ಜುಡೋ: ಎ.ನಾಗರಾಜ ಗೌಡ ರಾಷ್ಟ್ರಮಟ್ಟಕ್ಕೆ ಆಯ್ಕೆ
ಹರಪನಹಳ್ಳಿ 06: ಪಟ್ಟಣದ ಎಸ್.ಯು.ಜೆ.ಎಂ.ಕಾಲೇಜಿನ ವಿದ್ಯಾರ್ಥಿ ಎ.ನಾಗರಾಜ ಗೌಡ ಪ್ರಥಮ ಸ್ಥಾನ ಪಡೆದು ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವತ್ತೂ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಉಜ್ಜಯಿನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಎಂ. ಹರ್ಷವರ್ಧನ ಅಭಿನಂದಿಸಿ ಮಾತನಾಡಿದರು.
ಎ. ನಾಗರಾಜಗೌಡ ಇವರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನ ವಿತರಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ ಅದನ್ನು ಗುರ್ತಿಸುವ ಕೆಲಸವನ್ನು ಉಪನ್ಯಾಸಕರು ಮಾಡಬೇಕು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದರು.
ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಹೆಚ್.ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿ ರಾಮನಗರದಲ್ಲಿ ನಡೆದ ಜುಡೋ ಸ್ಪರ್ಧೆಯಲ್ಲಿ ವಿಜಯನಗರದಿಂದ ಹರಪನಹಳ್ಳಿ ಎಸ್.ಯು.ಜೆ.ಎಂ.ಕಾಲೇಜು ವಿದ್ಯಾರ್ಥಿ ಎ.ನಾಗರಾಜ ಗೌಡ 45ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಮತ್ತು ಎಸ್.ಪ್ರದೀಪ 40ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಗತಿ 52ಕೆಜಿ ವಿಭಾಗದಲ್ಲಿ ಚಿನ್ನದ ಪದಕ, ಎಂ.ರಂಜಿತ ಬೆಳ್ಳಿ ಪದಕ ಮತ್ತು ಎಸ್.ಎಸ್.ಎಚ್. ಜೈನ್ ಕಾಲೇಜಿನ ವಿದ್ಯಾರ್ಥಿಗಳಾದ ಖಲೀಲ್ ಯು.ಆರ್. ರಹಮಾನ ಮತ್ತು ಎಸ್.ರಂಜಿತ ಬೆಳ್ಳಿಪದಕ ಪಡೆದು ವಿಜಯವನ್ನು ಸಾಧಿಸಿ ಸಮಗ್ರ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ 2 ಚಿನ್ನದ ಪದಕ, 3 ಬೆಳ್ಳಿ ಪದಕ ಮತ್ತು 1 ಕಂಚಿನ ಪದಕ ಒಟ್ಟು 6 ಪದಕಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ತಾಲೂಕಿನಲ್ಲಿ ಜುಡೋ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಹರಪನಹಳ್ಳಿಯ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಗುರು ವಿದ್ಯಾಪೀಠದ ನಿರ್ದೇಶಕರಾದ ಬೂದಿ ಶಿವಕುಮಾರ ಉಪನ್ಯಾಸಕರಾದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹೆಚ್.ಬಿ.ಸೋಮರೆಡ್ಡಿ, ಎಸ್.ಚನ್ನಬಸಪ್ಪ, ಬಿ.ಕೃಷ್ಣಮೂರ್ತಿ, ಎಸ್.ಕೊಟ್ರೇಶ್, ಎಂ.ಚಿಕ್ಕಪ್ರಸಾದ, ಕೆ.ಬೀರಾನಾಯ್ಕ, ಸಿ.ಎಂ.ಪ್ರವೀಣ, ಆತ್ಮಾನಂದ ಮುಂದಿನ ಮನಿ, ಕೆ.ಎಂ.ಶೈಲಜಾ, ಬಿ.ಸುನಿಲ್, ಸಿಬ್ಬಂದಿ ಕಾರ್ಯದರ್ಶಿ ಟಿ.ಎಂ.ಜಯದೀಪ , ಎಂ.ಜಿ.ರುದ್ರಯ್ಯ ಉಪಸ್ಥಿತರಿದ್ದರು. ಹರಪನಹಳ್ಳಿಯ ಜುಡೋ ತರಬೇತುದಾರರಾದ ಡಿ.ಭಾಷಾ ತರಬೇತಿ ನೀಡಿದ್ದಾರೆ