ಕೆಎಲ್ಇ ಕಾಲೇಜ್ ಸಾಧನೆ, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮಹಾಲಿಂಗಪುರ 18 : ಸಮೀಪದ ಕೆಸರಗೊಪ್ಪ ಸರಕಾರಿ ಪಪೂ ಕಾಲೇಜಿನಲ್ಲಿ ಮಾ.15, 16 ರಂದು ನಡೆದ 2020-21ನೇ ಸಾಲಿನ ಮುಧೋಳ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ಮಹಾಲಿಂಗಪುರದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಪೂ ಕಾಲೇಜಿನ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ಗುಂಡು ಎಸೆತದಲ್ಲಿ ಅಪೂರ್ವ ಮಮದಾಪೂರ ಪ್ರಥಮ, ಮೀನಾಕ್ಷಿ ಲಮಾಣಿ ದ್ವಿತೀಯ, ಬಾಲಕರ ಗುಂಡು ಎಸೆತದಲ್ಲಿ ಮಂಜುನಾಥ ಸಸಾಲಟ್ಟಿ ಪ್ರಥಮ, ಬಾಲಕಿಯರ ಚಕ್ರ ಎಸೆತದಲ್ಲಿ ಮೀನಾಕ್ಷಿ ಲಮಾಣಿ ಪ್ರಥಮ, ಅಪೂರ್ವ ಮಮದಾಪೂರ ದ್ವಿತೀಯ, ಬಾಲಕಿಯರ ಬಲ್ಲೆ ಎಸೆತದಲ್ಲಿ ಬೋರವ್ವ ಕರಿಗಾರ ದ್ವಿತೀಯ, ಬಾಲಕಿಯರ ಹ್ಯಾಮರ್ ಥ್ರೋ ದಲ್ಲಿ ವಿನುತಾ ನೀಲಕಂಠಮಠ ಪ್ರಥಮ, ಬಾಲಕರ 3000 ಮೀ ನಡಿಗೆಯಲ್ಲಿ ಲಕ್ಷಮಣ ಕುಳಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕು ಮಟ್ಟದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಮತ್ತು ಥ್ರೋ ಬಾಲ್ಗಳಲ್ಲೂ ಜಯಶಾಲಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಮಖಂಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಹೇಶ್ ಪೂಜಾರಿ ಮತ್ತು ಬಾಲಕಿಯರ ಬ್ಯಾಡ್ಮಿಂಟನ್ನಲ್ಲಿ ಅಮೂಲ್ಯ ಹೂವಪ್ಪಗೋಳ ಜಯಶಾಲಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಿಗೆ ದೈಹಿಕ ನಿರ್ದೇಶಕ ಬಿ.ಎಂ.ಸಿದ್ನಾಳ ಮತ್ತು ರವಿ ಕಲ್ಲೋಳಿಯವರ ಮಾರ್ಗದರ್ಶನವಿದೆ.