ನಿರ್ಮಲ ಮನಸ್ಸಿನ ಭಕ್ತಿಗೆ ಕಾಳಿಕಾದೇವಿ ಕಾಮಧೇನು: ಶಂಕರಾತ್ಮನಂದ ಶ್ರೀ
ಮಹಾಲಿಂಗಪುರ : ಜಗತ್ತಿನಲ್ಲಿ ಅನಾಚಾರ, ಅತ್ಯಾಚಾರ ಮತ್ತು ದಬ್ಬಾಳಿಕೆ ಅಥವಾ ಮಾನವರು ಮಾನವೀಯ ಮೌಲ್ಯಗಳನ್ನೇ ಗಾಳಿಗೆ ತೂರಿ ವರ್ತಿಸಿದಾಗ ದೇವರು ಭೂಮಿಗೆ ಸರ್ವಶ್ರೇಷ್ಠರನ್ನು ಕಳುಹಿಸಿ ದುಷ್ಟರನ್ನು ಮಟ್ಟಹಾಕಿ ಮಾನವಧರ್ಮವನ್ನು ಕಾಯಂಗೊಳಿಸುತ್ತಾರೆ ಎಂದು ಅರೆಮಾದನಹಳ್ಳಿಯ ಶಿವಸುಜ್ಞಾನತೀರ್ಥ ಶ್ರೀಗಳು ಹೇಳಿದರು.
ಮಂಗಳವಾರ ನೂತನ ದೇವಸ್ಥಾನ ಉದ್ಘಾಟನೆ, ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ದಲ್ಲಿ ಮಾತನಾಡಿದ ಅವರು ಶಿವ ಮತ್ತು ಪಾರ್ವತಿಯರಲ್ಲಿ ಸೌಂದರ್ಯದ ವಾದದ ತೀರ್ೀಗೆ ಜಗತ್ತಿನ ಸೃಷ್ಟಿಕರ್ತ ವಿಶ್ವಕರ್ಮರೇ ನಿಲ್ಲಬೇಕಾಗುತ್ತದೆ. ಕಂಚಿನ ಧರ್ನವೊಂದರಲ್ಲಿ ಉಬಯ ಶರೀರಗಳನ್ನು ನೋಡಿಕೊಳ್ಳಲು ತಿಳಿಸಿದಾಗ ಮೈ ತುಂಬಾ ಬೂದಿ, ಕೊರಳಲ್ಲಿ ಹಾವು, ಕೈಯಲ್ಲಿ ಢಮರುಗ ಹೀಗೆ ಕುರೂಪಿತನ ನೋಡಿದ ಶಿವ ಕೋಪದಿಂದ ವಿಶ್ವಕರ್ಮನನ್ನು ಸುಡಲು ಅಣಿಯಾದಾಗ, ಪಾರ್ವತಿ ರಕ್ಷಿಸಲು ಮುಂದಾಗುತ್ತಾಳೆ ಈ ಕಾರಣದಿಂದ ಪಾರ್ವತಿಯ ಮುಖ ಸುಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಅಷ್ಟೇ ಅಲ್ಲದೆ ಅನೇಕ ಅವತಾರಗಳನ್ನು ತಾಳಿ ದುಷ್ಟರ ಸಂವಾರವನ್ನೂ ಮಾಡುತ್ತಾಳೆ ಎನ್ನುವ ಪ್ರತೀತಿ. ಅಂದಿನಿಂದ ವಿಶ್ವಕರ್ಮ ಸಮಾಜ ಈ ಕಾಳಿಕಾದೇವಿಯನ್ನು ಶ್ರದ್ಧೆ-ಭಕ್ತಿಯಿಂದ ಪೂಜಿಸುತ್ತ ಬಂದಿದ್ದಾರೆ ಎಂದರು.
ನಂತರ ಮಾತನಾಡಿದ ವಡ್ನಾಳದ ಶಂಕರಾತ್ಮನಂದ ಶ್ರೀಗಳು ಮಾತನಾಡಿ ನಿರ್ಮಲ ಮನಸ್ಸಿನ ಭಕ್ತಿಗೆ ಕಾಳಿಕಾದೇವಿ ಕಾಮಧೇನು.ವಿಶ್ವಾದ್ಯಂತ ವಿವಿಧ ನಾಮಗಳಿಂದ ದೇವಿಯನ್ನು ಪೂಜಿಸುತ್ತಾರೆ.ಉತ್ತರಭಾರತದಲ್ಲಿ ಸೃಷ್ಟಿಕಾರ್ಯದಲ್ಲಿ ಪ್ರಮುಖರೆಂದು ವಿಶ್ವಕರ್ಮರನ್ನೇ ಭಕ್ತರು ಪೂಜಿಸುತ್ತಾರೆಂದು ಸಮುದಾಯದಲ್ಲಿ ಪ್ರತೀತಿಯೂ ಇದೆ ಎಂದರು.
