ರೋಗಿಗಳಿಗೆ ಹಣ್ಣುಗಳು ವಿತರಿಸುವ ಮೂಲಕ ಜಮೀರ್ ಅಹ್ಮದ್ ಖಾನ್ರ ಜನ್ಮದಿನಾಚರಣೆ
ಬಳ್ಳಾರಿ 01 : ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರ ಹುಟ್ಟು ಹಬ್ಬದ ಆಚರಣೆಯನ್ನು ವಿಜಯನಗರ ಜಿಲ್ಲಾ ಬಿ ಜೆಡ್ ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗದ ವತಿಯಿಂದ ಆಚರಿಸಲಾಯಿತು.
ಈ ನಿಟ್ಟಿನಲ್ಲಿ ನಗರದ ನೂರು ಹಾಸಿಗೆ ಆಸ್ಪತ್ರೆ ಹಾಗೂ ಅರವತ್ತು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹೊಸಪೇಟೆ ಹಾಗೂ ಚಿತ್ತವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಗಳು ಮತ್ತು ಬ್ರೆಡ್ಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಲಾಯಿತು. ಹಾಗೂ ಸಾರ್ವಜನಿಕರಿಗೆ ಪ್ರಕೃತಿ ಪ್ರಿಯರಿಂದ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಹುಲುಗಪ್ಪನವರು ಮಾತನಾಡಿ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಅಭಿಮಾನಿರವರ ಹಾಗೂ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರ ಅಭಿಮಾನಿ ಬಳಗದಿಂದ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ, ಅರವತ್ತು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹೊಸಪೇಟೆ ಹಾಗೂ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗು ಚಿತ್ತವಾಡ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ್ಣುಗಳನ್ನು ಬ್ರೆಡ್ಗಳನ್ನು ವಿತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಹಾಗೂ ಮಾನ್ಯ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ರವರ ಜನ್ಮದಿನದ ಪ್ರಯುಕ್ತ ಪ್ರಕೃತಿ ಪ್ರಿಯರಿಂದ ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತಿದೆ.
ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಹಾಗೂ ಅವರ ಕುಟುಂಬಕ್ಕೆ ಆಯುರ್ ಆರೋಗ್ಯ ಅಷ್ಟೈಶ್ವರ್ಯಗಳನ್ನು ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಇವರ ಜನ್ಮದಿನದ ಆಚರಣೆ ಪ್ರಯುಕ್ತ ಮಾನ್ಯ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಅಭಿಮಾನಿರವರ ಅಭಿಮಾನಿ ಬಳಗದವರು ನಿನ್ನೆಯಿಂದಲೇ ಪರಿಶ್ರಮಪಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದಕ್ಕೆ ಅವರೆಲ್ಲ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ಹಾಗೂ ಜಾತ್ಯತೀತ ಧರ್ಮತೀತ ಪಕ್ಷತೀತ ನಾಯಕರಾಗಿ ಬೆಳೆಯುತ್ತಿರುವ ಸನ್ಮಾನ್ಯ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರು ರಾಜ್ಯಮಟ್ಟ ದಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಲಿ ಹಾಗೂ ಇಡೀ ದೇಶಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ಅದೇ ರೀತಿ ಈ ಒಂದು ಆಸ್ಪತ್ರೆಗಳಲ್ಲಿರುವ ಎಲ್ಲಾ ರೋಗಿಗಳು ಸಹ ಬೇಗನೆ ಗುಣಮುಖರಾಗಿ ಮನೆಗೆ ಸೇರಿ ಸಂತೋಷದಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ವಿಜೃಂಭಣೆಯಿಂದ ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರ ಜನ್ಮದಿನಾಚರಣೆಯನ್ನು ಆಚರಿಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ನಂತರ ಇನ್ನೋರ್ವ ಮುಖಂಡರಾದ ಗೌರಿಶಂಕರ್ ಬಣಕಾರ್ ರವರ ಮಾತನಾಡಿ ಸನ್ಮಾನ್ಯ ಸಚಿವರಾದ ಬಿ. ಜೆಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು. ನಂತರ ಸನ್ಮಾನ್ಯ ಸಚಿವರಾದ ಬಿಜೆಡ್ ಜಮೀರ್ ಅಹ್ಮದ್ ಖಾನ್ ರವರು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆದು ಲಕ್ಷಾಂತರ ಬಡ ಜನರಿಗೆ ಸೇವೆ ಸಲ್ಲಿಸುವ ಭಾಗ್ಯವನ್ನು ಮತ್ತು ಶಕ್ತಿಯನ್ನು ಭಗವಂತನ ನೀಡಲಿ ಎಂದು ಪ್ರಾರ್ಥಿಸಿದರು. ಇವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು.
