ಶಿಗ್ಗಾವ್

ಕನಕದಾಸ ಜಯಂತಿ: ಕುಂಭಗಳ ಮೆರವಣಿಗೆಗೆ ಚಾಲನೆ

ಕನಕದಾಸ ಜಯಂತಿ: ಕುಂಭಗಳ ಮೆರವಣಿಗೆಗೆ ಚಾಲನೆ

ಶಿಗ್ಗಾವಿ 20: ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕುರುಬ ಸಮಾಜದ ವತಿಯಿಂದ ಕನಕದಾಸ ಜಯಂತಿ ನಿಮಿತ್ಯ ಕನಕದಾಸರ ಭಾವಚಿತ್ರಕ್ಕೆ ವಿರಕ್ತಮಠದ ಸಂಗನಬಸವ ಶ್ರೀಗಳು ಪುಷ್ಪ ನಮನ ಸಲ್ಲಿಸಿ ನಂತರ ಭಾವಚಿತ್ರ  ಹಾಗೂ ಸಮಾಜದ ಮಹಿಳೆಯರು 101 ಕುಂಭಗಳ ಮೆರವಣಿಗೆಗೆ ಶ್ರೀಗಳು ಚಾಲನೆ ನೀಡಲಾಯಿತು ನಂತರ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 

ಈ ಸಂದರ್ಭದಲ್ಲಿ ತಾಲೂಕ ಕರುಬ ಸಮಾಜ ಅಧ್ಯಕ್ಷ ಪಕ್ಕೀರ​‍್ಪ ಕುಂದೂರ, ಗದಿಗೆಪ್ಪ ಕೊಡ್ಲಿವಾಡ, ಸಂಗಪ್ಪ ಕಂಕನವಾಡ, ಮಾಲತೇಶ ಯಲವಿಗಿ, ಮಾಲತೇಶ ಕಂಕನವಾಡ, ಚಂದ್ರು ಕೊಡ್ಲಿವಾಡ, ರವಿ ಮುಳಕೇರಿ, ಚಂದ್ರಶೇಖರ ಮಾಯಣ್ಣವರ, ದೆವೇಂದ್ರ​‍್ಪ ಕೆರೆಕ್ಕನವರ, ಪುಟ್ಟಪ್ಪ ಮತ್ತೂರ, ಸಂಗಪ್ಪ ಕುರುಬರ, ಮಲೇಶಪ್ಪ ನವರದ, ಅಶೋಕ ಇಂಗಳಗಿ, ಮಂಜುನಾಥ ಕಂಕನವಾಡ, ಲಕ್ಷ್ಮಣ ಕಳ್ಳಿಮನಿ ಸೇರಿದಂತೆ ಸಮಾಜದ ಯುವಕರು, ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