ಭಕ್ತರ ಪಾಲಿನ ಕಾಮದೇನು ಕಲ್ಪವೃಕ್ಷ ಕಾಳಿಕಾ ಮಾತೆ : ನಾಗಲಿಂಗ ಸ್ವಾಮೀಜಿ
ಮಹಾಲಿಂಗಪುರ 20: ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿಯಾದ ದೇವತೆ ಕಾಳಿಕಾ ಮಾತೇ ಈ ದೇವಿಯನ್ನು ವಿಶ್ವದ ತುಂಬೆಲ್ಲಾ ನಾನಾ ಹೆಸರಿನಿಂದ ಜನರು ಪೂಜಿಸಿ ಆರಾಧಿಸುತ್ತಾರೆ. ನಿರ್ಮಲ ಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನೂ ಕರುಣಿಸುವ ಕಾಮದೇನು ಕಲ್ಪವೃಕ್ಷ ಈ ಕಾಳಿಕಾ ಮಾತೇ ಎಂದು ಚಿಕ್ಕುಂಬಿಯ ನಾಗಾಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ಮಾರುತಿ ಮಂದಿರದ ಹತ್ತಿರವಿರುವ ಶ್ರೀ ಕಾಳಿಕಾ ದೇವಿಯ ಎರಡನೆಯ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ಧರ್ಮ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಆಶೀರ್ವಚನ ನೀಡಿ ಶಿರಸಂಗಿಯು ಕರ್ನಾಟಕದ ಸವದತ್ತಿ ತಾಲೂಕಿನ ಗ್ರಾಮ. ಇದು ಸುಕ್ಷೇತ್ರ ಶಕ್ತಿ ಪೀಠವಾಗಿದ್ದು, ಪುರಾತನ ವಿಶ್ವಕರ್ಮ ಕುಲದೇವತೆ ಶ್ರೀ ಕಾಳಿಕಾ ಮಾತೆಯ ದೇವಸ್ಥಾನವಿದೆ. ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅವನ ಸಾಮಂತರು ಶಿರಸಂಗಿಯಲ್ಲಿ ಕೋಟೆ ಕಟ್ಟಿ ತಮ್ಮ ಕಾರ್ಯಸ್ಥಾನವಾಗಿಕೊಂಡಿದ್ದರು. ಎಂಬುದು ಇತಿಹಾಸದಿಂದ ತಿಳಿಯುತ್ತದೆ ಎಂದರು.
ನಂತರ ಮಾತನಾಡಿದ ಶಿರಸಂಗಿಯ ವಿ ಕ ಸಮಾಜದ ಅಧ್ಯಕ್ಷರಾದ ಪಿ ಬಿ ಬಡಿಗೇರ ಶಿರಸಂಗಿಯ ಕಾಳಿಕಾ ದೇವಿಯ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ಕ್ಷೇತ್ರಗಳಲ್ಲಿ ಒಂದು. ಶಿರಸಂಗಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.ರಾಮಾಯಣ ಕಾಲದಲ್ಲಿ ದಶರಥ ಮಹಾರಾಜ ಪುತ್ರಕಾಮೇಷ್ಠಿ ಯಾಗ ಮಾಡಲು ನಿಶ್ಚಯಿಸಿದಾಗ ಮುಖ್ಯ ಅಗ್ನಿಹೋತ್ರಿಯಾಗಿ ಶಿರಸಂಗಿಯಲ್ಲಿ ತಪಸ್ಸು ಮಾಡುತ್ತಿದ್ದ ವಿಶ್ವಕರ್ಮ ವಂಶಸ್ಥನಾದ ಕಾಶ್ಯಪ ಗೋತ್ರದ ವಿಭಾಂಡಕ ಮುನಿಯ ಮಗನಾದ ಶೃಂಗ ಋಷಿಯನ್ನು ಆಹ್ವಾನಿಸಿದನೆಂಬ ಐತಿಹ್ಯವಿದೆ.ರಾಮ, ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಕ್ರಿ.ಶ 1148ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.ಏನೇ ಸಣ್ಣ ಪುಟ್ಟ ತೊಂದರೆಗಳು ಬಂದರೂ ಅವುಗಳನ್ನು ನಿವಾರಿಸಿಕೊಂಡು ಇಡೀ ಸಮಾಜ ಒಕ್ಕಟ್ಟಿನಿಂದ ಇದ್ದರೆ ಎಲ್ಲವನ್ನು ಗೆಲ್ಲಬಹುದು ಆಗಲೇ ಇತರೆ ಸಮಾಜಗಳು ನಮ್ಮನ್ನು ಗೌರವದಿಂದ ಕಾಣುತ್ತವೆ ಎಂದರು.
