ಮಹಲಿಂಗಪುರ

ಸಿಎಂ ಕಪ್ ಪಂದ್ಯಾವಳಿಯಲ್ಲಿ ಕೆಜೆ ಸೋಮಯ್ಯ ಶಾಲೆಗೆ ನಾಲ್ಕನೇ ಸ್ಥಾನ

ಸಿಎಂ ಕಪ್ ಪಂದ್ಯಾವಳಿಯಲ್ಲಿ ಕೆಜೆ ಸೋಮಯ್ಯ ಶಾಲೆಗೆ ನಾಲ್ಕನೇ ಸ್ಥಾನ

ಮಹಾಲಿಂಗಪುರ 20: ಸಮೀಪದ ಸೈದಾಪುರ ಸಮೀರವಾಡಿ ಕೆಜೆ ಸೋಮಯ್ಯ ಇಂಗ್ಲಿಷ್ ಮೀಡಿಯಂ ಶಾಲೆಯ ಬಾಲಕಿಯರು ಅಂತರ್ ವಿಭಾಗ ಹ್ಯಾಂಡ್ ಬಾಲ್ ಪ್ರತಿಭಾನ್ವೇಷಣೆ ದಸರಾ ಕ್ರೀಡಾಕೂಟದ ಸಿಎಂ ಕಪ್ ರಾಜ್ಯ ಪಂದ್ಯಾವಳಿಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದುಕ್ಕೊಳ್ಳುವ ಮೂಲಕ ಶಾಲೆಯ ಗೌರವ ಹೆಚ್ಚಿಸಿದ್ದಾರೆ. 

ಅಕ್ಟೋಬರ್ 2 ರಂದು ಬಾಗಲಕೋಟೆಯಲ್ಲಿ ನಡೆದ ಅಂತರ್ ಜಿಲ್ಲಾ ಮತ್ತು ಹಾವೇರಿಯಲ್ಲಿ ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದು ಬೆಳಗಾವಿ ವಿಭಾಗ ಮಟ್ಟಕ್ಕೆ ಸೋಮಯ್ಯ ಶಾಲೆ ಆಯ್ಕೆಗೊಂಡಿತು. ನಂತರ ಅಕ್ಟೋಬರ್ 11 ರಿಂದ 14 ರವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದಸರಾ ಕ್ರೀಡಾ ಉಪ ಸಮಿತಿ ಏರಿ​‍್ಡಸಿದ ರಾಜ್ಯ ಅಂತರ್ ವಿಭಾಗ ಮಟ್ಟದ ಪಂದ್ಯಾವಳಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜರುಗಿತು. 

ಈ ಪಂದ್ಯಾವಳಿಯಲ್ಲಿ ಬೆಳಗಾವಿ, ಮೈಸೂರು, ಗುಲ್ಬರ್ಗ, ಬೆಂಗಳೂರು ಮಹಾನಗರ ಮತ್ತು ಗ್ರಾಮೀಣ ವಿಭಾಗಗಳಿಂದ ತಂಡಗಳು ಭಾಗವಹಿಸಿದ್ದವು. 3 ಮತ್ತು 4ನೇ ಸ್ಥಾನಗಳಿಗೆ ಬೆಂಗಳೂರು ತಂಡದ ಎದುರು ಕೆಜಿಎಸ್ ಸೋಮಯ್ಯ ಇಂಗ್ಲಿಷ್ ಮೀಡಿಯಂ ಶಾಲೆ ಸೆನೆಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. 

ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು : ಪ್ರಿಯಾ ಪ್ರಸಾದ್, ಸ್ನೇಹಾ ನಿಂಗಸಾನಿ, ಪೂರ್ವಿ ಅಂಗಡಿ, ಪವಿತ್ರ ರಾಥೋಡ, ಕಲ್ಯಾಣಿ ಕನವಿ, ಸೃಷ್ಟಿ ಆದರಗಿ, ಆರಾಧ್ಯ ತ್ರಿಪಾಠಿ, ಸಿಂಚನಾ ಕುಳ್ಳೋಳ್ಳಿ, ಪ್ರೀತಿ ಹುನ್ನೂರ, ಅಂಕಿತಾ ಪಾಟೀಲ್, ಗೌರಿ ಗಾಣಿಗೇರ, ಪೂಜಾ ಗುಡಗೇನಟ್ಟಿ ಹ್ಯಾಂಡ್ ಬಾಲ್ ತಂಡದಲ್ಲಿ ಇದ್ದರು. 

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಬಿ ಆರ್ ಭಕ್ಷಿ ಹಾಗೂ ಸರ್ವ ಸದಸ್ಯರು ಮತ್ತು ಶಾಲಾ ಪ್ರಾಚಾರ್ಯರು, ವ್ಯವಸ್ಥಾಪಕ ಮಂಡಳಿ ಹಾಗೂ ಸಿಬ್ಬಂದಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ ಬಾಲಕಿಯರನ್ನು ಹಾಗೂ ತರಬೇತುದಾರರನ್ನು ಅಭಿನಂದಿಸಿದ್ದಾರೆ. ಕೋಚ್ ಆಗಿ ಚಿಂತಾಮಣಿ ಉಪ್ಪಾರ ಕಾರ್ಯ ನಿರ್ವಹಿಸಿದ್ದಾರೆ. 


ಸುದ್ದಿ ಓದಿ