ಬಳ್ಳಾರಿ

4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಪ್ರಯುಕ್ತ ಜಾಥಾ

4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಪ್ರಯುಕ್ತ ಜಾಥಾ

ಬಳ್ಳಾರಿ 20: ಎಐಯುಟಿಯುಸಿ ಸಂಘಟಿತ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಅಕ್ಟೋಬರ್ 26, 27, 2024 ರಂದು ಮೈಸೂರಿನಲ್ಲಿ ಸಂಘಟಿಸಲಾಗುತ್ತಿದೆ. ಇದರ ಪೂರ್ವಭಾವಿಯಾಗಿ ಬಳ್ಳಾರಿ ಜಿಲ್ಲಾ ಮಟ್ಟದ ಜಾಥಾ ಹಮ್ಮಿಕೊಳ್ಳಲಾಗಿತ್ತು.  

ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಕಾ.ಸೋಮಶೇಖರ ಗೌಡ  ಚಾಲನೆ ನೀಡಿದರು. ಬೆಳಗಲ್ಲು, ಜಾನೆಕುಂಟೆ, ಹರಗಿನಡೋಣಿ, ಕುಡಿತಿನಿ ಇನ್ನಿತರ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ ಪ್ರಚಾರ ನಡೆಯಿತು. ಸಂಡೂರುವರೆಗೆ ಈ ಜಾಥಾ ಮುಂದುವರೆಯುವುದು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಕಾ.ಎ.ದೇವದಾಸ್ ಅವರು " ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕರ ಬದುಕು ದುಸ್ತರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ, ಜೀವನ ನಡೆಸುವುದೇ ಕಷ್ಟವಾಗಿದೆ. ಖಾಯಂ ಉದ್ಯೋಗಗಳಿಲ್ಲ. ಗುತ್ತಿಗೆ ಪದ್ಧತಿ  ಹೆಸರಲ್ಲಿ ಕಾರ್ಮಿಕರನ್ನು ಆಧುನಿಕ ಜೀತಕ್ಕೆ ತಳ್ಳಲಾಗುತ್ತಿದೆ. ಕಾರ​‍್ೊರೇಟ್ ಮಾಲೀಕರ ಹಿತಕ್ಕಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ.  

ಈ ನಿಟ್ಟಿನಲ್ಲಿ 4 ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿ, ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ದುಡಿಮೆಯ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿತು. ಐಟಿ-ಬಿಟಿ ಕ್ಷೇತ್ರಗಳಲ್ಲಿ ದುಡಿಮೆಯ ಅವಧಿಯನ್ನು 14 ಗಂಟೆಗೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಚರ್ಚೆ ನಡೆಸುತ್ತಿದೆ. ಎಲ್ಲಾ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿ ಕೊಟ್ಟು, ಬಂಡವಾಳಶಾಹಿಗಳ ಸೇವೆಗೈಯುತ್ತಿವೆ. ಈ ಹಿನ್ನೆಲೆಯಲ್ಲಿ, ಕಾರ್ಮಿಕರು ಇನ್ನಷ್ಟು ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸಬೇಕು. ರಾಜಿ ರಹಿತ ಹೋರಾಟವೊಂದೇ ಏಕೈಕ ಪರಿಹಾರ.  ಮೈಸೂರಿನಲ್ಲಿ ನಡೆಯುತ್ತಿರುವ ಎಐಯುಟಿಯುಸಿ ಸಂಘಟಿತ ರಾಜ್ಯ ಕಾರ್ಮಿಕರ ಸಮ್ಮೇಳನವನ್ನು ಯಶಸ್ವಿಗೊಳಿಸಲು " ಕರೆ ನೀಡಿದರು.ಈ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್‌.ಎನ್, ಉಪಾಧ್ಯಕ್ಷರಾದ ಎ.ಶಾಂತಾ, ಮುಖಂಡರಾದ ಶರ್ಮಾಸ್,  ರಾಜ, ಕಿರಣ್ ಕುಮಾರ್, ಮಹೇಶ್, ಪಾರ್ವತಮ್ಮ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