ಮಹಲಿಂಗಪುರ

ಕಬಡ್ಡಿ: ಮಹಾರಾಷ್ಟ್ರದ ಸಾಹು ಸಡೋಲಿ ತಂಡ ಪ್ರಥಮ

ಕಬಡ್ಡಿ: ಮಹಾರಾಷ್ಟ್ರದ ಸಾಹು ಸಡೋಲಿ ತಂಡ ಪ್ರಥಮ

ಮಹಾಲಿಂಗಪುರ ೧೮: ಕಬಡ್ಡಿ ದೇಸಿ ಕ್ರೀಡೆ,  ಯುವಜನಾಂಗಕ್ಕೆ ಪುಷ್ಟಿ ನೀಡುವ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುವ ಆಟವಾಗಿದೆ ಎಂದು ಮಹಾಲಿಂಗಪುರದ ಹಿರಿಯ ಕಾಂಗ್ರೆಸ್ ನಾಯಕ ಡಾ.ಎ.ಆರ್. ಬೆಳಗಲಿ ಹೇಳಿದರು. 

ನಗರದ ಕೋಹಿನೂರ್ ಯೂಥ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ  ಅಂತರ್ ರಾಜ್ಯ ಮಟ್ಟದ  ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯ ಬಹುಮಾನ ವಿತರಿಸಿ ಮಾತನಾಡಿದರು.

ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಹಾಗೂ ಅರ್ಜುನ್ ಪ್ರಶಸ್ತಿ ಪುರಸ್ಕೃತ  ಬಿ.ಸಿ. ರಮೇಶ್ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಕಬಡ್ಡಿ ಆಟಗಾರರು ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಬೇಕು. ಈ ಭಾಗದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ, ಆಟಗಾರರನ್ನು ನಮ್ಮ ಬಾಗಲಕೋಟೆ ಜಿಲ್ಲೆಯ ಅಮೆಚೂರ್ ಸಂಘಟನಾ ಕಾರ್ಯದರ್ಶಿ ನಂದಕುಮಾರ ಪಾಟೀಲ ಅವರು ಬಹು ವರ್ಷಗಳಿಂದ ಬೆಳೆಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. 

ಎರಡು ದಿನಗಳ ಕಾಲ ನಡೆದ ಈ ಅಂತರಾಜ್ಯ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ  30 ತಂಡಗಳು ಭಾಗವಹಿಸಿದ್ದವು.

ಮಹಾರಾಷ್ಟ್ರ ಸಾಹು ಸಡೋಲಿ ತಂಡ ಡಾ. ಎ. ಆರ್. ಬೆಳಗಲಿ ಅವರು ನೀಡಿದ  ಪ್ರಥಮ ಬಹುಮಾನ 25 ಸಾವಿರ,  ಕರ್ನಾಟಕದ ನಾಗನೂರಿನ ಮಹಾಲಕ್ಷ್ಮಿ ತಂಡ ಪುರಸಭೆ ಸದಸ್ಯ ರಾಜು ಬಾವಿಕಟ್ಟಿ ನೀಡಿದ ದ್ವಿತೀಯ ಬಹುಮಾನ 15 ಸಾವಿರ,  ಮಹಾರಾಷ್ಟ ್ರದ ಶಿವ ಸಾಹು ಸಡೋಲಿ ತಂಡ ಪ್ರಕಾಶ ಓಸ್ವಾಲ ನೀಡಿದ  ತೃತೀಯ ಬಹುಮಾನ 10 ಸಾವಿರ,  ಸೊಲ್ಲಾಪುರದ ಜಿಲ್ಲಾ ತಂಡ ಅರಾಫತ ಜಂಬಗಿ ನೀಡಿದ  ಚತುರ್ಥ ಬಹುಮಾನ 5 ಸಾವಿರ ನಗದು ಹಣವನ್ನು ಪಡೆದವು. ****

