ಮಹಲಿಂಗಪುರ

ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಗಾಯಕವಾಡ

ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಗಾಯಕವಾಡ

ಮಹಾಲಿಂಗಪುರ 08: ಪ್ರತಿಯೊಬ್ಬರೂದೇಶಕ್ಕಾಗಿ ಸಮರೆ​‍್ಣ ಮನೋಭಾವದಿಂದ ವ್ಯಕ್ತಿಜತೆ ಸುಭದ್ರ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣಕ್ಕೂ ಕೈಜೋಡಿಸಬೇಕು ಎಂದು ಹಿಂದೂ ಮುಖಂಡ ನಂದು ಗಾಯಕವಾಡ ಹೇಳಿದರು. 

ಪಟ್ಟಣದ ಕೆಎಲ್‌ಇ ಪಾಲಿಟೆಕ್ನಿಕ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಸ್‌ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಸುಸಂಸ್ಕೃತ ಜನಾಂಗ ಸೃಷ್ಟಿಯಾಗಬೇಕಾದರೆ ಯುವಕರಲ್ಲಿ ರಾಷ್ಟ್ರೇ​‍್ರಮ ಬೆಳೆಸುವ ಅಗತ್ಯವಿದೆ. ಬೋಸ್ ಹಾಗೂ ವಿವೇಕಾನಂದರ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕಿದೆ. ಟಿವಿ, ಮೊಬೈಲ್ ನಿಂದಾಗಿ ದೇಶದ ತಾರುಣ್ಯ ಹಾಳಾಗುತ್ತಿದೆ. ದೇಶದಲ್ಲಿ ವಿದೇಶಿ ಸಂಸ್ಕೃತಿ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಪ್ರಾಚಾರ್ಯ ಎಸ್‌.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಸಾಫ್ಟವೇರ್‌ಕ್ಷೇತ್ರದಿಂದಾಗಿ ಭಾರತ ವಿಶ್ವಗುರುವಾಗಲು ಹೊರಟಿರುವುದುಆಶಾದಾಯಕ ಬೆಳವಣಿಗೆಯಾಗಿದೆ ಎಂದರು. 

ಸ್ವಾಮಿ ವಿವೇಕಾನಂದ ಹಾಗೂ ಸುಭಾಸ್‌ಚಂದ್ರ ಬೋಸ್‌ಅವರ ಭಾವಚಿತ್ರಗಳಿಗೆ ಪುಷ​‍್ಾರೆ್ಪಣ ಮಾಡಲಾಯಿತು. ಪುರಸಭೆ ಸದಸ್ಯರವಿ ಜವಳಗಿ, ಅಂಜನಾ ಮಲಾಜ, ಅಭಿಷೇಕ ಲಮಾಣಿ, ಚೈತ್ರಾ ಹುದ್ದಾರ, ನಿರ್ಮಲಾ ಫಕೀರಪುರ, ಪ್ರಿಯಾ ಸೋನಾರ, ಸುಮನ್ ಖೋತ ಉಪಸ್ಥಿತರಿದ್ದರು. 


ಸುದ್ದಿ ಓದಿ