ಕಟ್ಟಡ ಇತರೆ ನಿರ್ಮಾಣದ ಅರ್ಹ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿ ಕೆ.ಮಲೆಪ್ಪ
ಲೋಕದರ್ಶನ ವರದಿ
ಕಂಪ್ಲಿ 01: ತಾಲೂಕಿನ ದೇವಲಾಪುರ ಗ್ರಾಮದ ಹಳೇ ಪಂಚಾಯಿತಿ ಕಟ್ಟಡದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಷನ್(ಸಿಐಟಿಯು-ಸಿಡ್ಬೂ-್ಲಎಫ್‌ಐ) ಗ್ರಾಮ ಘಟಕದ ನಾಮಫಲಕ ಬಳಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಶುಕ್ರವಾರ ಆಚರಿಸಲಾಯಿತು. ನಂತರ ಹಿರಿಯ ಮುಖಂಡ ಗೌಡ್ರು ಮಾರೇಗೌಡ ಕಾರ್ಯಕ್ರಮದಲ್ಲಿ ಮಾತನಾಡಿ, ಕಟ್ಟಡ ಸೇರಿದಂತೆ ವಿವಿಧ ಕಾರ್ಮಿಕರು ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಇವರ ಶ್ರಮ, ದೊಡ್ಡದು. ಆದ್ದರಿಂದ ಕಾರ್ಮಿಕರು ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು. ಕಾರ್ಮಿಕರ ಬದುಕು ಕಷ್ಟಕರವಾಗಿದೆ. ಕಾರ್ಮಿಕರು ಮಕ್ಕಳಿಗೆ ಉನ್ನತ ಮಟ್ಟದಲ್ಲಿ ಶಿಕ್ಷಣ ಕೊಡಿಸಿ, ಒಳ್ಳೆಯ ನಾಗರಿಕರನ್ನು ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ನಿರ್ಮಾಣ ಫೆಡರೇಷನ್ ಗ್ರಾಮ ಘಟಕ ಅಧ್ಯಕ್ಷ ಕಾನೀರ್ ಮಲೆಪ್ಪ ಮಾತನಾಡಿ, ಗ್ರಾಮದಲ್ಲಿ ಸಾಕಷ್ಟು ಕಟ್ಟಡ ಸೇರಿದಂತೆ ಇತರೆ ಕಾರ್ಮಿಕರಿದ್ದು, ನಿಜವಾದ ಕಾರ್ಮಿಕರಿಗೆ ಗುರುತಿನ ಚೀಟಿ ದೊರಕುತ್ತಿಲ್ಲ.
ಇದರಿಂದ ಸರ್ಕಾರದಿಂದ ಬರುವ ಸೌಲಭ್ಯಗಳು ಮರಿಚಿಕೆಯಾಗಿವೆ. ಮೊದಲ ಕಂಪ್ಲಿ ಕಾರ್ಮಿಕರ ಕಛೇರಿಯಿಂದ ಅಧಿಕಾರಿಗಳು ಅರ್ಹ ಕಾರ್ಮಿಕರನ್ನು ಗುರುತಿಸಿ, ಕಾರ್ಡ್ ವಿತರಿಸುತ್ತಿದ್ದರು.ಈಗ ಹೊಸಪೇಟೆ ಸೇವಾ ಕೇಂದ್ರಕ್ಕೆ ರವಾನಿಸಿದ್ದರಿಂದ ಅಲ್ಲಿಂದ ಬರುವ ಅಧಿಕಾರಿಗಳು ಗ್ರಾಮದ ಎಲ್ಲೋ ಕುಳಿತುಕೊಂಡು ಅನ್ಯರ ಮಾತುಗಳನ್ನು ಆಲಿಸಿ, ನಿಷ್ಟಾವಂತ ಕಾರ್ಮಿಕರಿಗೆ ಕಾರ್ಡ್‌ಗಳನ್ನು ನೀಡುತ್ತಿಲ್ಲ. ಇದರಿಂದ ಅರ್ಹ ಕಾರ್ಮಿಕರ ಬದುಕು ಅತಂತ್ರವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಅರ್ಹ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಎಸ್‌ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ.ಶಿವುಕುಮಾರ, ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಗೌಡ್ರು ಡಿಂಡಿ ಮಹರ್ಷಿ, ಮುಖಂಡರಾದ ಅಮರನಾಥ, ಗೌಡ್ರು ನಾಗರಾಜ, ಗೌಡ್ರು ಷಣ್ಮುಕಪ್ಪ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಷನ್ ಗ್ರಾಮ ಘಟಕ ಉಪಾಧ್ಯಕ್ಷ ಕಲ್ಡಳ್ಳಿ ಬಸುವ, ಕಾರ್ಯದರ್ಶಿ ಹೆಚ್.ಪರಶುರಾಮ, ಖಜಾಂಚಿ ಗೊರವರ ನಾಗರಾಜ, ಸದಸ್ಯರಾದ ಶಿವರಾಜಕುಮಾರ, ಗೌಡ್ರು ಹನುಮಂತ, ಶೇಕ್ಷಾವಲಿ, ಚಿಕ್ಕಣ್ಣ, ಕಳ್ಳಿ ಜಡಿಯಪ್ಪ, ಜಿ.ಮಲ್ಲಿಕಾರ್ಜುನ, ರಾಘವೇಂದ್ರ, ಕೆ.ಹನುಮೇಶ, ಮಾರೇಶ, ನಾಯಕರ ಗೋವಿಂದ, ಜಿ.ಮಹಾಂತೇಶ, ಕೆ.ಹೊನ್ನೂರಸ್ವಾಮಿ, ವೆಲ್ಡಿಂಗ್ ರಾಜ, ವಿರೇಶ, ಯಂಗಿ ಸೋಮಶೇಖರ, ಕಲ್ಡಳ್ಳಿ ಕಲ್ಲಪ್ಪ ಸೇರಿದಂತೆ ಕಾರ್ಮಿಕರಿದ್ದರು.