ಹಗರಿಬೊಮ್ಮನಹಳ್ಳಿ

ಕನ್ನಡ ರಾಜ್ಯೋತ್ಸವ: ಜೆಡಿಎಸ್‌ನಿಂದ ಕನ್ನಡ ಬಾವುಟ ವಿತರಣೆ

ಕನ್ನಡ ರಾಜ್ಯೋತ್ಸವ: ಜೆಡಿಎಸ್‌ನಿಂದ ಕನ್ನಡ ಬಾವುಟ ವಿತರಣೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 30: ಪಟ್ಟಣದ ಕೂಡ್ಲಗಿ ವೃತ್ತದಲ್ಲಿ ಜೆಡಿಎಸ್ ಪಕ್ಷದಿಂದ ರಾಜ್ಯೋತ್ಸವದ ನಿಮಿತ್ತಾ ಮನೆ ಮನೆಯ ಮೇಲೆ ಕನ್ನಡದ ಬಾವುಟ ಹಾರಿಸುವಂತೆ ಬಾವುಟಗಳನ್ನು ವಿತರಣೆ ಮಾಡಲಾಯಿತು. 


ಈ  ವೇಳೆ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಡಾ.ವೇಂಕಟೇಶ್ ತಿಪ್ಪೇಸ್ವಾಮಿ ಮಾತನಾಡಿ ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು, ಪ್ರತಿಯೊಬ್ಬರೂ ಕನ್ನಡ ಬಾವುಟವನ್ನು ತಮ್ಮ ಮನೆಯ ಮೇಲೆ ಹಾರಿಸುವುದರ ಜೊತೆ ಕನ್ನಡವನ್ನು ಬೆಳೆಸಿ ಉಳಿಸಬೇಕು. ನಮ್ಮ ನಾಡಿನಲ್ಲಿ ಕನ್ನಡಕ್ಕೆ ಅದರದ್ದೇ ಅಗ್ರ ಸ್ಥಾನವಿದೆ ಕೇವಲ ಆಚರಣೆಗೆ ಸೀಮಿತಗೊಳಿಸದೇ ಪ್ರತಿಕ್ಷಣ ಕನ್ನಡದ ಏಳ್ಗೆಗಾಗಿ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಶ್ರಮಿಸಬೇಕು. ಕನ್ನಡವನ್ನು ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದಂತೆ ಉಳಿಯಬೇಕಿದೆ ಹಾಗಾಗಿ ನಮ್ಮ ಪಕ್ಷದ ಮುಖಂಡರಾದ ಕುಮಾರಸ್ವಾಮಿ ಅವರು ಈ ಅಭಿಯಾನವನ್ನು ಪ್ರಾರಂಬಿಸಿದ್ದಾರೆ ಎಂದರು.  

ಕನ್ನಡ ಪರ ಸಂಘಟನೆಯ ಎನ್‌.ಎಂ.ಗೌಸ್ ಮಾತನಾಡಿ ಕನ್ನಡಕ್ಕೆ ಅದರದ್ದೇ ಆದ ಇತಿಹಾಸವಿದೆ ಕೇವಲ ಆಚರಣೆಗೆ ಸೀಮಿತಗೊಳಿಸದೇ ಪ್ರತಿದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು, ಕರ್ನಾಟಕದ ಜನತೆಗೆ ಇದು ಹೆಮ್ಮೆಯ ದಿನವಾಗಿದೆ, ಕನ್ನಡ ನಾಡು ಎಂಬುದೇ ಒಂದು ಧೀಮಂತ ಶಕ್ತಿಯಾಗಿದೆ ಇಂತಹ ನಾಡಿನಲ್ಲಿ ಜನ್ಮಪಡೆದ ನಾವು ಭಾಗ್ಯವಂತರು ಈ ಬಾರಿಯ 67ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡಿದರು. 


ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ ಮಾತನಾಡಿ ಕನ್ನಡ ರಾಜ್ಯೋತ್ಸವವು ನಮ್ಮ ನಾಡಿನ ಹೆಮ್ಮೆಯಾಗಿದೆ ಕರುನಾಡಿನಲ್ಲಿರುವ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕರೆ ನೀಡಿದ್ದಾರೆ, ಜಾತಿ ಮತ ಪಕ್ಷ ಎಂಬುದನ್ನು ಬದಿಗಿಟ್ಟು ಸಂಭ್ರಮದಿಂದ ಹಬ್ಬದಂತೆ ಆಚರಿಸಬೇಕಿದೆ ಎಂದರು. 

ಈ ಸಂಧರ್ಭದಲ್ಲಿ ಕರವೇ ಸಂಘಟನೆಯ ಭರಮಜ್ಜ ನಾಯಕ, ವಿಶ್ವನಾಥ್, ಜೆಡಿಎಸ್ ಪಕ್ಷದ ಡಿಶ್ ಪಾಂಡುರಂಗ, ಕೊಟ್ರೇಶ್, ಇಕ್ಬಾಲ್ ಖ್ಹಾಜಿ, ಜಮದಗ್ನಿ, ರೋಷನ್, ರಾಮನಗೌಡ್ರು, ರಾಜು, ನವೀನ್ ಕುಮಾರ್, ಕೃಷ್ಣಮೂರ್ತಿ ಶೆಟ್ರು, ರೆಹೆಮಾನ್ ಸಾಹೇಬ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