ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು: ಪ್ರಾಚಾರ್ಯ ಶಿವು ಹಾವೇರಿ
ಶಿಗ್ಗಾವಿ : ಪ್ರಸ್ತುತ ಇವತ್ತಿನ ಯುವ ಪೀಳಿಗೆಯನ್ನು ಜಾತಿ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಆ ಹಿನ್ನೆಲೆಯಲ್ಲಿ ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಶಿವು ಹಾವೇರಿ ಹೇಳಿದರು.
ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 535 ನೇ ಜಯಂತೋತ್ಸವ ನಿಮಿತ್ಯ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಜಾತ್ಯಾತೀತ ಅರ್ಥನೀಡುವ ಹಾಡು ಹೇಳುವಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಮೂಲಕ ಕನಕ ಕಬೀರ ದಾಸರಾಗಿ ಮೆರೆದರು. ಅವರು ನಮ್ಮನ್ನಗಲಿರಬಹುದು, ಐದು ಶತಮಾನಗಳ ಹಿಂದೆ ಅವರು ಹಾಡಿದ ಹಾಡು, ಕೀರ್ತನಗಳು ಇನ್ನೂ ಜೀವಂತವಾಗಿವೆ ಎಂದರು.
ಪ್ರಾಸ್ತಾವಿಕವಾಗಿ ಮಂಜುಳಾ ಪಾಟೀಲ, ಸುನೀತಾ ಕಮ್ಮಾರ, ವಿಧ್ಯಾಥರ್ಿಗಳಾದ ಶಿವಪ್ರಸಾದ, ಚನ್ನಬಸಪ್ಪ, ಅನುಷಾ, ಮಾತನಾಡಿದರು. ತ್ರಿವೇಣಿ, ರೋಹಿಣಿ, ಮಂಜುನಾಥ ದಾಸರ ಕೀರ್ತನಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವೀರಣ್ಣಾ ಬಡ್ಡಿ, ಶಿವಪುತ್ರಪ್ಪ ಜಕ್ಕಣ್ಣವರ, ಶಿಕ್ಷಕರಾದ ಶೇಖರ ಪರಸಾಪೂರ, ರವಿ ಸಂಕ್ಲಿಪೂರ, ಪವಿತ್ರಾ ಕಿರೇಸೂರ, ಲಾವಣ್ಯ ಸೋಮಸಾಗರ, ಶೃತಿ ನವರತ್ನ, ಸಂಗೀತಾ ಹರಿಗೊಂಡ, ಉಮಾ ಪೂಜಾರ, ಶಾಲಿನಿ ಸೋಪ್ಪಣ್ಣವರ, ಪಿ.ಬಿ.ಮಂಜುಳಾ, ರಂಜೀತಾ ಮಾಡಿಕ, ಶೋಭಾ ಬಡಿಗೇರ, ಶ್ವೇತಾ ಹಿರೇಮಠ, ಸಚಿನ ಸೇರಿದಂತೆ ಇತರರು ಇದ್ದರು. ಶಿಕ್ಷಕ ಮಾರುತಿ ಲಮಾಣಿ ಸ್ವಾಗತಿಸಿದರು, ಮಾರುತಿ ತಳವಾರ ವಂದಿಸಿದರು, ಗಾಯತ್ರಿ ದೈವಜ್ಞ ಕಾರ್ಯಕ್ರಮ ನಿರ್ವಹಿಸಿದರು.