ಕನ್ನಡ, ಬೆಳಗಾವಿ ಉಳಿವಿಗೆ ಜೋಳಿಗೆ ಹಾಕಿದ್ದ ಶಿವಬಸವ ಶ್ರೀಗಳು : ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶ್ರೀಗಳ ಹೆಸರು ನಾಮಕರಣಕ್ಕೆ ಶಿಪಾರಸ್ಸು

ಕನ್ನಡ, ಬೆಳಗಾವಿ ಉಳಿವಿಗೆ ಜೋಳಿಗೆ ಹಾಕಿದ್ದ ಶಿವಬಸವ ಶ್ರೀಗಳು : ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶ್ರೀಗಳ ಹೆಸರು ನಾಮಕರಣಕ್ಕೆ ಶಿಪಾರಸ್ಸು
Kannada, Shiva Basava Sri who sacrificed for the survival of Belgaum: Belgaum railway station recomm

ಪಾರೇಶ ಭೋಸಲೆ 

ಬೆಳಗಾವಿ : ಕನ್ನಡ ನಾಡು ನುಡಿಗಾಗಿ ಶ್ರಮಿಸಿ, ಗಡಿಯಲ್ಲಿ ಕನ್ನಡ ಬೆಳೆಸಲು ಹಾಗೂ ಬೆಳಗಾವಿ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಹೆಗಲಿಗೆ ಜೋಳಿಗೆ ಹಾಕಿ ಹಳ್ಳಿ, ಹಳ್ಳಿ ಅಲೆದು ಅಕ್ಷರ, ಅನ್ನ ದಾಸೋಹ ಜೊತೆಗೆ ಮಹಾಜನ್ ಅಯೋಗದ ಮುಂದೆ ಬೆಳಗಾವಿ ಕರ್ನಾಟಕದಲ್ಲಿ ಉಳಿಸಿಕೊಳ್ಳುವಗೋಸ್ಕರ ಸಾಕ್ಷಿ ನುಡಿದ್ದ ಲಿ. ಡಾ. ಶಿವಬಸವ ಸ್ವಾಮಿಗಳ ಹೆಸರು ಬೆಳಗಾವಿಯ ನವೀಕೃತ ರೈಲು ನಿಲ್ದಾಣಕ್ಕೆ ಹೆಸರು ನಾಮಕರಣ ಸಿಪಾರಸ್ಸು ಮಾಡುವ ಮೂಲಕ ಅವರ ಹೆಸರು ಅಜರಾಮರವಾಗಿರಲು ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಟ್ಟಿರುವದು ಗಡಿಕನ್ನಡಿಗರು ಹರ್ಷ ಪಡುವಂತಾಗಿದೆ. 

      ಹೌದು ಓದುಗರೇ... ಹಲವು ದಶಕಗಳ ಹಿಂದೆ ಬೆಳಗಾವಿಯಲ್ಲಿ ಇದ್ದ ಮರಾಠಿಗರ ಪ್ರಾಬಲ್ಯವನ್ನು ಕುಗ್ಗಿಸುವ ನಿಟ್ಟಿನಲ್ಲಿ ಹಾಗೂ ಗಡಿ ಜಿಲ್ಲೆ ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಫಣತೊಟ್ಟು 1966ರ ಅಕ್ಟೋಬರ್ 25ರಂದು ಕರ್ನಾಟಕ ಮಹಾರಾಷ್ಟöç ಗಡಿ ಅಧ್ಯಯನಕ್ಕಾಗಿ ನಿಯೋಜಿಸಲ್ಪಟ್ಟಿದ್ದ ಮಹಾಜನ್ ಆಯೋಗದ ಮುಂದೆ ಬೆಳಗಾವಿ ಕರ್ನಾಟಕದಲ್ಲಿ ಯಾಕೆ ಇರಬೇಕು ಹಾಗೂ ಬೆಳಗಾವಿ ಕರ್ನಾಟಕದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹಾಜನ್ ಆಯೋಗದ ಮುಂದೆ ಸಾಕ್ಷಿ ನುಡಿದ ಎಲ್ಲ ಮಹಿನಿಯರಲ್ಲಿ ನಾಗನೂರು ರುದ್ರಾಕ್ಷಿ ಮಠದ ಲಿ. ಡಾ. ಶಿವಬಸವ ಶ್ರೀಗಳು ಒಬ್ಬರಾಗಿದ್ದರು.

    ಅಲ್ಲದೆ ಬೆಳಗಾವಿಯಲ್ಲಿ ಕನ್ನಡ ಉಳಿಸಿ, ಬೆಳೆಸಲು ಹಾಗೂ ಕನ್ನಡ ವಿದ್ಯಾರ್ಥಿಗಳನ್ನು ತಯಾರಿಸಿ ಅವರಿಗೆ ಕನ್ನಡ ಶಾಲೆ ಜೊತೆಗೆ ಪಾಠ ನೀಡುವ ಸಲುವಾಗಿ ಪ್ರತಿ ಹಳ್ಳಿ, ಹಳ್ಳಿಗೂ ಹೆಗಲಿಗೆ ಜೋಳಿಗೆ ಹಾಕುವ ಮೂಲಕ ತೆರಳಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ ಎಂದು ಪಾಲಕರ ಮನವೊಲಿಸಿ ಅಕ್ಷರ ಮತ್ತು ಅನ್ನ ದಾಸೋಹ ಸಲುವಾಗಿ ಲಿ. ಡಾ. ಶಿವಬಸನ ಶ್ರೀಗಳು ಶ್ರಮಿಸಿದ್ದರು. 

