ಹಗರಿಬೊಮ್ಮನಹಳ್ಳಿ

ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಮನವಿ

ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಮನವಿ

ಹಗರಿಬೊಮ್ಮನಹಳ್ಳಿ 10: ಮೈಕ್ರೋ ಫೈನಾನ್ಸಾಗಳು ಸಾಲ ಮರುಪಾವತಿ ಕಂತುಗಳನ್ನು ಕಟ್ಟುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವದನ್ನು ಖಂಡಿಸಿ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿಯು ತಹಶಿಲ್ದಾರ್ಗೆ ಮನವಿಯನ್ನು ನೀಡಿತು.ಈ ಸಂಧರ್ಭದಲ್ಲಿ ಸಂಘಟನೆಯ ಖಚಾಂಚಿ ಸದರ್ಾರ್ ಹುಲಿಗೆಮ್ಮ ಮಾತನಾಡಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ತ್ರೀ ಸಂಘಗಳಿಂದ ಸಾಲವನ್ನು ಪಡೆದಿದ್ದು ಸದ್ಯದ ಕರೋನಾ ಎರಡನೇ ಅಲೆಯಿಂದ ಬದುಕು ದುಸ್ತರವಾಗಿದೆ ಇಂತಹ ಸಂಕಷ್ಟ ಸಮಯದಲ್ಲಿ ಸಾಮ ಮರು ಪಾವತಿ ಕಂತುಗಳನ್ನು ಕಟ್ಟುವಂತೆ ಮೈಕ್ರೋ ಫೈನಾನ್ಸ್ಗಳು ದುಂಬಾಲು ಬೀಳುತ್ತಾ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ಜನವಾದಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.ಇನ್ನು ಯಾವುದೇ ಮುನ್ಸೂಚನೆ ನೀಡದೇ ಹೇರಿರುವ ಲಾಕ್ಡೌನ್ ಒಪ್ಪತ್ತಿನ ಊಟಕ್ಕೂ ಪರಿತಪಿಸುವಂತೆ ಮಾಡಿದೆ,ದೊಡ್ಡ ಉದ್ದಿಮೆದಾರರಿಗೆ ನೀಡುವ ಸವಲತ್ತುಗಳನ್ನು ಬಡ ಸಣ್ಣ ಉದ್ದಿಮೆದಾರರಿಗೂ ವಿಸ್ತರಿಸುವಲ್ಲಿ ಸಕರ್ಾರ ಹಿಂದೇಟು ಹಾಕುತ್ತಿದೆ, ಇಂತಹ ಮೈಕ್ರೋ ಫೈನಾನ್ಸ್ಗಳ ಕಿರುಕುಳವನ್ನು ತಪ್ಪಿಸುವ ಕಾರ್ಯ ಶೀಘ್ರವೇ ಅಗಬೇಕಿದೆ ಎಂದು ಅಕ್ರೋಶ ವ್ಯೆಕ್ತ ಪಡಿಸಿದರು.ಈ ಸಂಧರ್ಭದಲ್ಲಿ  ಬಿ.ರೇಣುಕಾ, ಪಾಯಲ್ಭಾನು, ರಿಯಾನ, ಮದೀನಾ, ಬಷೀರಾ ಭಾನು, ಮುನಿಯಮ್ಮ, ಮಂಗಳಮ್ಮ, ಕಾಳಮ್ಮ, ಕೆ.ಜ್ಯೋತಿ, ಕಾತರಕಿ  ಜ್ಯೋತಿ ಇದ್ದರು 

ಸುದ್ದಿ ಓದಿ