ಕಲಬುರ್ಗಿ ವಲಯದ ಪುರುಷರ ಫುಟ್ಬಾಲ್ ಬಿಡಿಎ ಕ್ರೀಡಾಂಗಣದಲ್ಲಿ ಪ್ರಾರಂಭ
ಬಳ್ಳಾರಿ 22: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರ್ಗಿ ವಲಯ ಸಹಯೋಗದಲ್ಲಿ ವಿಟಿಯು ಹಿ ಕಲಬುರ್ಗಿ ವಲಯದ ಪುರುಷರ ಫುಟ್ಬಾಲ್ ಪಂದ್ಯಗಳ ಉದ್ಘಾಟನಾ ಸಮಾರಂಭವು ಬಳ್ಳಾರಿಯ ಬಿಡಿಎ ಫುಟ್ಬಾಲ್ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ವಿ.ವಿ.ಸಂಘ ಉಪಾಧ್ಯಕ್ಷರು ಹಾಗೂ ಆರ್ವೈಎಂಇಸಿ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಮುಖ್ಯ ಅತಿಥಿ ಅಯ್ಯನಗೌಡ ವಿ. ಪಾಟೀಲ ಪೊಲೀಸ್ ನೀರೀಕ್ಷಕರು, ಸಂಚಾರ ಪೊಲೀಸ್ ಠಾಣೆ, ಬಳ್ಳಾರಿ ಗ್ರೇಸಿ ಸಹಾಯಕ/ನಿರ್ದೇಶಕರು, ಕ್ರೀಡೆ ಮತ್ತು ಯುವ ಎಂಪೋರಿಯಂ, ಬಳ್ಳಾರಿ ಜಿಲ್ಲೆ, ಆರ್ವೈಎಂಇಸಿ ಪ್ರಾಚಾರ್ಯರು ಡಾಽಽ ಟಿ.ಹನುಮಂತ ರೆಡ್ಡಿ, ವೈಸ್ ಪ್ರಿನ್ಸಿಪಾಲ್ ಡಾಽಽ ಸವಿತಾ ಸೋನೋಳಿ, ದೈಹಿಕ ಶಿಕ್ಷಣ ನಿರ್ದೇಶಕ ವಿಜಯ್ ಮಹಾಂತೇಶ್, ಇನ್ನಿತರ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಮಹಮ್ಮದ್ ಗಫೂರ್, ಮಂಜುನಾಥ್, ಅಶೋಕ್ ಭೂಪಾಲ್, ಈರಣ್ಣ, ಪ್ರದ್ಯಾಪಕಿ ಗಂಗಾ ಮಹೇಶ ಸಜ್ಜನ್ ಮತ್ತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರ್ಗಿ ವಲಯದ ಆರು ಫುಟ್ಬಾಲ್ ತಂಡಗಳು ಭಾಗವಹಿಸಿದ್ದವು.
ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಮುಖ್ಯ ಅತಿಥಿ ಅಯ್ಯನಗೌಡ ವಿ. ಪಾಟೀಲ ಪೊಲೀಸ್ ನೀರೀಕ್ಷಕರು ಆಗಮಿಸಿದ ತಂಡಗಳಿಗೆ ಶುಭಹಾರೈಸಿ “ಫುಟ್ಬಾಲ್ ಆಟ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಜನಪ್ರಿಯ ಆಟವಾಗಿದೆ, ಈ ಆಟವು ಉತ್ತಮ ಶಕ್ತಿ, ದೈಹಿಕ, ಮಾನಸಿಕ ಸದೃಢತೆಯನ್ನು ನೀಡುತ್ತದೆ, ಮೈದಾನದಾದ್ಯಂತ ಓಡುವ ಆಟಗಾರರಿಗೆ ದೇಹಕ್ಕೆ ಉತ್ತಮ ವ್ಯಾಯಾಮವನ್ನು ಒದಗಿಸುತ್ತದೆ” ಎಂದರು, ಅಧ್ಯಕ್ಷರು ಜಾನೇಕುಂಟೆ ಬಸವರಾಜ, “ಎಂಜಿನಿಯರ್ಗಳಂತಹ ವೃತ್ತಿಪರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ದೈಹಿಕ ಸಾಮರ್ಥ್ಯವು ಮುಖ್ಯವಾಗಿದೆ ಈ ತರಹದ ಪಂದ್ಯಾವಳಿಗಳು ಜರುಗುವುದರಿಂದ ಕ್ರೀಡೆಯಲ್ಲಿ ಒಳ್ಳೆಯ ಪ್ರತಿಭಾವಂತರನ್ನು ಕಂಡುಕೊಳ್ಳಲು ಸುಲಭವಾಗುತ್ತದೆ. ಈ ತರಹದ ಕ್ರೀಡಾ ಕಾರ್ಯಕ್ರಮಗಳಿಗೆ ನಮ್ಮ ಆಡಳಿತಮಂಡಳಿ ಹಾಗು ನಮ್ಮ ಮಹಾವಿದ್ಯಾಲಯವು ಸದಾ ಪ್ರೋತ್ಸಾಹವನ್ನು ನೀಡಲು ಬಯಸುತ್ತದ” ಎಂದರು, ಆರ್ವೈಎಂಇಸಿ ಪ್ರಾಚಾರ್ಯರು ಡಾಽಽ ಟಿ.ಹನುಮಂತ ರೆಡ್ಡಿ, “ವಿಜೇತರು ಹಾಗೂ ಸೋತವರು ಸಕಾರತ್ಮಕವಾಗಿ ಭಾವಿಸಬೇಕು ಮತ್ತು ನಿಮ್ಮ ಆಟಗಳ ವಿಧಾನವನ್ನು ಸುಧಾರಿಸಲು ಪ್ರಯತ್ನಿಸಬೇಕು. ಸೋಲು ಗೆಲುವಿನ ಮೆಟ್ಟಿಲು ಎಂಬುವುದು ನೆನಪಿರಲಿ ಕ್ರೀಡೆಗಳು ವೈರತ್ವವನ್ನು ಮರೆಸಲು ಹಾಗು ಸ್ನೇಹವನ್ನು ಹೆಚ್ಚಿಸಿಕೊಳ್ಳುವ ರಹದಾರಿಗಳಾಗಿರುತ್ತವೆ” ಎಂದರು. ಆರಂಭದ ಮ್ಯಾಚ್ ಪಿ.ಡಿ.ಐ.ಟಿ- ಪ್ರೌಡದೇವರಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ವಿಜಯನಗರ ಜಿಲ್ಲೆ ಹಾಗೂ ಬಿ.ಎಲ್.ಡಿ.ಏ’ನ ಡಾಽಽ ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ್ಘ ಟೆಕ್ನಾಲಜಿ ಕಾಲೇಜು ಬಿಜಾಪುರದ ನಡುವೆ ಜರುಗಿತು.