ಹಗರಿಬೊಮ್ಮನಹಳ್ಳಿ

ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ಮೇ.21 : ಪಟ್ಟಣದ ಜೆಸ್ಕಾಂ ಕಛೇರಿಯಲ್ಲಿ ಶನಿವಾರ ಎಇಇ ತೇಜಾನಾಯ್ಕ್‌ ಅವರ ನೇತೃತ್ವದಲ್ಲಿ ತಾಲೂಕು ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ ಜರುಗಿತು. 


ಈ ವೇಳೆ ಪುರಸಭೆ ಸದಸ್ಯ ರಾಜೇಶ್ ಬ್ಯಾಡಗಿ ತಮ್ಮ ಹೊಲದಲ್ಲಿರುವ ವಿದ್ಯುತ್ ಕಂಬವು ಬಾಗಿದ್ದು ಕೂಡಲೇ ಸರಿ ಪಡಿಸುವಂತೆ ಎಇಇ ತೇಜಾನಾಯ್ಕ್‌ ಅವರಿಗೆ ತಿಳಿಸಿದರು, ಬಸವೇಶ್ವರ ಬಜಾರ್‌ನಲ್ಲಿನ ವಿದ್ಯುತ್ ತಂತಿಗಳು ಬಿಗಿಯಾಗಿರದೇ ಸಡಿಲಗೊಂಡಿವೆ ಅದರತ್ತ ಹಮನ ಹರಿಸುವಂತೆ ಸಭೆಯಲ್ಲಿದ್ದ ಗ್ರಾಹಕರು ತಿಳಿಸಿದರು ಇದಕ್ಕೆ ಕೂಡಲೇ ಯಾವ ವಿದ್ಯತ್ ಕಂಬಗಳಲ್ಲಿ ತಂತಿಗಳು ಸಡಿಲಗೊಂಡಿವೆಯೋ ಅವುಗಳನ್ನು ಸರಿಪಡಿಸುವಂತೆ ಸಿಬ್ಬಂದಿಗೆ ತಿಳಿಸುವುದಾಗಿ ಭರವಸೆಯನ್ನು ಇಲಾಖೆ ಎಇಇ ಹೇಳಿದರು. ನೂತನ ವಿದ್ಯುತ್ ಸಂಪರ್ಕ ಪಡೆಯಲು ಕೆಲವು ಕಡೆ ವಿದ್ಯುತ್ ಕಂಬಗಳು ದೂರವಿದ್ದು ಅವುಗಳನ್ನು ಪರೀಶೀಲಿಸಿ ಕಂಬಗಳನ್ನು ಹಾಕುವ ವ್ಯವಸ್ಥೆ ಮಾಡಲಾಗುವುದು.ತಾಲೂಕಿನ ಹರೆಗೊಂಡನಹಳ್ಳಿ ಗ್ರಾಮದಲ್ಲಿ ವಿಇದ್ಯುತ್ ತಂತಿ ಹಾದು ಹೋಗಿದ್ದು ಅದರ ಕೆಳಗಡೆ ಮನೆ ನಿರ್ಮಾಣ ಮಾಡುತ್ತಿದ್ದಾಗಿ ತಿಳಿಸಿದ ಕೂಡಲೇ ಮೊದಲು ವಿದ್ಯುತ್ ತಂತಿಯನ್ನು ತೆರೆವುಗೊಳಿಸಿ ನಂತರ ಮನೆ ನಿರ್ಮಾಣಕ್ಕೆ ಮುಂದಾಗುವಂತೆ ಸಲಹೆ ನೀಡಿದರು. ನೂತನ ವಿದ್ಯುತ್ ಕಂಬಗಳು ಎಲ್ಲಿ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಳ್ಳುವಂತೆ ಶಾಖಾಧಿಕಾರಿ ಪಕ್ಕಿರ​‍್ಪ ಅವರಿಗೆ ತಿಳಿಸಲಾಯಿತು.ಈ ಸಂಧರ್ಭದಲ್ಲಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ವಿದ್ಯುತ್ ಗ್ರಾಹಕರು ಉಪಸ್ಥಿತರಿದ್ದರು. 


ಸುದ್ದಿ ಓದಿ