ಜ್ಯೋತಿಬಾ ಫುಲೆ ಜಯಂತಿ ಆಚರಣೆ
ಬಳ್ಳಾರಿ 11: ಅನನ್ಯ ಸೇವೆಯಿಂದ ಸಮಾಜದಲ್ಲಿ ಶಿಕ್ಷಣ ವೈಚಾರಿಕತೆ ಪ್ರಗತಿಪರ ಚಲನಶೀಲತೆಯನ್ನು ಹುಟ್ಟುಹಾಕಿದ ಮಹಾನ್ ವ್ಯಕ್ತಿ ಜ್ಯೋತಿಬಾಫುಲೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ನಟ ರಮೇಶ್ಗೌಡ ಪಾಟೀಲ್ ಹೇಳಿದರು.
ಅವರು ನಗರದ ವೀರಶೈವ ಕಾಲೇಜಿನಲ್ಲಿ ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಟ, ಬಳ್ಳಾರಿ ಜಿಲ್ಲಾ ಘಟಕದವತಿಯಿಂದ ಹಮ್ಮಿಕೊಂಡಿದ್ದ ಜ್ಯೋತಿಬಾಪುಲೆ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿತ್ರಿಬಾಯಿಪುಲೆ ದೇಶದ ಮೊದಲ ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿ ಎಲ್ಲಾ ಮಹಿಳೆಯರು ಶಿಕ್ಷಣ ಪಡೆಯಲು ಪ್ರೇರಣೆಯಾದರು ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ದರೂರು ಶಾಂತನಗೌಡ ಹೇಳಿದರು. ಮಹಿಳೆಯರ ವಿದ್ಯೆ ಕಲಿತ ಸಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಹೊಂದಬೇಕೆಂದು ಬಿ.ಜೆ.ಪಿ ಸಾಂಸ್ಕೃತಿಕ ಪ್ರಕೋಷ್ಟದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ರಾಮಚಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ತಿಮ್ಮನಗೌಡ, ಕಾಲೇಜು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳಿದ್ದರು. ಇದಕ್ಕೂ ಮುನ್ನ ಜ್ಯೋತಿಬಾಪುಲೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.