ಮಹಲಿಂಗಪುರ

ಕೆಎಲ್‌ಇ ಡಿಪ್ಲೋಮಾ ಕ್ಯಾಂಪಸ್ ಸಂದರ್ಶನ: 226 ಅಭ್ಯರ್ಥಿಗಳು ಆಯ್ಕೆ

ಕೆಎಲ್‌ಇ ಡಿಪ್ಲೋಮಾ ಕ್ಯಾಂಪಸ್ ಸಂದರ್ಶನ: 226 ಅಭ್ಯರ್ಥಿಗಳು ಆಯ್ಕೆ

ಮಹಾಲಿಂಗಪುರ 16: ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಏರಿ​‍್ಡಸಿದ್ದ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ ಮೈಸೂರಿನ ಟಿವಿಎಸ್ ಮೋಟಾರ್ ಕಂಪನಿಯವರು ಏರಿ​‍್ಡಸಿದ್ದ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ 226 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.  

ಯಾವುದೇ ಡಿಪ್ಲೋಮಾ ಇಂಜನಿಯರಿಂಗ್, ಐಟಿಐ  ಪಾಸಾದ ಯಾವುದೇ ಅಭ್ಯರ್ಥಿಗಳು ಹಾಗೂ ಬಿಎ, ಬಿಕಾಂ, ಬಿಎಸ್‌ಸಿ, ಬಿಸಿಎ ಯಾವುದೇ ಪದವಿ ಪಡೆದ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ಅರ್ಜಿ ಕರೆಯಲಾಗಿತ್ತು. ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಯಿಂದ ಅಥಣಿ, ಬೆಳಗಾವಿ, ಹಾರೂಗೇರಿ, ಬಾಗಲಕೋಟೆ, ತೇರದಾಳ, ಚಿಮ್ಮಡ, ಜಮಖಂಡಿ, ಮಹಾಲಿಂಗಪುರ, ಮುಧೋಳ ಕಾಲೇಜುಗಳಿಂದ ಅಂದಾಜು 300 ಅಭ್ಯರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದವರಲ್ಲಿ ಶೇ. 75 ರಷ್ಟು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಲ್ಲಿ ಶೇ. 65 ರಷ್ಟು ಅಭ್ಯರ್ಥಿಗಳು ಮಹಿಳೆಯರು ಎಂಬುದು ಗಮನಾರ್ಹ. 

ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಒಟ್ಟು 226 ಅಭ್ಯರ್ಥಿಗಳು ಆಯ್ಕೆಯಾದರು. ಅದರಲ್ಲಿ 78 ಪುರುಷ ಅಭ್ಯರ್ಥಿಗಳು ಆಯ್ಕೆಯಾದರೆ, 148 ಜನ ಮಹಿಳಾ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಕ್ಯಾಂಪಸ್ ಸಂದರ್ಶನದ ಪೂರ್ವದಲ್ಲಿ ನಡೆದ ಪರಿಚಯ ಕಾರ್ಯಕ್ರಮದಲ್ಲಿ ಇಡೀ ಸಭಾಭವನ ಮಹಿಳಾ ಅಭ್ಯರ್ಥಿಗಳಿಂದಲೇ ತುಂಬಿತ್ತು. ಅವರ ಓದ್ಯೋಗಿಕ ಉತ್ಸಾಹ ಕಂಡು ಕಂಪನಿಯವರು ಬೆರಗಾದರು.  ಕಂಪನಿ ಪರಿಚಯಿಸಿದ ಕೆಲಸದ ವೈಖರಿ, ವೇತನ, ಸೌಲಭ್ಯ, ವಾಸ್ತವ್ಯ, ರಿಸ್ಕ್‌ ಸೇರಿದಂತೆ ಎಲ್ಲವನ್ನೂ ತಿಳಿದ ಮೇಲೂ ತಾನು ಸಿದ್ದ ಎಂದು ಸಂದರ್ಶನಕ್ಕೆ ಸನ್ನದ್ದರಾಗಿ ಅಂತಿಮವಾಗಿ ಆಯ್ಕೆಯಾದರು. 

ಡಿಪ್ಲೋಮಾ, ಐಟಿಐ ಸೇರಿದಂತೆ ತಾಂತ್ರಿಕ ವಿದ್ಯಾರ್ಥಿಗಳು ಮೋಟಾರ್ ಕಂಪನಿಗಳಿಗೆ ಕೆಲಸಕ್ಕೆ ಸೇರುವುದು ವಾಡಿಕೆ. ಆದರೆ ಪದವಿ ವಿದ್ಯಾರ್ಥಿಗಳು ಅದರಲ್ಲೂ ಮಹಿಳಾ ಅಭ್ಯರ್ಥಿಗಳು ಆಸಕ್ತಿಯಿಂದ ಭಾಗವಹಿದ್ದು ನೋಡಿದರೆ ಉದ್ದುದ್ದ ಕಲಿಯುವುದಕ್ಕಿಂತ ಬೇಗ ಉದ್ಯೋಗ ಮಾಡುವುದು ಲೇಸು ಎಂಬಂತಿತ್ತು. ಬರೀ ಟೀಚಿಂಗ್ ಮತ್ತು ನರ್ಸಿಂಗ್ ಕ್ಷೇತ್ರಕ್ಕೆ ಸೀಮಿತವಾಗುತ್ತಿದ್ದ ಮಹಿಳೆಯರು ಸ್ಕಿಲ್ ಮೂಲಕ ಓದ್ಯೋಗಿಕ ಕ್ಷೇತ್ರದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ವಿಶೇಷ ಬೆಳವಣಿಗೆ. 

- ಎಸ್‌.ಐ.ಕುಂದಗೋಳ ಪ್ರಾಚಾರ್ಯ,

ಕೆಎಲ್‌ಇ ಡಿಪ್ಲೋಮಾ ಕಾಲೇಜ್ ಮಹಾಲಿಂಗಪುರ. 


ಸುದ್ದಿ ಓದಿ