ಮಹಲಿಂಗಪುರ

ಹಿಂದೂ ಸಮಾಜದ ರಕ್ಷಣೆ ಯುವ ಪೀಳಿಗೆಯ ಹೊಣೆ : ಜಗದೀಶ ಕಾರಂತ

ಹಿಂದೂ ಸಮಾಜದ ರಕ್ಷಣೆ ಯುವ ಪೀಳಿಗೆಯ ಹೊಣೆ : ಜಗದೀಶ ಕಾರಂತ

ಮಹಾಲಿಂಗಪುರ: ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಯುವ ಕಾರ್ಯಕರ್ತರ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟಕ ಜಗದೀಶ ಕಾರಂತ ಅವರು ಆಡಿದ ಮಾತು ದುಗುಡ ದುಮ್ಮಾನಕ್ಕೆ ಹಿಂದೂ ಜಾಗರಣ ವೇದಿಕೆ ಯುವಕರು ನಿಬ್ಬೆರಗಾರು. ಪ್ರಾಚೀನ ಯುಗದಿಂದ ಇಂದಿನವರೆಗೂ ಪ್ರಾರಂಭವಾದ ಹಿಂದೂ ಜನಾಂಗಕ್ಕೆ ದಮನ ಮತ್ತು ಕಗ್ಗೊಲೆಗಳು ಲೆಕ್ಕವಿಡಲು ಸಾಧ್ಯವಿಲ್ಲ ಎಂದು ಅವರು ಗುಡುಗಿದರು. ಜಗದೀಶ ಕಾರಂತರ ಮಾರ್ಮಿಕವಾದ ಮಾತುಗಳು ನೆರೆದ ಸಭೀಕರ ಮೈ ನೆಮಿರೆಳುವಂತೆ ಮಾಡಿತ್ತು. ಧರ್ಮ ರಕ್ಷಣೆ ಕಾರ್ಯದಲ್ಲಿ ಯುವಕರ ಕಲ್ಪನೆಯ ಜವಾಬ್ದಾರಿಯನ್ನು ಆಯಾ ಕಾಲಗಟ್ಟದಲ್ಲಿ ತ್ಯಾಗ ಮತ್ತು ಬಲಿದಾನಗಳಿಂದ ತೀವ್ರವಾಗಿ ಜರ್ಜರಿತವಾದ ಪ್ರಪಂಚದ ಯಾವುದಾದರೂ ಧರ್ಮ ಇದ್ದರೆ ಅದು ಹಿಂದೂ ಧರ್ಮ ಎಂದು ಅವರು ಪ್ರತಿಪಾದಿಸಿದರು. ಭಾರತ ಹಿಂದೂ ರಾಷ್ಟ್ರವಾಗಿದ್ದರೂ ಇಲ್ಲಿ ವಾಸಿಸುವ ಹಿಂದು ನಾಗರಿಕನಿಗೆ ಪ್ರಾಣದ ಬೆಲೆ ಇಲ್ಲದಾಗಿದೆ. ಕಾರಣ ಅನ್ಯ ಕೋಮಿನ ಜಿಹಾದಿ ಮಂತ್ರಕ್ಕೆ ನೇರ ತುತ್ತಾದದ್ದು ಹಿಂದೂ ಸಮಾಜ ಮತ್ತು ಯುವಕರು ಹಾಗೂ ಹಿಂದೂ ಮಹಿಳೆಯರು. ಪ್ರಪಂಚದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ವಿಜ್ಞಾನ ಕ್ರಾಂತಿ ಆಗುತ್ತಿದ್ದರೆ, ಶೇ. 85ರಷ್ಟು ಜನಸಂಖ್ಯೆ ಹೊಂದಿದ ಹಿಂದುಸ್ತಾನದಲ್ಲಿ ನಮ್ಮೊಂದಿಗೆ ಇರುವ ಶೇ. 15ರಷ್ಟು ಮುಸ್ಲಿಂರು ಮತ್ತು ಇನ್ನೀತರ ಕೋಮಿನವರು ಜನಸಂಖ್ಯೆ ಜಿಹಾದ್ ಎನ್ನುವ ಪರಿಕಲ್ಪನೆಯೊಂದಿಗೆ ಅವರ ಧರ್ಮದ ಮೂಲಕ ಭೂಮಿಯನ್ನು ಖರೀದಿಸುವ ಮೂಲಕ ವ್ಯಾಪಾರದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ ಹಾಗೂ ಹಿಂದೂ ಸ್ತ್ರೀ ಸಂತಾನ ಸಮಾಪ್ತಿಗೊಳಿಸುವ ಲವ್ ಜಿಹಾದ್ ಮಾದರಿಯ ಕಾರ್ಯಕಗಳನ್ನು ನಿರಂತರವಾಗಿ ಹಿಂದೂ ಧರ್ಮದ ವಿರುದ್ದ ಸದಾ ಪ್ರಯೋಗಿಸಿ ಸಾಕಷ್ಟು ಯಶಸ್ಸನ್ನು ಈಗಾಗಲೇ ಸಾಧಿಸಿದ್ದಾರೆ. ಕಾಶ್ಮೀರ ಪಂಡಿತರ ನರಹತ್ಯೆ ಮಾಡುವುದರಿಂದ ಭಾರತದ ಅನ್ಯ ರಾಜ್ಯಗಳಲ್ಲಿ ಇಂದಿಗೂ ಕೂಡಾ ಈ ರೀತಿಯ ಕ್ರೂರ ಚಟುವಟಿಕೆ ಮುಂದುವರೆಸಿರುವುದು ಘೋರ ಅಪರಾಧವಾಗಿದೆ. 2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುತ್ತೇವೆ ಎನ್ನುವ ಎನ್ನುವ ಕೆಲವು ಮುಸ್ಲಿಂ ಸಂಘಟನೆಯ ಪರಿಕಲ್ಪನೆಯನ್ನು ಜಾಗರಣ ಸಂಘಟನೆ ಯುವ ವೇದಿಕೆಯಲ್ಲಿ ಏಳೆ ಏಳೆಯಾಗಿ ಬಿಚ್ಚಿಟ್ಟ ಅವರು, ಸ್ವಾತಂತ್ರಯ ಪಡೆದ ತಕ್ಷಣ ಗಾಂಧಿಜೀ ಅವರು ಭಾರತವನ್ನು ಹಿಂದೂ ರಾಷ್ಟ್ರವಾಗಿ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವಾಗಿ ಬೇರಿ​‍್ಡಸಿದ ಕ್ಷಣದಿಂದ ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮಾರಣ ಹೋಮವಾಗಿದೆ.ಭಾರತದಲ್ಲಿ ಮುಸ್ಲಿಂರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ಆದರೂ ಅವರ ದುಸ್ಸಾಹಸ ಇನ್ನೂ ನಿಂತಿಲ್ಲ. ಇದಕ್ಕೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹರ್ಷಾ ಮತ್ತು ಮಂಗಳೂರಿನಲ್ಲಿ ನಡೆದ ಪ್ರವೀಣನ ಕಗ್ಗೊಲೆಗಳೆ ಸಾಕ್ಷಿ. ಇನ್ನಾದರೂ ಜಿಹಾದ್ ಎನ್ನುವ ಸೇಡನ್ನು ಬಿಟ್ಟು ಬದುಕುವುದನ್ನು ಕಲಿಯಿರಿ ಎಂದು ಜಗದೀಶ ಕಾರಂತ ಅವರು ಕರೆ ನೀಡಿದರು. ಹಿಂದೂ ಯುವ ಕಾರ್ಯಕರ್ತರಿಗೆ ಬದುಕಿನ ಭರವಸೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹಂಚಿದರು. ಅಲೆಕ್ಸಾಂಡರ್, ಓರಂಗಜೇಬ್ ಮತ್ತು ಟಿಪ್ಪು ಸುಲ್ತಾನ ಕಾಲದಲ್ಲಿ ಭಾತರದಲ್ಲಿ ಮಡಿದ ಹಿಂದೂಗಳಿಗೆ ನಮ್ಮ ಪೂರ್ವಜರು ಲೆಕ್ಕವಿಟ್ಟಿಲ್ಲ. ಅವರು ಮಡಿದು ನಮ್ಮನ್ನು ರಕ್ಷಣೆ ಮಾಡಿ ಅಸುನೀಗಿದ್ದಾರೆ. ಇನ್ನು ಮೇಲೆ ಈವು ಹಿಂದೂ ಯುವಕರು ಅಲಕ್ಷ್ಯ  ಮಾಡಿ ಕೈಕಟ್ಟಿ ಕುಳಿತುಕೊಳ್ಳಬೇಡಿ. ಹೆಚ್ಚು ದುಡಿಯಿರಿ, ನಿಮ್ಮ ಮನೆಯ ಅಕ್ಕ-ತಂಗಿ-ತಾಯಿಯರನ್ನು ಹೇಗೆ ರಕ್ಷಿಸುತ್ತಿರೋ ಅದೇ ರೀತಿ ಹಿಂದು ಯುವತಿಯರನ್ನ ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮದಾಗಲಿ ಎಂದರು. ಬಳ್ಳಾರಿ ಜಿಲ್ಲೆ ಹಿರೇಹಡಗಲಿಯ ಅಭಿನವ ಹಾಲ ಮಹಾಸ್ವಾಮಿಗಳು, ಹುಬ್ಬಳ್ಳಿ ವೀರ ಭೀಕ್ಷಾವರ್ತಿ ಮಠದ ಶಿವಶಂಕರ ಮಹಾಸ್ವಾಮಿಗಳು ಸಾನಿಧ್ಯ ವಹಸಿ ಆಶೀರ್ವಚನ ನೀಡಿದರು. 

