ಮಹಲಿಂಗಪುರ

ಕೆಎಲ್‌ಇ ಕಾಲೇಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೆಎಲ್‌ಇ ಕಾಲೇಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಹಾಲಿಂಗಪುರ 21: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನ ವಿದ್ಯಾರ್ಥಿಗಳು  ರನ್ನಬೆಳಗಲಿಯಲ್ಲಿ ನಡೆದ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಭಾಗಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಬಾಲಕರ ವಾಲಿಬಾಲ್ ಮತ್ತು ಥ್ರೋಬಾಲ್ ಪ್ರಥಮ, ಬಾಲಕಿಯರ ವಾಲಿಬಾಲ್ ದ್ವಿತೀಯ, ಶಟಲ್ ಬ್ಯಾಡ್ಮಿಂಟನ್ ಪ್ರಥಮ, ಕ್ರಾಸ್ ಕಂಟ್ರಿ 4 ವಿದ್ಯಾರ್ಥಿಗಳು ಪ್ರಥಮ, ಬಾಲಕಿಯರ 4*400 ರಿಲೇ ಪ್ರಥಮ, ಬಾಲಕರ ರಿಲೇ ದ್ವಿತೀಯ, ಗುಂಡು ಎಸೆತ ಮಹಾಲಿಂಗ ಘಂಟಿ ಪ್ರಥಮ, 3 ಸಾವಿರ ಮೀ ಓಟ ಬಸವರಾಜ ಲೋನಾರ ಪ್ರಥಮ, 1500 ಮೀ ಓಟ ಆನಂದ ನಾಗನೂರ ಪ್ರಥಮ, 100 ಮೀ ಓಟ ವರ್ಷಾ ಆಡಿನ್ ಪ್ರಥಮ, ಎತ್ತರ ಜಿಗಿತ ಸುಕನ್ಯಾ ಗುಡ್ಡದ ದ್ವಿತೀಯ, ಚಿದಾನಂದ ಬ್ಯಾಕೋಡ ತೃತೀಯ, ವಾಲಿಬಾಲ್ ಪಂದ್ಯದಲ್ಲಿಉತ್ತಮ ಆಲ್‌ರೌಂಡರ್ ಪೂರ್ಣಿಮಾ ಹಿರೇಮಠ, ಉತ್ತಮ ದಾಳಿಗಾರ ಮಹಾಲಿಂಗ ಘಂಟಿ ಆಯ್ಕೆಯಾಗಿದ್ದಾರೆ. ರವೀಂದ್ರ ಕಲ್ಲೋಳಿ ವ್ಯವಸ್ಥಾಪಕರಾಗಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎಂ.ಸಿದ್ನಾಳ ಮಾರ್ಗದರ್ಶನ ಮಾಡಿದ್ದರು ಎಂದು ಪ್ರಾಚಾರ್ಯ ಎಲ್‌.ಬಿ.ತುಪ್ಪದ ತಿಳಿಸಿದ್ದಾರೆ.  



ಸುದ್ದಿ ಓದಿ