ನಂತರ ಮಾತನಾಡಿದ ಭಗವಂತ ಸೋನಾರ ಪುರಾಣ ಕಾಲದಲ್ಲಿ ಶಿರಸಂಗಿಯಲ್ಲಿ ಋಷಿಗಳು ಮಾಡುತ್ತಿದ್ದ ಯಜ್ಞ ಯಾಗಗಳಿಗೆ ರಾಕ್ಷಸರಿಂದ ಆಗಾಗ ಭಂಗ ಉಂಟಾಗುತ್ತಿತ್ತು. ಅದನ್ನು ತಪ್ಪಿಸಲು ಕಾಳಿಕಾ ದೇವಿ ಇಲ್ಲಿ ನೆಲೆಸಿ ರಾಕ್ಷಸರನ್ನು ಸಂಹರಿಸಿದಳು ಎಂಬ ಐತಿಹ್ಯವಿದೆ. ಕಾಳಿಕಾ ದೇವಿ ವಿಶ್ವಕರ್ಮ ಸಮಾಜದವರ ಕುಲದೇವತೆ. ದೇವಿಯ ದರ್ಶನಕ್ಕೆ ಎಲ್ಲಾ ಸಮಾಜದ ಜನರೂ ಬರುತ್ತಾರೆ.ಪ್ರತಿ ವರ್ಷದ ಯುಗಾದಿಯಂದು ಇಲ್ಲಿಗೆ ಬಂದು ತಾವು ಬೆಳೆದ ಹೊಸ ಗೋಧಿ ಧಾನ್ಯವನ್ನು ಕಾಳಿಕಾ ದೇವಿಗೆ ಅರ್ಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದು ಇಲ್ಲಿಗೆ ಬರುವ ವಿಶ್ವಕರ್ಮ ಸಮಾಜದ ಭಕ್ತರ ನಂಬಿಕೆ.ಪ್ರತಿ ಯುಗಾದಿ ಸಂದರ್ಭದಲ್ಲಿ ಇಲ್ಲಿ ಐದು ದಿನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.
ದೇವಸ್ಥಾನದಲ್ಲಿ ಬೆಳಗಿನ 4 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಪೂಜೆ, ಅಭಿಷೇಕ, ಆರತಿ, ಪಂಚಾರತಿಗಳ ಸೇವೆಗಳು ನಡೆಯುತ್ತವೆ. ಶುಕ್ರವಾರ, ಮಂಗಳವಾರ, ಹುಣ್ಣಿಮೆ, ಅಮಾವಾಸ್ಯೆ, ಹಬ್ಬ ಹರಿದಿನಗಳಂದು ವಿಶೇಷ ಪೂಜೆ ಇರುತ್ತದೆ. ಇಲ್ಲಿ ಹರಕೆಗಳನ್ನು ತೀರಿಸಲು, ವಿವಿಧ ಅರ್ಚನೆಗಳನ್ನು ಮಾಡಿಸಲು ಅವಕಾಶವಿದೆ.ದೇವಿಗೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಸಂಕಲ್ಪ, ಸಹಸ್ರನಾಮಾರ್ಚನೆ, ನೈವೇದ್ಯ, ಅಲಂಕಾರ, ತೊಟ್ಟಿಲುಸೇವೆ ಇತ್ಯಾದಿ ಸೇವೆಗಳು ನಡೆಯುತ್ತವೆ.ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿವಿಧ ಸಮಾಜದ ಗಣ್ಯಮಾನ್ಯರನ್ನು ಸನ್ಮಾನಿಸಲಾಯಿತು