    1966ರಲ್ಲಿ ಅಕ್ಟೋಬರ್ 25ರಂದು ಕರ್ನಾಟಕ ಮತ್ತು ಮಹಾರಾಷ್ಟç ಗಡಿ ವಿಚಾರ ಬಗ್ಗೆ ನೇಮಕ ಮಾಡಲಾದ ಮಹಾಜನ್ ಅಯೋಗದ ಮುಂದೆ ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಹಾಗೂ ಬೆಳಗಾವಿ ಕರ್ನಾಟಕದ ಅಂಗವೆAದು ಪ್ರತಿಪಾದಿಸಿದ್ದರು. ಅಲ್ಲದೆ ಮಹಾಜನ್ ಆಯೋಗದ ಮುಂದೆ ಕರ್ನಾಟಕದ ಪರವಾಗಿ ಸಾಕ್ಷಿ ನುಡಿಯಲು ಬಂದಿದ್ದ ಮಹನಿಯರಲ್ಲಿ ಲಿ. ಡಾ. ಶಿವಬಸವ ಶ್ರೀಗಳು ಒಬ್ಬರಾಗಿದ್ದರು. 

     ಬೆಳಗಾವಿಯಲ್ಲಿ ಹಲವಾರು ದಶಕಗಳ ಹಿಂದೆ ಮರಾಠಿ ಪ್ರಾಭಲ್ಯ ಇದ್ದ ವೇಳೆಯಲ್ಲಿ ನಾಗನೂರು ರುದ್ರಾಕ್ಷಿ ಮಠವನ್ನು ಕನ್ನಡದ ಕೇಂದ್ರಬಿAದುವನ್ನಾಗಿಸಿಕೊAಡು ಕನ್ನಡ ಬೆಳೆಸುವ ಕೆಲಸದ ಜೊತೆಗೆ ಅಕ್ಷರ ಮತ್ತು ಅನ್ನ ದಾಸೋಹಗಳ ಕ್ರಾಂತಿಯನ್ನು ಪ್ರಾರಂಭಿಸಿದ್ದ ಡಾ. ಶಿವಬಸವ ಶ್ರೀಗಳು, ಅನ್ನ ದಾಸೋಹ, ಅಕ್ಷರ ದಾಸೋಹಕ್ಕಾಗಿ ಜೋಳಿಗೆ ಹಾಕಿ ಗ್ರಾಮೀಣ ಪ್ರದೇಶದಲ್ಲಿ ತಿರುಗಾಡಿ ಕನ್ನಡ ಕಲಿಸಲು ಮಕ್ಕಳನ್ನು ನೀಡಿ ಎಂದು ಪಾಲಕರಲ್ಲಿ ವಿನಂತಿಕೊಳ್ಳುತ್ತಿದ್ದರು. ಬೆಳಗಾವಿಯಲ್ಲಿ ಶಿಕ್ಷಣ, ಕನ್ನಡ ನಾಡು-ನುಡಿ ವಿಷಯಗಳ ಬಗ್ಗೆ ಶಿವಬಸವ ಶ್ರೀಗಳು ಕ್ರಾಂತಿಯನ್ನೆ ಮಾಡಿದ್ದರು.

     ಗಡಿ ಭಾಗದಲ್ಲಿ 80ರ ದಶಕದಲ್ಲಿ ಮಾರುತಿ ಗಲ್ಲಿಯಲ್ಲಿ ಇದ್ದ ಹಳೆಯ ನಾಗನೂರು ರುದ್ರಾಕ್ಷಿ ಮಠದ ಬೋರ್ಡಿಂಗ್ ಆವರಣದಲ್ಲಿ ಶಾಲಾ ಮಕ್ಕಳ ಮುಂದೆ ಕನ್ನಡ ಕರ‍್ಯಕ್ರಮಗಳನ್ನು ನಡೆಸುವ ಜೊತೆಗೆ ಮಕ್ಕಳಿಗೆ ಕನ್ನಡ ತಿಳುವಳಿಕೆ ನೀಡಲಾಗುತ್ತಿತ್ತು. ಅಲ್ಲದೆ ಗಡಿ ಭಾಗದಲ್ಲಿ ಕನ್ನಡ ಕಲಿಕೆಯ ಕೇಂದ್ರ ಸ್ಥಾನವಾಗಿದ್ದ ನಾಗನೂರು ರುದ್ರಾಕ್ಷಿ ಮಠವು ಉ.ಕ ಪ್ರಶಿದ್ದ ಕನ್ನಡದ ಮಠವಾಗಿತ್ತು. 

