ಗೋಕಾಕ್

ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಜೋಯಿಂ ಬಾಳೆಕುಂದ್ರಿ

ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಜೋಯಿಂ ಬಾಳೆಕುಂದ್ರಿ

ಗೋಕಾಕ 29 : ರಾಜಲಕ್ಷ್ಮಿ ಚಿಲ್ಡ್ರನ ಪೌಂಡೆಶನ ಬೆಳಗಾವಿ ಇವರು ಪ್ರತಿ ವರ್ಷ ನಡೆಸುವ ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮದ ಶಿಂಧಿಕುರಬೇಟ ಮಾಧ್ಯಮಿಕ ಶಾಲೆ ಶಿಂಧಿಕುರಬೇಟ ಶಾಲೆಯ ವಿದ್ಯಾರ್ಥಿ ಜೋಯಿಂ ಮಹೇಬೂಬ ಬಾಳೆಕುಂದ್ರಿ ಇತನು ಉತ್ತಮ ಸಾಧನೆ ಗೈದಿದ್ದಾನೆ.   ಚಿಕ್ಕೋಡಿಯಲ್ಲಿ ನಡೆದ ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಕಲಿಕೆಯಲ್ಲಿ ಅನುಕೂಲವಾಗಲೂ ಸ್ಕೂಲ್ ಬ್ಯಾಗ್, ಟ್ಯಾಬ್ ನೀಡಿ ಸತ್ಕಾರಿಸಲಾಯಿತು. ಸಾಧನೆಗೈದ ಶಾಲೆಯ ವಿದ್ಯಾರ್ಥಿ ಜೋಯಿಂ ಮೆಹಬೂಬ್ ಬಾಳೆಕುಂದ್ರಿ ಇತನ ಸಾಧನೆಗೆ ಎಲ್ಲೆಡೆ ಪ್ರಶಾಂಸೆ ವ್ಯಕ್ತ ವಾಗಿದ್ದು ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿ ಇನ್ನುಳಿದಂತ ಎಲ್ಲ ವಿದ್ಯಾರ್ಥಿಗಳು ಇದೆ ತರ ಸಾಧನೆಗೈದು ಶಾಲೆಗೆ ತಂದೆ -ತಾಯಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು. 


ಸುದ್ದಿ ಓದಿ