ಕೆಎಲ್ಇ, ಎಸ್ಸಿಪಿ ಕಾಲೇಜ್ ಫಲಿತಾಂಶ ಶೇ.94





ಮಹಾಲಿಂಗಪುರ 11: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಪೂ ಕಾಲೇಜು 2023-24ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.94 ರಷ್ಟು ಫಲಿತಾಂಶ ಗಳಿಸಿದೆ. ಪರೀಕ್ಷೆ ಬರೆದ 249 ವಿದ್ಯಾರ್ಥಿಗಳಲ್ಲಿ 57 ಡಿಸ್ಟಿಂಗ್ಷನ್, 142 ಪ್ರಥಮ ದರ್ಜೆ ಸೇರಿದಂತೆ 234 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಲಕ್ಷ್ಮೀ ಹರಿಜನ 582 ಅಂಕ (ಶೇ.97) ಕಾಲೇಜಿಗೆ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರಥಮ, ಧರ್ಮಣ್ಣ ಘಾಟಗೆ 582 ಅಂಕ (ಶೇ.97) ಕಾಲೇಜಿಗೆ ಮತ್ತು ಕಲಾ ವಿಭಾಗಕ್ಕೆ ಪ್ರಥಮ, ಪ್ರಿಯಾಂಕ ದೊಡಹಟ್ಟಿ 582 ಅಂಕ (ಶೇ.97) ಕಾಲೇಜಿಗೆ ಮತ್ತು ಕಲಾ ವಿಭಾಗಕ್ಕೆ ಪ್ರಥಮ, ಸುಮಂಗಲಾ ಭೂಸಣ್ಣವರ (ಶೇ.96.66) ಕಾಲೇಜಿಗೆ ಮತ್ತು ಕಲಾ ವಿಭಾಗಕ್ಕೆ ದ್ವಿತೀಯ, ರಕ್ಷಿತಾ ಸವದಿ (ಶೇ.96.19) ಕಾಲೇಜಿಗೆ ಮತ್ತು ಕಲಾವಿಭಾಗಕ್ಕೆ ತೃತೀಯ ರಾ್ಯಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೋಮಲ ಉಪ್ಪಾರ (ಶೇ.95) ಪ್ರಥಮ ರಾ್ಯಂಕ್ ಪಡೆದಿದ್ದಾಳೆ. ಉಳಿದಂತೆ ಭೌತಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ ಇತಿಹಾಸ ಮತ್ತು ಕನ್ನಡ ವಿಷಯದಲ್ಲಿ ಶೇ.100 ಫಲಿತಾಂಶ ಬಂದಿದೆ. ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿ ಗಣಿತ ವಿಷಯದ ಫಲಿತಾಂಶ ಶೇ.100 ರಷ್ಟಾಗಿದ್ದು ವಿಶೇಷ ಎಂದು ಪ್ರಾಚಾರ್ಯ ಎಲ್.ಬಿ.ತುಪ್ಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.