    ಇಂತಹ ಕನ್ನಡ ಕ್ರಾಂತಿಕ್ರಾರಿ ಶ್ರೀಗಳಾಗಿದ್ದ ಡಾ. ಶಿವಬಸವ ಮಹಾಸ್ವಾಮಿಗಳ ಹೆಸರನ್ನು ಬೆಳಗಾವಿ ನವೀಕೃತ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ ರಾಜ್ಯ ಸರಕಾರವು ಶಿಪಾರಸ್ಸು ಮಾಡಿರುವದು ಗಡಿ ಭಾಗದ ಕನ್ನಡಾಭಿಮಾನಿಗಳಿಗೆ ಹಾಗೂ ಸಾಹಿತಿಗಳಿಗೆ ಸಂತಸವನ್ನು ಉಂಟು ಮಾಡಿದೆ.   

ರೈಲು ನಿಲ್ದಾಣಕ್ಕೆ ಶಿವಬಸವ ಶ್ರೀ ನಾಮಕರಣಕ್ಕೆ ಶಿಪಾರಸ್ಸು : ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹರ್ಷ  

    ಬೆಳಗಾವಿಯ ನವೀಕೃತ ರೈಲು ನಿಲ್ದಾಣಕ್ಕೆ ಲಿ. ಡಾ. ಶಿವಬಸವ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡುವಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನಾಲ್ಕು ವರ್ಷಗಳಿಂದ ಪ್ರಯತ್ನ ನಡೆಸುತ್ತಿತ್ತು. ಆದರೆ ರಾಜ್ಯ ಸರಕಾರ ಇವಾಗಾದರೂ ಕೇಂದ್ರ ಸರಕಾರಕ್ಕೆ ಶೀಗಳ ಹೆಸರು ಶಿಪಾರಸ್ಸು ಮಾಡುವಂತೆ ಆದೇಶ ಮಾಡಿರುವದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪ್ರಯತ್ನಕ್ಕೆ ಜಯ ಸಿಕ್ಕಂತಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ. 

          ಬೆಳಗಾವಿಯು ಕರ್ನಾಟಕದಲ್ಲಿಯೇ ಉಳಿಯಲು ಶ್ರಮಿಸಿದ ಅನೇಕ ಮಹನೀಯರಲ್ಲಿ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಶಿವಬಸವ ಮಹಾ ಸ್ವಾಮೀಜಿ ಒಬ್ಬರು. ಅನ್ನ, ಅಕ್ಷರ ದಾಸೋಹಿ ಲಿಂಗೈಕ್ಯ ಶಿವಬಸವ ಮಹಾ ಸ್ವಾಮೀಜಿ ಅವರ ಹೆಸರನ್ನು ಬೆಳಗಾವಿ ರೈಲು ನಿಲ್ದಾಣಕ್ಕೆ ಇಡಲು ಸಿದ್ದರಾಮಯ್ಯ ಅವರ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

    ವಾಸ್ತವವಾಗಿ 2022ರಲ್ಲಿಯೇ ಈ ಕೆಲಸ ಆಗಬೇಕಿತ್ತು. ಈ ದಿಸೆಯತ್ತ ಪ್ರಯತ್ನ ಆರಂಭಿಸಿದ್ದೇವು. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು 2021ರ ಡಿಸೇಂಬರ್‌ನಲ್ಲಿ ಅಂದಿನ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರಿಗೆ ಕ್ರಿಯಾ ಸಮಿತಿ ಮನವಿ ಸಲ್ಲಿಸಿತು. ಆದರೆ ಅವರು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದು 25.02.2022ರಂದು. 2023ರಲ್ಲಿ ಸಿದ್ದರಾಮಯ್ಯ ಸರಕಾರ ಬಂತು. ಮತ್ತೆ ನಾಗನೂರು ರುದ್ರಾಕ್ಷಿ ಮಠದ ಮೊದಲಿನ ಸ್ವಾಮೀಜಿ ಸಿದ್ದರಾಮ ಮಹಾಸ್ವಾಮಿಗಳು ಮತ್ತು ಈಗಿನ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಪ್ರಯತ್ನ ಮುಂದುವರೆಸಿದರು. ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹಾಗೂ ಇತರ ಮುಖಂಡರು ಆಸಕ್ತಿ ವಹಿಸಿದರು.

    ಈಗ ಕೊನೆಗೂ ಶಿಫಾರಸು ಆದಂತಾಗಿದೆ. ರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ನಾಗನೂರು ರುದ್ರಾಕ್ಷಿ ಮಠದ ಅನ್ನ, ಅಕ್ಷರ ದಾಸೋಹಿ ಲಿಂಗೈಕ್ಯ ಶಿವಬಸವ ಮಹಾ ಸ್ವಾಮೀಜಿ ಅವರ ಹೆಸರು ಅಜರಾಮರ ವಾಗಿಸುವತ್ತ ಇದೊಂದು ಅಳಿಲು ಸೇವೆ ಎಂದು ಭಾವಿಸಿದ್ದೇವೆ ಎಂದು ಅಶೋಕ ಚಂದರಗಿ ಹೇಳಿದ್ದಾರೆ.   

ಸುದ್ದಿ ಓದಿ