ಮಳೆಗಾಗಿ ಪ್ರಾರ್ಥಿಸಿ ಬುಡ್ಡೆಕಲ್ಲಿಗೆ ಜಲಾಭಿಷೇಕ ಒರಗಿನ ಅಮ್ಮನ ಉತ್ಸವ
ಕಂಪ್ಲಿ 21: ನಾಡಿನಾದ್ಯಂತ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಾಡಿನುದ್ದಕ್ಕೂ ಮಳೆಗಾಗಿ ಪ್ರಾರ್ಥಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿದ್ದು, ಕಂಪ್ಲಿ ಪಟ್ಟಣದಲ್ಲಿಯೂ ಸಹಿತ ಮಳೆಗಾಗಿ ಪ್ರಾರ್ಥಿಸಿ ಗ್ರಾಮ ದೇವತೆ ಶ್ರೀಮಾರೆಮ್ಮ ದೇವಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಚಪ್ಪಗಸಿಯಲ್ಲಿರುವ ಬುಡ್ಡೆಕಲ್ಲಿಗೆ ನಿತ್ಯ ಜಲಾಭಿಷೇಕ ನಡೆಸುತ್ತಿದ್ದು, ಶ್ರೀಮಾರೆಮ್ಮ ದೇವಿಯ ಒರಗಿನ ಅಮ್ಮನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆಎಂದು ದೇಗುಲದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ 8 ದಿನಗಳಿಂದ ಬುಡ್ಡೆಕಲ್ಲಿಗೆ ಬೆಳಗಿನ ಜಾವ ತುಂಗಭದ್ರಾನದಿಯಲ್ಲಿಯೇ ಸ್ನಾನಮಾಡಿ ಮಡಿಯಿಂದ ಅಲ್ಲಿಂದಲೇ 11 ಜನರು ನಿತ್ಯ ಜಲಾಭಿಷೇಕವನ್ನು ಮಾಡುತ್ತಿದ್ದು, 11ನೇ ದಿನ ಬುಡ್ಡೆಕಲ್ಲಿಗೆ ಜಲಾಭಿಷೇಕವನ್ನು ಸಂಪೂರ್ಣಗೊಳಿಸಿ, ಬುಡ್ಡೆಕಲ್ಲಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ನಂತರ ವಿಶೇಷಪೂಜೆಯನ್ನು ಸಲ್ಲಿಸಲಿದ್ದಾರೆ.ನಂತರ ಮಂಗಳವಾರ ಬೆಳಗಿನ ಜಾವ ತುಂಗಭದ್ರಾ ನದಿಗೆ ತೆರಳಿ ಅಲ್ಲಿ ಗಂಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ತನಗೊಡವನ್ನು ತಂದು ದೇಗುಲದ ಹೊರಭಾಗದಲ್ಲಿ ಚಪ್ಪರವನ್ನು ಹಾಕಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಸರ್ವ ಸಮುದಾಯದವರು ದೇವಿಗೆ ನೈವೇದ್ಯವನ್ನು ಸಮರ್ಿಸಬೇಕೆಂದು ಸಮಿತಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾಸರ್ವವರೂ ನೈವೇದ್ಯವನ್ನು ಸಮರ್ಿಸಿದ ನಂತರ ದೇವಿಯ ತನುಗೊಡದ ಜೊತೆಗೆ ಅಲ್ಲಿನ ಪ್ರತಿಯೊಂದು ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಅವುಗಳನ್ನು ಡೊಳ್ಳು ಮತ್ತು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಹೊರವಲಯದ ಅಂದರೆ ಊರಿನ ಹೊರಮ್ಯಾರೆಗೆ ಬಿಟ್ಟು ಬರಲಿದ್ದಾರೆ.
ನಂತರ ಮುಂದಿನ ಊರಿನವರು ಆವಸ್ತುಗಳನ್ನು ತಮ್ಮ ಊರಿನ ಹೊಮ್ಯಾರೆಗೆ ತಲುಪಿಸಲಿದ್ದಾರೆ. ಈ ಕಾರ್ಯಕ್ರಮ ಊರಿಂದ ಊರಿಗೆ ಹಾಗೆಯೇ ಸಾಗುತ್ತಿದೆ.ಈ ರೀತಿ ಬುಡ್ಡೆಕಲ್ಲಿಗೆ ಜಲಾಭಿಷೇಕ ಮಾಡುವುದರಿಂದ ಹಾಗೂ ಒರಗಿನ ಅಮ್ಮನ ಉತ್ಸವನ್ನು ಮಾಡುವುದರಿಂದ ಮಳೆಯಾಗಲಿದೆ ಎನ್ನುವ ಪ್ರತೀತಿ ಇದೆ ಎಂದು ದೇಗುಲದ ಪದಾಧಿಕಾರಿಗಳು ಹಾಗೂ ಹಿರಿಯರಾದ ಎಂ.ಗೋಪಾಲ್. ಎನ್ ಯಲ್ಲಪ್ಪ, ಎನ್.ನಾಗರಾಜ, ದೊಡ್ಡಶೇಖಣ್ಣ ನಾಗಪ್ಪ ಎನ್ ದ್ಯಾವಣ್ಣ ಮಲ್ಲಯ್ಯ ವಿರುಪಣ್ಣ, ವೆಂಕಟಾಪತಿ ವೆಂಕಟರಮಣ ಮತ್ತು ಈರಣ್ಣ ಸೇರಿ ಅನೇಕರಿದ್ದರು