ನಗರದ ಗಣ್ಯರಾದ ಯಲ್ಲನಗೌಡ ಪಾಟೀಲ್,  ಜಾವೇದ್ ಅಲಿ ಭಾಗವಾನ್,  ಮಹಾಂತೇಶ್ ಹಿಟ್ಟಿನಮಠ,  ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ್, ಬಲವಂತಗೌಡ ಪಾಟೀಲ್, ಬಶೀರ್ ಸೌದಾಗರ್, ನಿಯಾಜ್ ಪಟೇಲ್, ಪೈಗಂಬರ್ ಪೆಂಡಾರಿ, ಬಕ್ಷಿಸಾಬ ಯಾದವಾಡ,  ಸುನೀಲ್ ಗೌಡ ಪಾಟೀಲ್, ಕಮಲ್ ತರ್ಕಾರ,  ವಿರುಪಾಕ್ಷಿ ಭಾಟ್, ಮಂಜು ಬಕರೆ, ಚನ್ನಯ್ಯ ಚೆಟ್ಟಿಮಠ, ಯಾಸೀನ್ ಅತ್ತಾರ್, ಕೇದಾರಿ ಶಿಂದೆ,ಶಂಕರ ಗೊಂಬಿ, ರಮೇಶ್ ಹರಕಂಗಿ, ಬಸವರಾಜ್ ಹುಂಡೆಕಾರ, ಸೈಯದ್ ಯಾದವಾಡ, ಹೀಗೆ ಮುಂತಾದವರು ಪಂದ್ಯಾವಳಿಗೆ ಸಹಾಯಧನ  ಮತ್ತು ಪಾರಿತೋಷಕಗಳನ್ನು ನೀಡಿದರು.

ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹನುಮಂತೇಗೌಡರು, ಕಾರ್ಯದರ್ಶಿ ಮುನಿರಾಜು, ಬಾಗಲಕೋಟ ಜಿಲ್ಲಾ ಅಮೇಚೂರ್ ಕಬಡ್ಡಿ ಕಾರ್ಯದರ್ಶಿ ಮಹಾಂತೇಶ್ ಮುಕ್ಕಣ್ಣವರ, ಮುಖ್ಯ ಅತಿಥಿಗಳಾಗಿ ಶೇಖರ್ ಅಂಗಡಿ,  ಸಿದ್ದಪ್ಪ ಕೊಣ್ಣೂರ್, ಮುಸ್ತಾಕ್ ಚಿಕ್ಕೋಡಿ, ರಾಜು ಭಾವಿಕಟ್ಟಿ,  ಈಶ್ವರ ಚಮಕೇರಿ, ನಯನಚಂದ ಓಸ್ವಾವಾಲ್, ಶಾನೂರ್  ಜಂಬಗಿ, ಗಣಪತಿ ಸಣ್ಣಕ್ಕಿ,  ಮುತ್ತು ಢವಳೇಶ್ವರ, ಲಕ್ಷ್ಮಣ್ ಕಿಶೋರಿ, ಗನಸಯೀದ್ ಜಂಗಿ, ರಿಯಾಜ್ ಪೆಂಡಾರಿ, ಮೆಹಬೂಬ್ ಜಮಾದಾರ್, ಮಲಿಕ್ ಖಾಲೆಖಾನ್, ಬಶೀರ್ ಕಂಬಾಗಿ, ಸುರೇಶ್ ಕೌಜಲಗಿ, ಮೂರ್ತುಜ ಗೋರಿಬುಡ್ಡಿ, ಅಲಿ ಅವಟಿ, ಪ್ರಭು ಬಂದಕನವರ್, ಮಹೇಶ್ ಗೌಂಡಿ ಉಪಸ್ಥಿತರಿದ್ದರು.

ಅಬ್ದುಲ್ ಪೆಂಡಾರಿ, ಇರ್ಶಾದ್ ಪಟೇಲ್, ರಿಯಾಜ್ ಪೆಂಡಾರಿ, ಆರ್ ವಾಯ್ ಮೇತ್ರಿ, ಜಂಬಾಟ್ ಕರೋಶಿ ಪಂದ್ಯಾವಳಿ ಸಂಘಟಿಸಿದ್ದರು.

ಸುದ್ದಿ ಓದಿ