ಗ್ರಾಮಸ್ಥರನ್ನು12ನೇ ಶತಮಾನದತ್ತ ಕೊಂಡೊಯ್ದ ಝುಂಜರವಾಡ ಗ್ರಾಮ ; ಅಣ್ಣ ಬಸವಣ್ಣ, ನಿಲಾಂಬಿಕೆಯ ವಿವಾಹದ ಗತವೈಭವ ನೆನಪು ಮುನ್ನೆಲೆಗೆ
ಬೆಳಗಾವಿ : ಗ್ರಾಮದ ಅಪ್ಪಯ್ಯ ಹಾಗೂ ಚಂದ್ರಯ್ಯ ಸ್ವಾಮಿಗಳ ಶ್ರೀ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ನಡೆದ 'ಬಸವ ಪುರಾಣದಲ್ಲಿ' ಬಸವೇಶ್ವರ ಹಾಗೂ ನೀಲಾಂಬಿಕೆಯರ ವಿವಾಹ 12ನೇ ಶತಮಾನದ ಗತವೈಭವವನ್ನು ಮೀರಿಸುವಂತೆ ಹಾಗೂ ಮತ್ತೆ ಗ್ರಾಮಸ್ಥರಿಗೆ 12 ನೇ ಶತಮಾನವನ್ನು ಮತ್ತೆ ಜ್ಞಾಪಿಸಿದ ಘಟನೆಗೆ ಸಾಕ್ಷಿ ಆಯಿತು ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮ.

ಹೌದು ಓದುಗರೇ ಅಥಣಿ ತಾಲೂಕಿನ ಝುಂಜರವಾಡ ಗ್ರಾಮವು ಇಂತಹ ಘಟನೆಗೆ ಸಾಕ್ಷಿಯಾಗಿ ಆಡಂಬರದ ಶುಭ ವಾದ್ಯ ತರಂಗಗಳು, ಸುಸಂಸ್ಕೃತ ಸಾರುವ ಮುತ್ತೈದೆಯರ ಉಪಸ್ಥಿತಿ, ಸಾವಿರಾರು ತಾಯಂದಿರು ತಲೆಯ ಮೇಲೆ ಹೊತ್ತು ತಂದ ಬಸವ ಬುತ್ತಿ, ಸುನಾದದ ಸೋಬಾನ ಪದಗಳು, ಅಲ್ಲಲ್ಲಿ ಮಕ್ಕಳಿಂದ ವಚನ ಗಾಯನ, ಕಾರ್ಯಕ್ರಮ ಮೆರಗನ್ನು ಹೆಚ್ಚಿಸಿತ್ತು.

ಮಲ್ಲಯ್ಯ ಸ್ವಾಮಿಗಳು ಹಾಗೂ ಅಪ್ಪಯ್ಯ ಸ್ವಾಮಿಗಳು ಮತ್ತು ದಾನಯ್ಯ ಸ್ವಾಮಿಗಳು ಈ ಒಂದು ವಿಶಿಷ್ಟ ಕಾರ್ಯಕ್ಕೆ ಸಾನಿಧ್ಯ ವಹಿಸಿದ್ದರು. ಬಸವರಾಜೇಂದ್ರ ಶರಣರ ಪ್ರವಚನ ಎಲ್ಲರನ್ನು ಮಂತ್ರಮುಗ್ದಗೊಳಿಸಿತು.
ಬಸವಣ್ಣವರಾಗಿ ಸೌಮ್ಯ ಯಡೂರ, ನೀಲಾಂಬಿಕೆಯಾಗಿ ಸೃಷ್ಟಿ ಯಡೂರ ಕಂಗೊಳಿಸಿದರು. ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದರು.