ಮಹಾಲಿಂಗಪುರ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ವೈದ್ಯ ದಿನಾಚರಣೆ ! ಕೆಎಲ್ಇ ಪಾಲಿಟೆಕ್ನಿಕ್ ಶೇ.100ರಷ್ಟು ವ್ಯಾಕ್ಸಿನ್ ಪಡೆದ ಕ್ಯಾಂಪಸ್.
ಮಹಾಲಿಂಗಪುರ 05 : ಕೆಎಲ್ಇ ಪಾಲಿಟೆಕ್ನಿಕ್ ಶೇ.100ರಷ್ಟು ವ್ಯಾಕ್ಸಿನ್ ಪಡೆದ ಕ್ಯಾಂಪಸ್ ಆಗಿರುವ ವಿಷಯ ಕೇಳಿ ಸಂತೋಷವಾಯಿತು ಎಂದು ರನ್ನಬೆಳಗಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಶ್ರೀಮತಿ ಎಸ್.ಎಂ.ನಾಗರಾಳ ಕೋವಿಡ್ ಬರದಂತೆ ತಡೆಯುವ ಲಸಿಕೆ ಪಡೆದಿರುವ ಶಾಲೆಯ ಕಾಳಜಿಯನ್ನು ಕೊಂಡಾಡಿದರು.
ಮಹಾಲಿಂಗಪುರ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ವೈದ್ಯ ದಿನಾಚರಣೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗರ್ಭಿಣಿಯರು ಮತ್ತು ಎದೆ ಹಾಲು ಕುಡಿಸುವ ತಾಯಂದಿರು ಕೂಡ ಕಡ್ಡಾಯ ಲಸಿಕೆ ನಡೆಯಬೇಕು ಅಲ್ಲದೆ ಇಂದಿನಿಂದ ಸರಕಾರಿ ಆದೇಶವೂ ಸಹಿತ ಆಗಿರುವುದರಿಂದ, ಎಲ್ಲರೂ ಲಸಿಕೆಯನ್ನು ಪಡೆದು ಮಹಾಮಾರಿ ಕೊರೋನಾವನ್ನು ಓಡಿಸೋನವೆಂದರು.
ಇನ್ನೋರ್ವ ಅತಿಥಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಬಿ.ಅಂಬಿ ಅವರು ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ವೈದ್ಯರು ಮತ್ತು ಆರೋಗ್ಯ ನೀರೀಕ್ಷಕರನ್ನು ಗುರುತಿಸಿ ಗೌರವಿಸುವ ಮೂಲಕ ತಾಂತ್ರಿಕ ಕಾಲೇಜು ವೈದ್ಯಕೀಯ ಕಾಳಜಿಯನ್ನು ಮೆರೆದಿದೆ. ದೇಶದ ಜನತೆ ಕೊರೊನಾದಿಂದ ಬಚಾವಾಗಲು ಲಸಿಕೆಯೇ ಬ್ರಹ್ಮಾಸ್ತ್ರವಾಗಿದ್ದು, ಸರಕಾರ ಲಸಿಕೆ ಪಡೆಯದವರಿಗೆ ರೇಶನ್ ಮತ್ತು ಇತರೆ ಸರಕಾರಿ ಸೌಲಭ್ಯಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರೆ ಮಾತ್ರ ಲಸಿಕಾ ಅಭಿಯಾನ ಪೂರ್ಣಗೊಳ್ಳುತ್ತದೆ ಎಂದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಜೀವದ ಹಂಗು ತೊರೆದು ರೋಗಿಯ ಜೀವ ರಕ್ಷಣೆ ಮಾಡುವ ವೈದ್ಯರು, ಕಣ್ಣಿಗೆ ಕಾಣದ, ಅವರ ಅಗಾಧ ಶಕ್ತಿಗೆ ಭಗವಂತನ ಪ್ರೇರಣೆ ಇದ್ದಂತೆ ಸರಿ.ರೋಗ ಕಾಲದಲ್ಲಿ ಕಷ್ಟಪಡುವವನಿಗೆ ಮಾತ್ರ ಮಹತ್ವದ ಅರಿವಾಗುತ್ತದೆ ಆದ್ದರಿಂದ ಕೋವಿಡ್ ರೆಸಿಪಿಯನ್ನು ಪಡೆದು ರೋಗದಿಂದ ದೂರವಿರಿ ಎಂದರು.
ರನ್ನಬೆಳಗಲಿ ಆರೋಗ್ಯ ನೀರೀಕ್ಷಕ ಡಿ.ಬಿ.ನಾಗನೂರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಸುರಕ್ಷತಾ ಜಾಗೃತಿ ಮೂಡಿಸಿದರೆ, ಜಿಲ್ಲಾ ಕಾನಿಪ ಉಪಾಧ್ಯಕ್ಷ ಜಯರಾಂಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಕೆಎಲ್ಇ ಡಿಪ್ಲೋಮಾ ಕಾಲೇಜ್ನ ಶುಚಿತ್ವ, ಆರೋಗ್ಯಕರ ಪರಿಸರ ಹಾಗೂ ವೈದ್ಯರ ಬಗ್ಗೆ ಹೊಂದಿದ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಂಜಯ ತೇಲಿ, ಡಾ.ಎಸ್.ಎಂ.ನಾಗರಾಳ, ವೈದ್ಯ ಮಹಾಂತೇಶ ಯಂಕಚ್ಚಿ, ಆರೋಗ್ಯ ನೀರೀಕ್ಷಕರಾದ ಡಿ.ಬಿ.ನಾಗನೂರ, ಎಂ.ಬಿ.ಗೋಣಿ ಅವರನ್ನು ಸನ್ಮಾನಿಸಲಾಯಿತು.
ಉಮೇಶ ಹಾದಿಮನಿ, ಸವಿತಾ ಗೊಂದಿ, ಸುಭಾಷ್ ಮೂಶಿ, ಮಂಜುನಾಥ ಅರಕೇರಿ, ವಂದನಾ ಪಸಾರ, ಪ್ರಿಯಾ ಸೋನಾರ, ಈಶ್ವರ ಹೂಲಿ, ಪ್ರವೀಣ ಅವರಾದಿ, ರಾಚಣ್ಣ ಕಾಳಗಿ, ಮಿನಾಜ ಅತ್ತಾರ, ವಿಶಾಲ ಮೆಟಗುಡ್ಡ, ಗುರುರಾಜ ಅಥಣಿ, ನೀಲಾ ಪಾಟೀಲ, ಅಂಜನಾ ಮಾಲಾಜ್, ನಿರ್ಮಲಾ ಫಕೀರಪುರ, ಜ್ಯೋತಿ ಕುರಿ, ಶಂಕರ ಪೂಜಾರಿ, ನೇತ್ರಾವತಿ ಕುರಿ, ಗೀತಾ ಉಪಾಸೆ, ಕೀರ್ತಿ ಗೊಂದಿ, ಶಿಲ್ಪಾ ಬೀರನಗಡ್ಡಿ ಇದ್ದರು. ಮಹಾದೇವಿ ಅಂಬಿ ಸ್ವಾಗತಿಸಿದರು. ಪ್ರಿಯಾಂಕಾ ನಿಶಾನದಾರ ನಿರೂಪಿಸಿ, ಅಭಿಷೇಕ ಮುರಗುಂಡಿ ವಂದಿಸಿದರು.