ಬ್ಯಾಡ್ಗಿ

ಜಂಗಲ್ ಕಟಾವು ವಾಹನ ಶಾಸಕ ಬಸವರಾಜರಿಂದ ಬಿಡುಗಡೆ

ಜಂಗಲ್ ಕಟಾವು ವಾಹನ ಶಾಸಕ ಬಸವರಾಜರಿಂದ ಬಿಡುಗಡೆ

ಬ್ಯಾಡಗಿ 07:  ಪಟ್ಟಣಕ್ಕೆ ಮತ್ತು ಗ್ರಾಮಗಳಿಗೆ ವಿದ್ಯುತ್ ತೊಂದರೆ ಹಾಗೂ ಜಂಗಲ್ ಕಟಾವು ಮಾಡಲು ಅನುಕೂಲವಾಗುವಂತೆ ಶಾಸಕ ಬಸವರಾಜ ಶಿವಣ್ಣನವರ ಇಂದು ಪಟ್ಟಣದ ವಿದ್ಯುತ್ ಸಂಪರ್ಕ ನಿಗಮದಲ್ಲಿ ರಿಬ್ಬನ್ ಕಟ್ ಮಾಡುವ ಮೂಲಕ ಬಿಡುಗಡೆ ಮಾಡಿದರು. ಈ ವೇಳೆ ಸದಸ್ಯ ಹೈದರಲಿ ಬೆಂಗಳೂರಿ ಮಾತನಾಡಿ. ನಮ್ಮ ಶಾಸಕರ ಶಿಫಾರಸ್ಸಿನ ಮೇರೆಗೆ ಹುಬ್ಬಳ್ಳಿ ಸರಬರಾಜು ವಿದ್ಯುತ್ ಕಂಪನಿ ನಿಯಮಿತ ಅಧ್ಯಕ್ಷ ಅಜ್ಜಂ ಪೀರ್ ಖಾದ್ರಿ ಅವರ ಶಿಫಾರಸ್ಸು ಮೇರೆಗೆ 24/7 ವಾಹನವನ್ನು ಇಂದು ಶಾಸಕ ಬಸವರಾಜ್ ಶಿವಣ್ಣನವರು ವಾಹನ ಚಲಾಯಿಸುವ ಮೂಲಕ ಉದ್ಘಾಟನೆ ಮಾಡಿದರು.

ಈ ವಾಹನವೂ ಗ್ರಾಮಾಂತರ ಪ್ರದೇಶಕ್ಕೆ ವಿದ್ಯುತ್ ತೊಂದರೆಗಳು ಉಂಟಾದ ಅವುಗಳನ್ನು ಶೀಘ್ರವಾಗಿ ಬಗೆಹರಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಜಂಗಲ್ ಕಟಾವು ಮಾಡಲು ಸದರಿ 24/7 ವಾಹನವು ಅನುಕೂಲವಾಗಲು ಈ ವಾಹನ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಶಂಬನಗೌಡ ಪಾಟೀಲ್‌. ಚನ್ನಬಸಪ್ಪ ಹುಲ್ಲತ್ತಿ, ಅಬ್ದುಲ್ ಮುನಫ್ ಎರೆಸಿಮಿ .ಸಮಿತಿಯ ಸದಸ್ಯರಾದ ಮಂಜುನಾಥ್ ಹಂಜಗಿ ಮಾಲತೇಶ್ ಹಾಡಿನವರ್ ಹೈದರಾಲಿ ಬೆಂಗಳೂರಿ ಮಾಲತೇಶ್ ಶಿಡ್ಲಣ್ಣನವರ್ ಮತ್ತು ಕೆಇಬಿ ಇಂಜಿನಿಯರ್ ರಾಜು ಅರಳಿಕಟ್ಟಿ ಮತ್ತು ಸೆಕ್ಷನ್ ಆಫೀಸರ್ ಕುರುಬಗೊಂಡ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