ವೇದಿಕೆಯಲ್ಲಿ ಪದ್ಮಾ ನಾಗರಾಜ್, ಶ್ರೀಶೈಲಪ್ಪ ರೊಡ್ಡನ್ನವರ, ಎಂ.ಆರ್‌.ತೇರದಾಳ, ಶ್ರೀಶೈಲಪ್ಪ ಬಾಡನವರ ಅತಿಥಿಗಳಾಗಿ ಆಸೀನರಾಗಿದ್ದರು. ಚಂದ್ರಶೇಖರ ಗೊಂದಿ ಅಧ್ಯಕ್ಷತೆ ವಹಿಸಿದ್ದರು.ತೇರದಾಳ ಶಾಸಕರಾದ ಸಿದ್ದು ಸವದಿ,ಅಂಬಾದಾಸ ಕಾಮೂರ್ತಿ, ಮಹಾಂತೇಶ ಹಿಟ್ಟಿನಮಠ, ರಮೇಶ ಕೆಸರಗೊಪ್ಪ, ರವಿ ಜವಳಗಿ, ಶ್ರೀಶೈಲಗೌಡ ಪಾಟೀಲ,ನಂದು ಗಾಯಕವಾಡ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ಹಿಟ್ಟಿನಮಠ, ಸುರೇಶ ಅಕ್ಕಿವಾಡ, ಮಹಾಲಿಂಗ ಕಂಕಣವಾಡಿ,ಲಕ್ಕಪ್ಪ ಪಾಟೀಲ,ಜಿ.ಎಸ್‌.ಗೊಂಬಿ,ಶಂಭು ಬಡಿಗೇರ, ಮಹಾದೇವ ಪುಕಾಳೆ,ನಂದು ಲಾತುರ,ಶಿವು ನೇಗಿನಾಳ,ಸಚಿನ ಕಲ್ಮಡಿ,ಅಭಿಷೇಕ ಲಮಾಣಿ,ರಾಘು ಪವಾರ,ಕೃಷ್ಣಾ ಕಳ್ಳಿಮನಿ, ವಿಶಾಲ ಪತ್ತಾರ, ಅಕ್ಷಯ ಜಳ್ಳಿ, ಶಿವಾನಂದ ಕಲ್ಮಡಿ, ಯಲ್ಲಪ್ಪ ಬನ್ನೆನ್ನವರ,ಚನ್ನು ಆರಗೇರ, ಅಭಿ ಸೊನ್ನದ,ಮಹಾಲಿಂಗ ಕಲಾಲ, ಶಿವು ಹುಣಶ್ಯಾಳ,ಬೈರೇಶ ಆದೆಪ್ಪನವರ,ಶೇಖರ ಮುಗುದುಮ,ಸಾಗರ ಶಿಂಧೆ,ಮಹಾಲಿಂಗ ದೇಸಾಯಿ,ಮಂಜು ಭಾವಿಕಟ್ಟಿ,ರಾಜೇಂದ್ರ ನಾವಿ,ಶ್ರೀನಿಧಿ ಕುಲಕರ್ಣಿ,ತಮ್ಮಯ್ಯ ಆದೆಪ್ಪನವರ,ಸತೀಶ ಮುಗಳಖೋಡ,ಬಸವರಾಜ ಹುರಕಡ್ಲಿ, ಕಿರಣ ಡೊಂಬಳ, ರಾಹುಲ ನಾಯಕ, ರಾಘು ಮಾಳಗಿ ರಾಘು ಗರಘಟಗಿ, ಧರ್ಮರಾಜ ಪೂಜಾರಿ, ಸಿ ಭಿ ಭಜಂತ್ರಿ, ಸಂದೀಪ್ ಸೋರಗೊಂಡ,ಮುಂತಾದವರು ಉಪಸ್ಥಿತರಿದ್ದರು. 


 


ಸುದ್ದಿ ಓದಿ