂತರ ಸಲ್ಲಿಸುತ್ತಿದ್ದಾರೆ. ಹೀಗಾಗಿ ನಾವು ರಾಜ್ಯಾದ್ಯಂತ ಕರ್ನಾಟಕ ಜನಸೈನ್ಯ ವತಿಯಿಂದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಕಪ್ಪಗಲ್ ರಸೂಲ್ಸಾಬ್, ಕರ್ನಾಟಕ ಜನಸೈನ್ಯದ ಫಾರೂಕ್, ಶಫಿ, ಫಯಾಜ್ ಭಾಷ, ನಾಸೀರ್, ಇಬ್ರಾಹಿಂ, ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.