ಬೋನಸ್ ವಿತರಿಸಿದ ಕಾಮಧೇನು ಹಾಲು ಉತ್ಪಾದಕರ ಸಂಘ
ಯಮಕನಮರಡಿ 12: ಈ ವರ್ಷ ಸುಮಾರು 4 ಲಕ್ಷ 79 ಸಾವಿರ ರೂ ಗಳಷ್ಟು ಸಂಘದಿಂದ ಬೋನಸ್ ವಿತರಿಸಿ ರೈತರಿಗೆ ಅನೂಕೂಲ ಮಾಡಿಕೊಡಲಾಗಿದ್ದು ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ರೈತರು ಸಂಸ್ಥೆಯ ಶ್ರೇಯೋಭಿವೃದ್ದಿಗಾಗಿ ಗುಣಮಟ್ಟದ ಹಾಲು ಪೂರೈಸಿ ಸಂಸ್ಥೆಯಿಂದ ದೊರೆಯುವ ಬೋನಸ್ ಹಣವನ್ನು ಪಡೆಯುವಂತೆ ಸಂಸ್ಥೆಯ ಅಧ್ಯಕ್ಷ ದುಂಡಪ್ಪ ಅ ಜರಳಿ ಕರೆ ನೀಡಿದರು.
ಸಮೀಪದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಕಾಮಧೇನು ಹಾಲು ಉತ್ಪಾದಕರ ಸಂಘದಿಂದ 2019-20ನೇ ಸಾಲಿನಲ್ಲಿ ಹಾಲು ಪೂರೈಸಿದ ರೈತರಿಗೆ ಪ್ರತಿ ಲೀಟರಿಗೆ 2.25 ರಂತೆ ಬೋನಸ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಭೂ ದಾನಿ ದುಂಡಪ್ಪಾ ಹೆಬ್ಬಾಳಿ, ಉಪಾಧ್ಯಕ್ಷ ರಾಚಯ್ಯಸ್ವಾಮಿ ಹಿರೇಮಠ, ಸಚಿನ್ ಸುರ್ವೆ, ಬಿ.ಎ.ಚನಬಸನವರ, ಎಮ್.ಎಸ್.ಮಾಳಗಿ, ಕಾರ್ಯದರ್ಶಿ ಎಮ್.ಆಯ್.ಹಟ್ಟಿ, ಕೆ.ಎ.ಮಠದವರ, ಸಿಬ್ಬಂದಿಗಳಾದ ಶಂಕರಯ್ಯಾ ಹಿರೇಮಠ, ಸಾತಪ್ಪಾ ಮಾಳಗಿ, ಹಾಗೂ ವಿವೇಕ ಹಿರೇಮಠ, ರೈತರು ಉಪಸ್ಥಿತರಿದ್ದರು.