ಧಾರವಾಡ - ಹುಬ್ಬಳ್ಳಿ

ಸಂಗೀತವನ್ನು ಭಕ್ತಿಯ ಕಾಯಕವೆಂದವರು ಬಹುಭಾಷಾ ಕೋಗಿಲೆ ಜಾನಕಮ್ಮ : ಅನಿಲಕುಮಾರ ಪಾಟೀಲ

ಸಂಗೀತವನ್ನು ಭಕ್ತಿಯ ಕಾಯಕವೆಂದವರು ಬಹುಭಾಷಾ ಕೋಗಿಲೆ ಜಾನಕಮ್ಮ : ಅನಿಲಕುಮಾರ ಪಾಟೀಲ

ಲೋಕದರ್ಶನ ವರದಿ 

ಧಾರವಾಡ 27 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ ಚಂದ್ರಶೇಖರ ಕಂಬಾರ ದತ್ತಿ, ದಿ. ಗುರುಬಸಪ್ಪ ಚ. ನಾಡಗೌಡ ದತ್ತಿ, ಅಧ್ಯಕ್ಷರು ಜಾನಪದ ಜಗತ್ತು ಟ್ರಸ್ಟ್‌ ದತ್ತಿ ಅಂಗವಾಗಿ  ಡಾ ಎಸ್ ಜಾನಕಿ ಇವರು ಹಾಡಿದ ಕನ್ನಡ ಚಿತ್ರಗೀತೆ ಹಾಡುವ ಅಂತಿಮ ಸ್ಪರ್ಧೆ  ಕಾರ್ಯಕ್ರಮವನ್ನು ಹುಬ್ಬಳ್ಳಿ ಧಾರವಾಡ ಮಾಜಿ ಮಹಾಪೌರರಾದಶ್ರೀ ಅನೀಲಕುಮಾರ ಪಾಟೀಲ ಇವರು ಉದ್ಘಾಟಿಸಿ, ಸಂಗೀತವನ್ನು ಭಕ್ತಿಯ ಕಾಯಕವೆಂದವರು ಜಾನಕಮ್ಮ ಬಹುಭಾಷಾ ಕೋಗಿಲೆ ಆಗಿದ್ದಾರೆ . ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದವರು. 

ಅತಿಥಿಗಳಾಗಿ ಆಗಮಿಸಿದ್ದ ಡಾ ಚಂದ್ರಶೇಖರ ರೊಟ್ಟಿಗವಾಡ ಇವರು ವಿವಿಧ ರೀತಿಯ ಧ್ವನಿಗಳನ್ನು ನೀಡಬಲ್ಲ ಸಾಮರ್ಥ್ಯ ಹೊಂದಿದವರು ಜಾನಕಮ್ಮ,ಇವರ ಹಾಡುಗಳನ್ನು ಹಾಡುವದೆಂದರೆ  ಎಲ್ಲರಿಗೂ ಸಂತಸ ಎಂದರು.ಡಾ ಎಸ್ ಜಾನಕಿ ಯಾವುದೇ ಎದುರಿಗೆ ಝೀ ಕನ್ನಡ ವಾಹಿನಿಯಲ್ಲಿ ಹಾಡಿ ಭೇಷ್ ಎನಿಸಿಕೊಂಡಿದ್ದ ಡಾ ಶ್ವೇತಾ ಹಿರೇಮಠ ಹಾಡಿದರು. ದತ್ತಿ ದಾನಿಗಳಾದ ಅಕ್ಕಮಹಾದೇವಿ ನಾಡಗೌಡ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ ಲಿಂಗರಾಜ ಅಂಗಡಿಯವರು ಇದೊಂದು ಅವಿಸ್ಮರಣೀಯ ಕಾರ್ಯಕ್ರಮ,ಮಹಾನ್ ಗಾಯಕಿ ಎಸ್ ಜಾನಕಿ ಅಭಿಮಾನಿಗಳ ಪಾಲಿಗೆ ಗಾನ ಸರಸ್ವತಿ.ಇಂತಹವರ ಸ್ಮರಣಾರ್ಥ ಹಾಡಿನ ಸ್ಪರ್ಧೆ ಏರಿ​‍್ಡಸಿದ್ದು ಸಂತೋಷ ಎಂದರು.ವೇದಿಕೆಯ ಮೇಲೆ ಎಸ್ ಎಚ್ ಪ್ರತಾಪ್ ಉಪಸ್ಥಿತರಿದ್ದರು. 

ಸ್ಪರ್ಧೆಯ ನಿರ್ಣಾಯಕರಾಗಿ ಪ್ರಮೀಳಾ ಜಕ್ಕಣ್ಣವರ, ಉಮಾ ಬಾಗಲಕೋಟ, ಮೇಘಾ ಹುಕ್ಕೇರಿ ಅಚ್ಚುಕಟ್ಟಾಗಿ ನಿರ್ವಹಿಸಿದರು.ಒಟ್ಟು ಇಪ್ಪತ್ತು ಗಾಯಕರು ಜಾನಕಮ್ಮ ನವರು ಹಾಡಿದ ಕನ್ನಡ ಚಿತ್ರಗೀತೆಗಳ ಹಾಡನ್ನು ತನ್ಮಯತೆಯಿಂದ ಹಾಡಿ ಎಲ್ಲರ ಮನಸ್ಸನ್ನು ಗೆದ್ದರು. ಬಹುಮಾನ ಪಡೆದ ಸ್ಪರ್ಧಾಳುಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.  ಪ್ರಾರಂಭದಲ್ಲಿ ಎಸ್ ಜಾನಕಿ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು. ಪ್ರಾರಂಭದಲ್ಲಿ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ನರೇಗಲ್ಲ ನಿರೂಪಿಸಿದರು.

ಮೇಘಾ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ  ಸುಜಾತಾ ಆನವಟ್ಟಿ, ಡಾ. ಕುಮದ್ವತಿ ಭರಮಗೌಡರ, ಡಾ. ಅರುಣಾ ಹಳ್ಳಿಕೇರಿ ಗುರು ತಿಗಡಿ. ಎಚ್‌. ಎಸ್‌. ಬಡಿಗೇರ, ಬಸವರಾಜ ತಾಳಿಕೋಟಿ, ನೇಹಾ ಬುದ್ನಿ, ಗೀತಾ ಕುಂಬಿ,ಅನುಶ್ರೀ ಜಕ್ಕಣ್ಣವರ, ಚಿಂತನ ಹತ್ತೀಕಾಳ, ನಿತಿನ್ ಮೆಣಸಿನಕಾಯಿ ಮಹೇಶ ಪರಸಣ್ಣವರ, ಕಳಮಂಗಿ, ಅನ್ನಪೂರ್ಣ ತಾಳಿಕೋಟಿ, ಭಾರತಿ ಪರ್ವತಿಕರ, ಪಾರ್ವತಿ ಹಮ್ಮಿಗಿ ಶ್ರೀನಿಧಿ ಜಕ್ಕಣ್ಣವರ, ಸುಲೋಚನಾ ಮಾಲಿಪಾಟೀಲ, ಉಮಾಕಾಂತ ಅರ್ಕಸಾಲಿ  ಭಾಗವಹಿಸಿದ್ದರು. 


ಸುದ್ದಿ ಓದಿ