ಸಿಂಧಗಿ

ಇಂದು ಓತಿಹಾಳ ಸಿದ್ದಲಿಂಗ ಮಹಾರಾಜರ ಜಾತ್ರಾ ಮಹೋತ್ಸವ

ಇಂದು ಓತಿಹಾಳ ಸಿದ್ದಲಿಂಗ ಮಹಾರಾಜರ ಜಾತ್ರಾ ಮಹೋತ್ಸವ

ಸಿಂದಗಿ 27: ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ 28ನೇ ಜಾತ್ರಾ ಮಹೋತ್ಸವ ದಿ.28ರಂದು ಜರುಗುವುದು.  

ಕಾರ್ಯಕ್ರಮಗಳ ವಿವರ: ಬೆಳಿಗ್ಗೆ 8ಗಂಟೆಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಿದ್ಧಲಿಂಗ ಮಾಹಾರಾಜ ಪಲ್ಲಕ್ಕಿ ಮೆರವಣಿಗೆ ಮದ್ಯಾಹ್ನ 2ಗಂಟೆಗೆ ಪೂಜ್ಯರಿಂದ ಧರ್ಮಸಭೆ. ಸಾಯಂಕಾಲ 5ಗಂಟೆಗೆ 2ನೇ ವರ್ಷದ ಭವ್ಯ ರಥೋತ್ಸವ ಮತ್ತು ದಿ.26ಮತ್ತು 28ರ ರಾತ್ರಿ 10ಗಂಟೆಗೆ ಸಿಡಿದೆದ್ದ ಶಿವಶಕ್ತಿ ಎಂಬ ಸಾಮಾಜಿಕ ನಾಟಕ ಇನ್ನೂ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ.  

ಡಾ. ವೃಷಭಲಿಂಗ ಮಹಾಸ್ವಾಮಿಗಳು ಬಂಥನಾಳ ಮತ್ತು ಡಾ. ಮುರುಘ ರಾಜೇಂದ್ರ ಮಹಾಸ್ವಾಮಿಗಳು ಜಿಡಗಾ ಮಠ, ಮಹಾಂತಸ್ವಾಮಿಗಳು ಜೇರಟಗಿ, ಸಿದ್ಧಲಿಂಗ ಶಿವಾಚಾರ್ಯರು ಹಿರೇಮಠ ಕನ್ನೊಳ್ಳಿ, ಬಸವ ಮಹಾಂತಸ್ವಾಮಿಗಳು ಸಿದ್ದಲಿಂಗ ಮಹಾರಾಜ ಮಠ ಓತಿಹಾಳ ಹಾಗೂ ಇನ್ನೂ ಅನೇಕ ಪೂಜ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗುತ್ತವೆ. ಸುತ್ತ-ಮುತ್ತಲಿನ ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆಯಬೇಕಾಗಿ ಓತಿಹಾಳ ಗ್ರಾಮದ ಸದ್ಬಕ್ತರು ಕೋರಿದ್ದಾರೆ. 


ಸುದ್ದಿ ಓದಿ