ಸಚಿವರಾದ ಬೀಜ ಜಮೀರ್ ಅಹ್ಮದ್ ಖಾನ್ ರವರು ರಾಜ್ಯದಲ್ಲಿಯೇ ಮೊಟ್ಟ ಮೊದಲನೆದಾಗಿ ಕೆಡಿಪಿ ಸಭೆಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆತಂದು ಸಭೆಯನ್ನು ನಡೆಸಿರುವುದು ಇತಿಹಾಸದ ಸಂಗತಿಯಾಗಿದೆ.
ನಂತರ ಇನ್ನೊರ್ವ ಮುಖಂಡರಾದ ತೇಜಾ ನಾಯಕ್ ರವರು ಮಾತನಾಡಿ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಹಾಗೂ ಅವರ ಕುಟುಂಬಕ್ಕೆ ಆಯುಷ್ ಆರೋಗ್ಯ ಕೊಟ್ಟು ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಇವರ ಜನ್ಮದಿನದ ಆಚರಣೆ ಆಯೋಜಕರಾಗಿರುವಂತಹ ಮಾನ್ಯ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಜಾತ್ಯಾತೀತ ನಾಯಕರಾಗಿ ಬೆಳೆಯುತ್ತಿದ್ದು ಉನ್ನತ ಸ್ಥಾನವನ್ನು ಅಲಂಕರಿಸುವಂತಾಗಲೀ ಆ ಭಗವಂತನಲ್ಲಿ ಪ್ರಾರ್ಥಿಸಿದರು. ಅವರಿಗೆ ಸಾರ್ವಜನಿಕರಿಂದ ಹಾಗು ಪಕ್ಷದ ಮುಖಂಡರುಗಳ ಹಾಗು ಇಡೀ ರಾಜ್ಯದ ಜನತೆಯ ಸಹಕಾರ ಅವರೊಂದಿಗೆ ಸದಾ ಇರುವಂತೆ ಅಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಒಂದು ಕಾರ್ಯಕ್ರಮದ ರುವಾರಿಗಳಾದ ಎನ್ ಮೊಹಮ್ಮದ್ ಸಮದ್ ನಿಯಾಜಿ, ಹಾಗು ಡಾ. ದುರ್ವೇಶ್ ಮೈನುದ್ದಿನ್ ರವರು ಜಫರುಲ್ಲಾ ಖಾನ್, ರಜಾಕ್, ರೆಹಮಾನ್, ವಿಜಯಕುಮಾರ್, ಮೊಹಮ್ಮದ್ ಜಾವೀದ್, ವಿ. ನಾಗರಾಜ, ಸಿ.ರಮೇಶ, ರಾಜ, ಆರ್ ವಿನಾಯಕ, ಬಂಡಿ ಬಾಷ, ಸಾದಿಕ್ ಅಲಿ, ಪಾಡುರಂಗ, ಶ್ರೀನಿವಾಸ, ಮೆಹಬೂಬ್ ಜಡಿಯಪ್ಪ, ವಿರೂಪಾಕ್ಷಿ, ಅವರು ಹಾಗೂ ನುರಾರು ಅಭಿಮಾನಿಗಳು ಉಪಸ್ಥಿತರಿದ್ದರು.