ಪ್ರಾಸ್ತವಿಕವಾಗಿ ಮಾತನಾಡಿದ ಶಂಭು ಬಡಿಗೇರ ಕಾಳಿಕಾ ಎಂದೂ ಪ್ರಸಿದ್ಧ ಇದು ಅನಂತ ಶಕ್ತಿಯನ್ನು ಹೊಂದಿರುವ ಹಿಂದೂ ದೇವತೆ. ಕಾಳಿ ಎನ್ನುವ ಹೆಸರು ಕಾಲ ಎನ್ನುವುದರಿಂದ ಬಂದಿದೆ. ಇದರರ್ಥ ಕಪ್ಪು, ಕಾಲ (ಸಮಯ), ಮರಣ, ಸಾವಿನ ದೇವರು, ಶಿವ. ಕಾಳಿ ಎನ್ನುವುದರ ಅರ್ಥ "ಕಪ್ಪಗಿರುವುದು". ಶಿವನನ್ನು ಕಾಲ ಎನ್ನುವುದರಿಂದ -ಅನಂತ ಕಾಲ, ಕಾಳಿ ಆತನ ಪತ್ನಿ, "ಸಮಯ" ಅಥವಾ "ಸಾವು" ಎನ್ನುವ ಅರ್ಥಗಳೂ ಇವೆ. (ಕಾಲವು ಬಂದಂತೆ). ಹೀಗೆ ಕಾಳಿಯು ಕಾಲ ಮತ್ತು ಪರಿವರ್ತನೆಯ ದೇವತೆ. ಹೀಗಿದ್ದರೂ ಕೆಲವೊಮ್ಮೆ ಕಪ್ಪಾಗಿ ಮತ್ತು ರೌದ್ರಾಕಾರವಾಗಿ ಕಾಣಿಸಿಕೊಳ್ಳುವಳು. ಅವಳ ಮೊತ್ತಮೊದಲ ಅವತಾರ ಸರ್ವನಾಶಕ ಶಕ್ತಿಸ್ವರೂಪಿಣಿಯದು, ಎಂದು ಹೇಳಿದರು.
ವಿಶ್ವ ಕರ್ಮ ಸಮಾಜದ ಅಧ್ಯಕ್ಷರಾದ ಹಣಮಂತ ಬಡಿಗೇರ, ಪತ್ರಕರ್ತರಾದ ಮಹೇಶ ಆರಿ, ನ್ಯಾಯವಾದಿ ಮಹೇಶ ಬಡಿಗೇರ,ಸೋಮನಾಥ ಬಡಿಗೇರ ಸದಾಶಿವ ಬಡಿಗೇರ. ವೇದಿಕೆಯ ಮೇಲೆ ಉಪಸ್ಥಿತರಿದ್ದರು ಮುಖಂಡರಾದ ಮೋನಪ್ಪ ಬಟ್ಟಲ, ಗುರು ಬಾಳಿಗೇರಿ, ಮಲ್ಲಪ್ಪ ಬಾವಿಕಟ್ಟಿ, ನಾನಪ್ಪ ಬಟ್ಟಲ್ ಸುರೇಶ ಆಸಂಗಿ ,ಹಣಮಂತ ಗದ್ಯಾಳ ಸದಾಶಿವ ಬಡಿಗೇರ, ಡಾ ಬಿ ಡಿ ಸೊರಗಾಂವಿ, ಸಿದ್ದಗಿರೆಪ್ಪ ಕಾಗಿ,ಉಮೇಶ ಬಡಿಗೇರ, ಕುಮಾರ ಬಡಿಗೇರ,ಈರಣ್ಣ ಮಳಲಿ, ಸಂಜು ಬಡಿಗೇರ, ಭೀಮಶಿ ಬಡಿಗೇರ, ಕೃಷ್ಣ ತುಂಗಳ, ಮಾರುತಿ ಬಡಿಗೇರ, ಪ್ರಭು ಬೆಳಗಲಿ, ಸತೀಶ ಸೊರಗಾಂವಿ, ಸಂಜು ಜಮಖಂಡಿ, ಮಲ್ಲು ನಿಂಬರಗಿ, ಶಿವಾನಂದ ಕಿತ್ತೂರು, ಬಿ ಸಿ ಪೂಜಾರಿ, ಶ್ರೀಶೈಲಪ್ಪ ಬಾಡನವರ,ಮಹಾಂತೇಶ ಬಡಿಗೇರ,ರಮೇಶ ಬಡಿಗೇರ, ಡಾ ರಮೇಶ ಪತ್ತಾರ, ಮೋಹನ ಪತ್ತಾರ, ಚಂದ್ರಶೇಖರ ವೇದಪಾಠಕ, ರಾಮಚಂದ್ರ ಪತ್ತಾರ,ಸದಾಶಿವ ಲಾಳಕೆ, ಗಣಪತಿ ಸುತಾರ, ಮೌನೇಶ ಬಡಿಗೇರ, ವಿ ಎ ಗೌಡರ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಶಂಭು ಬಡಿಗೇರ ನಿರೂಪಿಸಿ ವಂದಿಸಿದರು.