ವೀರಶೈವ ಲಿಂಗಾಯತ ಸಮಾಜಕ್ಕೆ ಕಲಬುರ್ಗಿ ಅವಿರೋಧ ಆಯ್ಕೆ
ಮುದ್ದೇಬಿಹಾಳ 04::ಪಟ್ಟಣದ ಖಾಸ್ಗತೇಶ್ವರ ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ಪ್ರಭುರಾಜ ಕಲಬುರ್ಗಿ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರು ಸರ್ವಾನುಮತದಿಂದ ಅದನ್ನು ಅನುಮೋದಿಸಿದರು. ಇದೇ ವೇಳೆ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿಗೆ ತಮ್ಮ ತಂದೆ ಲಿಂ.ರಾಚಪ್ಪ ಕಲಬುರಿ್ಗ ಹೆಸರಿನಲ್ಲಿ 13 ಲಕ್ಷ ವೆಚ್ಚದ ಶವಸಾಗಣಾ ವಾಹನವನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು. ಸಭೆಯಲ್ಲಿ ಹಿರಿಯರಾದ ಎಸ್.ಬಿ.ಬಂಗಾರಿ ಹಾಗೂ ಪುರಸಭೆ ಸದಸ್ಯ ಚನ್ನಪ್ಪಣ್ಣ ಕಂಠಿ ಮಾತನಾಡಿದರು. ಸಭೆಯಲ್ಲಿ ಗಣ್ಯರಾದ ಅಶೋಕ ಚಟ್ಟೇರ, ಬಿ.ಎಸ್.ಲಿಂಗದಳ್ಳಿ, ವೆಂಕನಗೌಡ ಪಾಟೀಲ, ಬಾಪುಗೌಡ ಪಾಟೀಲ, ಬಸವರಾಜ ನಾಲತವಾಡ, ಮುರಿಗೆಪ್ಪ ಮೋಟಗಿ, ಅಶೋಕ ನಾಡಗೌಡ, ರಾಜೇಂದ್ರ ರಾಯಗೊಂಡ, ಮಹಾಂತೇಶ ಬೂದಿಹಾಳಮಠ, ರಾಜು ಬಳ್ಳೊಳ್ಳಿ, ಅಶೋಕ ಚಿನಿವಾರ, ಶಿವಕುಮಾರ ಬಿರಾದಾರ, ಮುತ್ತು ಕಡಿ,ರಾಜಶೇಖರ ಕರಡ್ಡಿ, ಸುಧೀರ ನಾವದಗಿ, ಪ್ರವೀಣ ನಾಗಠಾಣ, ಬಸು ಗೋನಾಳ, ಹರೀಶ ಬೇವೂರ, ಭೀಮನಗೌಡ ಪಾಟೀಲ, ಶಿವು ಹುರಕಡ್ಲಿ, ಸಂಗಮೇಶ ನಾವದಗಿ ಮತ್ತಿತರರು ಉಪಸ್ಥಿತರಿದ್ದರು.
ಮುದ್ದೇಬಿಹಾಳ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಪಟ್ಟಣದ ಪ್ರಭುರಾಜ ಕಲಬುರ್ಗಿ ಶನಿವಾರ ಆಯ್ಕೆಯಾದರು.