ಮೂಡಲಗಿ

ಜನತಾದಳ ಪಕ್ಷ ಬಸವಣ್ಣವರ ಸಿದ್ದಾಂತದ ಮೇಲೆ ನಿಂತಿದೆ: ಇಬ್ರಾಹ್ಮಿ

ಜನತಾದಳ ಪಕ್ಷ ಬಸವಣ್ಣವರ ಸಿದ್ದಾಂತದ ಮೇಲೆ ನಿಂತಿದೆ: ಇಬ್ರಾಹ್ಮಿ

ಮೂಡಲಗಿ: ರಾಜ್ಯದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸಿನ ಮಾಜಿ ಮುಖ್ಯಮಂತ್ರಿ ಸಿದ್ಧಮಯ್ಯನವರಿಗೆ ಸ್ಥಾನ ಸಿಗುತ್ತಲ್ಲ. ಹಿಂದಿನ ಚುನಾವಣೆಯಲ್ಲಿ ಅವರನ್ನ ಬದಾಮಿಗೆ ಕರಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲವನ್ನು ಸಾಧಿಸಿ ಕೊಟ್ಟಿದ್ದು ನಾನೆ ಎಂದು ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಸಿಎಂ ಇಬ್ರಾಹ್ಮಿ ಹೇಳಿದರು. 

 

ಬುಧವಾರದಂದು ಪಟ್ಟಣದ ಮಹಾಲಕ್ಷ್ಮೀ ಬ್ಯಾಂಕ್ ಸಭಾಂಗಣದಲ್ಲಿ ಅರಭಾವಿ ಮತಕ್ಷೆತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಜನತಾದಳ ಪಕ್ಷ ಬಸವಣ್ಣವರ ಸಿದ್ದಾಂತದ ಮೇಲೆ ನಿಂತಿದೆ. ಅವರ ಹಾಕಿ ಕೊಟ್ಟ ಹಾದಿಯಲ್ಲಿ ನಮ್ಮ ಪಕ್ಷದ ನಾಯಕರು ನಡೆಯುತ್ತಿದ್ದಾರೆ. ನಮ್ಮ ಪಕ್ಷದ ಸರ್ಕಾರದಲ್ಲಿ ರೈತರ ಏಳಿಗಾಗಿ ಅನೇಕ ಯೋಜನೆಗಳನ್ನು ನೀಡಿ ರೈತರ ಕಣ್ಣೀರು ಒರೆಸುವಂತ ಕಾರ್ಯ ಮಾಡಿದೆ ಎಂದರು. 


ಮುಂದೆ ಜೆಡಿಎಸ ಸರ್ಕಾರ ಆಗುವುದು ಖಚಿತವಾಗಿದ್ದು, ಜನತಾದಳ ಮಾತುಕೊಟ್ಟರೇ ಯಾವತ್ತು ತಪ್ಪಲ್ಲ ನಮ್ಮ ಸರ್ಕಾರ ರಚನೆಯಾದ ಮೇಲೆ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮಗಳ ಸೂಕ್ತ ಸ್ಥಾನಮಾನ ನೀಡಲಾಗುವುದು, ಉಚಿತ ಆಸ್ಪತ್ರೆ ಚಿಕಿತ್ಸೆ, ಉತ್ತಮ ಶಿಕ್ಷಣಕ್ಕಾಗಿ ಶಾಲೆಗಳ ಪ್ರಾರಂಭ, 5ಲಕ್ಷ ರೂ, ಮನೆ, ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಬಡಜನರಿಗೆ ನಮ್ಮ ಸರ್ಕಾರ ಉತ್ತಮವಾದ ಆಡಳಿತವನ್ನು ನೀಡುತ್ತದೆ. ಜನೇವರಿಯಲ್ಲಿ ಪಂಚರತ್ನ ಕಾರ್ಯಕ್ರಮ ಅರಭಾವಿ ಮತಕ್ಷೇತ್ರದಲ್ಲಿ ಬರುತ್ತದೆ ನಮ್ಮ ಪಕ್ಷದ ಕಾರ್ಯಕರ್ತರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಿ ಎಂದು ಹೇಳಿದರು. 


ಈಗಾಗಲೇ ನಮ್ಮ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಘೋಷಣೆ ಮಾಡಿದ್ದೇವೆ. ಕಾಂಗ್ರೇಸನಲ್ಲಿ ಯಾರು ಮುಖ್ಯಮಂತ್ರಿ ಎಂದು ಹೇಳುತ್ತಿರಾ ಹಾಗೂ ಬಿಜೆಪಿಯಲ್ಲಿ ಯಾರು ಅಂತ ಹೇಳಿತ್ತಿರಾ ಬಿಜೆಪಿ ಮತ್ತು ಕಾಂಗೇಸ್ರ್‌ ಪಕ್ಷಕ್ಕೆ ಸವಾಲ್ ಹಾಕಿದರು. ಬಸವಣ್ಣವರ ಹೆಸರು ಹೇಳಿ ಅಧಿಕಾರಿಕ್ಕೆ ಬಂದಿದ ನೀವು ಇವತ್ತು ರಾಜ್ಯದ ಮಕ್ಕಳು ಬಸವಣ್ಣ ಬಗ್ಗೆ ಓದು ಬೇಕು ಅಂದ್ರೆ ಪಠ್ಯಪುಸ್ತಕದಲ್ಲಿ ಅವರ ಹೆಸರು ತೆಗೆದುಹಾಕೀದೀರಿ ಅದನ್ನು ಕೇಳುವ ಶಕ್ತಿ ಇವತ್ತು ಯಾರಿಗೂ ಇಲ್ಲ ಆದರೆ ಇವತ್ತು ನಾವು ಕೇಳುತ್ತಿದ್ದೇವೆ ನಾವು ಬಸವಣ್ಣರ ಅಭಿಮಾನಿಗಳು ನಾವು ಎಂದರು. 


ಈ ಸಭೆಯ ವೇದಿಕೆಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ, ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಅರಭಾವಿ ಮಂಡಲ ಅಧ್ಯಕ್ಷ ಈರಣ್ಣ ಕೊಣ್ಣೂರ,  ದಾದಾಪೀರ ಶೇಖ, ಪ್ರಮೋದ ಪಾಟೀಲ, ಪಯಾಜುಲ್ಲಾ ಮಾಡಿವಾಲೆ,  ಶಂಕರಗೌಡ ಪಾಟೀಲ, ಸುನೀಲ ವರ್ಣೆಕರ, ಗಂಗಾಧರ ಹಿರೇಮಠ, ಮಲ್ಲಪ್ಪ ಮದಗುಣಕಿ, ಸಂಗಪ್ಪ ಕಳ್ಳಿಗುದಿ, ಪ್ರಕಾಶ ಕಾಳಶೆಟ್ಟಿ, ಶ್ರೀಶೈಲ್ ಜೈನಾಪೂರ, ಶ್ರೀಕಾಂತ ಪರುಶೆಟ್ಟಿ, ಕಾಶಪ್ಪ ಝಂಡೇಕುರಬರ, ಮಲ್ಲಿಕ ಅರಭಾಂವಿ, ಲಿಂಗರಾಜ ಅಂಗಡಿ, ಮಾರುತ್ತಿ ಸುಂಕದ, ಮೂಡಲಗಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸದಸ್ಯರಾದ ಆದಮ್ ತಾಂಬೋಳಿ, ಶಿವಾನಂದ ಸಣ್ಣಕ್ಕಿ, ಸತ್ತವ್ವಾ ಅರಮನಿ  ಮತ್ತಿತರರು ಇದ್ದರು.   


ಸುದ್ದಿ ಓದಿ