ಮಹಲಿಂಗಪುರ

ಕಂಬಿ ಮಲ್ಲಯ್ಯನ ಭವ್ಯ ಬೀಳ್ಕೊಡುಗೆ, ಭಕ್ತಿಪರವಶವಾದ ಜನ ಸಾಗರ

ಕಂಬಿ ಮಲ್ಲಯ್ಯನ ಭವ್ಯ ಬೀಳ್ಕೊಡುಗೆ, ಭಕ್ತಿಪರವಶವಾದ ಜನ ಸಾಗರ

ಮಹಾಲಿಂಗಪುರ 28: ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಪ್ರಭಾವಿ ಜ್ಯೋತಿರ್ಲಿಂಗ ಇರುವ  ಸುಕ್ಷೇತ್ರ ಶ್ರೀಶೈಲಕ್ಕೆ ತೆರಳುವದೆಂದರೆ ಜೀವಿಸಿದಾಗಲೇ ಸ್ವರ್ಗದ ದರ್ಶನ ಮಾಡಿದಂತೆ ಎಂದು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. 

ಮಂಗಳವಾರ ಮಲ್ಲಯ್ಯನ ಜೊತೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ರನ್ನಬೆಳಗಲಿವರೆಗೆ ಬಸವ (ನಂದಿ) ಹಾಗೂ ಸಾಗರೋಪಾದಿಯಲ್ಲಿ ಸೇರಿದ್ದ ಭಕ್ತವೃಂದ ಹಾಗೂ ವಾದ್ಯಮೇಳಗಳೊಂದಿಗೆ ಆಗಮಿಸಿ ಮಲ್ಲಯ್ಯನಿಗೆ ಬೀಳ್ಕೋಡುವ ಮುನ್ನ ನೆರೆದ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ರೀತಿಯ ಸಂಭ್ರಮ.ಶ್ರೀ ಗುರು ಮಹಾಲಿಂಗೇಶ್ವರರ ಪಾದ ಸ್ಪರ್ಶದಿಂದ ಮಹಾಲಿಂಗಪುರ ರಾಜ್ಯದಲ್ಲಿಯೇ ಭಾವ್ಯಕ್ಯತೆಯ ನಗರವೆಂದು ಹೆಸರಾಗಿದೆ.ಈ ಕಾರ್ಯಕ್ರಮದಲ್ಲಿ ಹಿಂದೂ,ಮುಸ್ಲಿಂ,ಜೈನ ಸೇರಿದಂತೆ ಸರ್ವಧರ್ಮದವರು ಭಾಗಿಯಾಗಿರುವುದು ಮಾತ್ರವಲ್ಲದೆ ಯಾತ್ರಿಕರಿಗೆ ನೀರು ಆಹಾರ ಓಷಧ ವ್ಯವಸ್ಥೆ ಮಾಡುತ್ತಿರುವದೇ ಅದಕ್ಕೆ ಸಾಕ್ಷಿ  ಎಂದರು. 

ನಂತರ ಮಲ್ಲಯ್ಯನಿಗೆ  ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಬೀಳ್ಕೊಡಲಾಯಿತು. ನೆರೆದಿದ್ದ ಸಾವಿರಾರು ಜನ ಭಕ್ತರ ನಡುವೆ ಮಲ್ಲಯ್ಯ ಶ್ರೀಶೈಲದೆಡೆ ಪ್ರಯಾಣ ಬೆಳೆಸಿದ,ಬೀಳ್ಕೊಡುವ ಮಾರ್ಗದುದ್ದಕ್ಕೂ ಸಾಲಾಗಿ ನಿಂತ ಮುತ್ತೈದೆಯರು ತುಂಬಿದ ಕೊಡದಿಂದ ಕಂಬಿ ಮಲ್ಲಯ್ಯನಿಗೆ ನೀರು ಸುರಿದು ದರ್ಶನ ಪಡೆದು ಪುನೀತರಾದರು. 

ಪಟ್ಟಣದ ಬಸವನಗರದ ಭಕ್ತರು 3 ಕ್ವಿಂಟಲ್‌ಗೂ ಅಧಿಕ ಗೋಧಿಯಿಂದ ತಯಾರಿಸಿದ ಉಪಹಾರದ ವ್ಯವಸ್ಥೆ ಮಾಡಿದ್ದರು.ಬಸವನಗರದ ಮಲಕಾಜಪ್ಪ ಹನಗಂಡಿ,ಶ್ರೀಶೈಲಪ್ಪ ಬಾಡನವರ,ಭೀಮಶಿ ಪೂಜೇರಿ,ಚನ್ನಪ್ಪ ಟಿರಕಿ,ಪ್ರಕಾಶ ಬಾಡನವರ,ಮಹಾಲಿಂಗಪ್ಪ ಕಂಠಿ,ಶ್ರೀಶೈಲ ಬಳಗಾರ,ಆನಂದ ಮಿರ್ಜಿ,ಮಲ್ಲಪ್ಪ ಹಟ್ಟಿ,ಮಲ್ಲಪ್ಪ  ಠಕ್ಕನವರ,ಮಲ್ಲಪ್ಪ ಗಾಣಿಗೇರ,ಮಹಾದೇವ ಗಿರಿಸಾಗರ,ಮಹಾಲಿಂಗ ಆದೆಪ್ಪನವರ,ದುಂಡಪ್ಪ ಗಾಣಿಗೇರ, ಶಿವು ಪಾಟೀಲ,ಮಲ್ಲಪ್ಪ ಟಿರಕಿ,ಬಸವರಾಜ ಹುಲ್ಯಾಳ,ಬಸವರಾಜ ಗಿರಿಸಾಗರ,ರಾಜು ಹಿಕಡಿ,ಗೋವಿಂದ ಘೋರೆ​‍್ಡ,ಎಂ.ಆರ್‌.ಕೊಣ್ಣೂರ,ಧರ್ಮೆಂದ್ರ ಪಟೇಲ, ಮುಂತಾದವರು ಪ್ರಸಾದ ವಿತರಿಸಲು ಶ್ರಮಿಸಿದರು. 

ಗಣ್ಯರಾದ ಬಸನಗೌಡ ಪಾಟೀಲ,ಮಲ್ಲು ಕುಳ್ಳೊಳ್ಳಿ,ಮಹಾಲಿಂಗಪ್ಪ ಕುಳ್ಳೊಳ್ಳಿ,ಬಾಳಕೃಷ್ಣ ಮಾಳವದೆ,ಚಂದ್ರು ಗೊಂದಿ,ಶೇಖರ ಅಂಗಡಿ,ಎಸ್‌.ಆರ್‌.ಹಿಪ್ಪರಗಿ,ಸಜನಸಾಬ ಪೆಂಡಾರಿ,ಮಂಜುನಾಥ ಗುಂಡಾ,ನಬಿ ಯಕ್ಸಂಬಿ,ಈರ​‍್ಪ ದಿನ್ನಿಮನಿ,ವಿಜಯಕುಮಾರ ಕುಳ್ಳೋಳ್ಳಿ,ರಾಹುಲ ಅವರಾದಿ,ಉಸ್ಮಾನ ಪೆಂಡಾರಿ,ಅಶ್ವಿನ್ ಪಟೇಲ,ಶ್ರೀಶೈಲ ಮಠದ,ನಜೀರ ಝಾರೆ,ಬಸವರಾಜ ಕಬ್ಬೂರ,ದಾದಾ ಕರೋಶಿ ಇತರರಿದ್ದರು. 


ಸುದ್ದಿ ಓದಿ