ನಂತರ ಮಾತನಾಡಿದ ನವಲಗುಂದದ ಅಜಾತ ನಾಗಲಿಂದ ಮಹಾಸ್ವಾಮಿ ಮಠದ ಶ್ರೀವಿರೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ್ ಸಮಾಜ ಒಂದಾಗಿ ಬಾಳಬೇಕು ಆಗಲೇ ಅಭಿವೃದ್ಧಿ ಸಾಧ್ಯ ಎಂದರು.
ಚಿಮ್ಮಡದ ಜನಾರ್ಧನ ಮಹಾರಾಜರು, ಶ್ರೀ ಗಣಪತಿ ಮಹಾರಾಜರು, ಶಿರಸಂಗಿಯ ಪ್ರೋ.ಪಿ.ಬಿ ಬಡಿಗೇರ, ,ಚಲನಚಿತ್ರ ನಟಿ ಶ್ರೀಮತಿ ವೀಣಾ ಸುಂದರ, ವಸಂತರಾವ ಕಮ್ಮಾರ, ಚಲನಚಿತ್ರ ನಿರ್ದೇಶಕರಾದ ಮಂಜುನಾಥ್ ಬಡಿಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯಮಾನ್ಯರನ್ನು ಕಮೀಟಿ ಸದಸ್ಯರು ಸನ್ಮಾನಿಸಿದರು. ರೆಡ್ಡಿ ಸಮಾಜ ಹಣಮಂತ ಬಡಿಗೇರ ದಂಪತಿಗಳನ್ನು ಸನ್ಮಾನಿಸಿದರು.
ಅತಿಥಿಗಳಾಗಿ ಕಾನಿಪ ಸಂಘದ ಅಧ್ಯಕ್ಷ ಮಹೇಶ ಆರಿ, ಎಸ್ ಬಿ ಮಾಯಾಚಾರ, ಡಾ ಎ ಆರ್ ಬೆಳಗಲಿ, ಸಮಾಜದ ಮುಖಂಡರಾದ ಶಂಭು ಬಡಿಗೇರ, ಸೋಮು ಬಡಿಗೇರ, ಸಿದ್ದರಾಮ ಬಡಿಗೇರ, ನ್ಯಾಯವಾದಿ ಮಹೇಶ ಬಡಿಗೇರ, ಆನಂದ ಸೋನಾರ, ಸುರೇಶ ಆಸಂಗಿ, ಸದಾಶಿವ ಸಾವಳಗಿ, ಉಮೇಶ ಬಡಿಗೇರ, ಮೋನಪ್ಪ ಪತ್ತಾರ, ಎಂ ಕೆ ಪತ್ತಾರ, ಮೋಹನ ಬಟ್ಟಲ, ಈರ್ಪ ಮಳಲಿ, ಈರ್ಪ ಬಡಿಗೇರ, ಸಂಜು ಬಡಿಗೇರ, ಮಹಾಲಿಂಗ ಬಟ್ಟಲ, ಮಲ್ಲು ಸೋನಾರ, ಸಂತೋಷ ಬಡಿಗೇರ, ವಿನಯ ಬಡಿಗೇರ, ನಾರಾಯಣ ಪತ್ತಾರ, ಸಿದ್ದು ಬಡಿಗೇರ,ಗಣ್ಯರಾದ ಯಲ್ಲನಗೌಡ ಪಾಟೀಲ, ಮಹಾಲಿಂಗ ತಟ್ಟಿಮನಿ,ಮಲ್ಲನಗೌಡ ಪಾಟೀಲ, ಸುನೀಲಗೌಡ ಪಾಟೀಲ, ಕೃಷ್ಣಗೌಡ ಪಾಟೀಲ,ಕುಮಾರ್ ಕುಳಲಿ ದತ್ತು ಪತ್ತಾರ, ಚೂಡಪ್ಪ ಬಟ್ಟಲ, ನಾನಪ್ಪ ಬಟ್ಟಲ, ಶೇಖರ್ ಬಾಳಿಗೇರಿ, ಗುರು ಬಾಳಿಗೇರಿ ಸೇರಿದಂತೆ ಹಲವರು ಇದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಹನುಮಂತ ಬಡಿಗೇರ್ ವಹಿಸಿ ಶಿರಸಂಗಿಯ ಶ್ರೀಕಾಂತ್ ಪತ್ತಾರ ನಿರೂಪಿಸಿ ವಂದಿಸಿದರು.