ಬಳ್ಳಾರಿ

ಅರ್ಹ ಫಲಾನುಭವಿಗಳಿಗೆ ಉಚಿತ ಪಿಂಚಣಿ ಸೌಲಭ್ಯ ಪಡೆಯಲು ಜು. 31ಕೊನೆಯ ದಿನ: ಅನೂಪ್ ಕುಮಾರ್

ಅರ್ಹ ಫಲಾನುಭವಿಗಳಿಗೆ ಉಚಿತ ಪಿಂಚಣಿ ಸೌಲಭ್ಯ ಪಡೆಯಲು ಜು. 31ಕೊನೆಯ ದಿನ: ಅನೂಪ್ ಕುಮಾರ್

ಬಳ್ಳಾರಿ 27: ಪಿಂಚಣಿ ಆಂದೋಲನ ನಿಮಿತ್ತ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಪಿಂಚಣಿ ಮಾಡಿಸಲಾಗುತ್ತದೆ ಅರ್ಹ ಫಲಾನುಭವಿಗಳು ಜುಲೈ 31ರ ಒಳಗಡೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿಜೆಪಿ ಮುಖಂಡ ವಿ. ಅನೂಪ್ ಕುಮಾರ್ ಅವರು ತಿಳಿಸಿದ್ದಾರೆ.  


ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸಾಕಷ್ಟು ಕುಟುಂಬಗಳು ಇದುವರೆಗೂ ಸಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ ಹಾಗೂ ಮೈತ್ರಿ ಮತ್ತಿತರ ಪಿಂಚಣಿ ಸೌಲಭ್ಯಗಳನ್ನು ಪಡೆಯುತ್ತಿಲ್ಲ. ಆದ್ದರಿಂದ ಅರ್ಹರಿಗೆ ಉಚಿತವಾಗಿ ಪಿಂಚಣಿ ಸೌಲಭ್ಯ ಒದಗಿಸಲು ಪಿಂಚಣಿ ಆಂದೋಳನವನ್ನು ಆಯೋಜಿಸಲಾಗಿದೆ. 60ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ 65ವರ್ಷ ಮೇಲ್ಪಟ್ಟವರಿಗೆ ಸಂಧ್ಯಾ ಸುರಕ್ಷಾ ಅಂಗವಿಕಲರಿಗೆ ಮಾಸಾಶನ ವಿಧವೆಯರಿಗೆ ಮಾಸಾಶನ ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಮಾಸಾಶನಕ್ಕೆ   ಅರ್ಜಿಗಳನ್ನು ಸಲ್ಲಿಸಬಹುದು.  


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿವಿ.ಅನೂಪ್ ಕುಮಾರ್ ಜನ ಸಂಪರ್ಕ ಕಚೇರಿ ಪೀರ್ ಸಾಬ್ ಮಕಾನ್ ಹತ್ತಿರ ಬಸವನ ಕುಂಟೆದೇವಿ ನಗರ ಮುಖ್ಯ ರಸ್ತೆ ದೂರವಾಣಿ ಸಂಖ್ಯೆ: 7411637511 ಸಂಪರ್ಕಿಸಬಹುದು. 


ಸುದ್ದಿ ಓದಿ