ಶಿಗ್ಗಾವ್

ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ 

ಶಿಗ್ಗಾವಿ 03:  ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ  ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆ, ರಂಭಾಪುರಿ ಪಿ.ಯು.ಕಾಲೇಜ ಹಾಗೂ ಎನ್‌.ಎಸ್‌.ಎಸ್ ಘಟಕ, ಸ್ಪಂದನಾ ಸಂಸ್ಥೆ, ಸಂಜೀವಿನಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆಯನ್ನು ತಹಶೀಲ್ದಾರ ಶಿವಾನಂದ ರಾಣೆ ಹೇಳಿದರು. 

   ನಂತರ ಮಾತನಾಡಿ ಏಡ್ಸ ರೋಗವನ್ನು ಸಂಪೂರ್ಣ ಗುಣಮುಖ ಮಾಡಲು ಸದ್ಯ ಚಿಕಿತ್ಸೆ ಲಭ್ಯವಿಲ್ಲ ಆದರೆ ಹೆಚ್‌.ಐ.ವ್ಹಿ ಏಡ್ಸ ನೊಂದಿಗೆ ಉತ್ತಮ ಜೀವನ ನಿರ್ವಹಣೆ ಮಾಡಿ 20-25 ವರ್ಷಗಳ ಕಾಲ ಯಾವುದೇ ಭಯವಿಲ್ಲದೇ ಪ್ರತಿನಿತ್ಯ ಮಾತ್ರೆ ಸೇವನೆ ಮಾಡುತ್ತಾ, ಆರೈಕೆ ಬೆಂಬಲದೊಂದಿಗೆ ಚಿಕಿತ್ಸೆ ಪಡೆದು ಇತರರಂತೆ ಬದುಕಬಹುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ  ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾಽಽ ಹನುಮಂತಪ್ಪ.ಪಿ.ಹೆಚ್, ತಾಲೂಕ ಆರೋಗ್ಯಾಧಿಕಾರಿ ಡಾಽಽ ಸತೀಶ, ಮಾನಸಿಕ ತಜ್ಞ ವೈದ್ಯರು ಡಾ. ವಿಜಯಕುಮಾರ ಬಳಿಗಾರ, ಸಿ.ಪಿ.ಐ ಬಸವರಾಜ ಹಳಬಣ್ಣವರ, ಪಿ.ಎಸ್‌.ಐ ಸಂಪತ್ತು, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಶ್ರೀಕಾಂತ ಸರ್ಜಾಪೂರ, ಅಶೋಕ ಅಮಾತ್ಯಣ್ಣವರ, ಸರೋಜಾ ಹರಿಜನ, ಪಕ್ಕಿರೇಶ ಹಿರೇಮಠ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಶಮ್ಸ ತಬರೀಜ್, ಸ್ಪಂದನಾ ಸಂಸ್ಥೆಯ ಈರಣ್ಣಾ, ಶಾಂತಾ ಮತ್ತೂರ, ಸಂಜೀವಿನಿ ಸಂಸ್ಥೆಯ ಹನುಮಂತ, ಚಂದ್ರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ರೇಣುಕಾ ಹೊಸಮನಿ ಸ್ವಾಗತಿಸಿದರು, ಶಮ್ಸ ತಬರಿಜ್ ವಂದಿಸಿದರು. 


ಸುದ್ದಿ ಓದಿ