ಮಹಲಿಂಗಪುರ

ಜಗದೀಶ್ವರಿ ಉತ್ಸವ: ಇಂದು ಮಹಾಪೂಜೆ, ಸಾಮೂಹಿಕ ಜಪಯಜ್ಞ

ಜಗದೀಶ್ವರಿ ಉತ್ಸವ: ಇಂದು ಮಹಾಪೂಜೆ, ಸಾಮೂಹಿಕ ಜಪಯಜ್ಞ

ಮಹಾಲಿಂಗಪುರ 18: ಮಹಾಲಿಂಗಪುರ ಧಾರ್ಮಿಕ, ಆಧ್ಯಾತ್ಮಿಕ, ಕಲೆ ಸಾಹಿತ್ಯದ ತವರು, ಇಲ್ಲಿ ನಿತ್ಯವೂ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮಾನವ ಕುಲಕೋಟಿಯ ಪುಣ್ಯದ ಫಲ, ಆ ನಿಟ್ಟಿನಲ್ಲಿ ಚನ್ನವೀರ ಶಿವಯೋಗಾಶ್ರಮದಲ್ಲಿ ಎರಡು ದಿನಗಳ ಕಾಲ ಜರುಗುವ ತಾಯಿ ಜಗದೀಶ್ವರಿ ಕಾರ್ಯಕ್ರಮಗಳು ನಮ್ಮ ಜನ್ಮ ಸಾರ್ಥಕತೆಗೆ ಪ್ರೇರಣೆಯಾಗಲಿವೆ ಎಂದು ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು. 

ಶುಕ್ರವಾರ ಸಂಜೆ ಸ್ಥಳೀಯ ಚನ್ನವೀರ ಶಿವಯೋಗಾಶ್ರಮದಲ್ಲಿ ಜರುಗಿದ ಜಗದೀಶ್ವರಿ ದೇವಿಯ ಉಡಿ ತುಂಬುವ 55ನೇ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ರವಿವಾರ ದಿ. 19ರಂದು ಬೆಳಿಗ್ಗೆ 8 ಗಂಟೆಯಿಂದ ಸದ್ಗುರುಗಳ ಕರ್ತೃ ಗದ್ದುಗೆಯ ರುದ್ರಾಭಿಷೇಕ, ಜಗದೀಶ್ವರಿಯ ಮಹಾಪೂಜೆ ನಂತರ ಸಾಮೂಹಿಕ ಜಪಯಜ್ಞ ಹಾಗೂ ಉಡಿ ತುಂಬುವುದು. ಮಹಾಪ್ರಸಾದ ಮುಂತಾದ ಧಾರ್ಮಿಕ ಕಾರ್ಯ ಜರುಗಲಿವೆ ಎಂದರು. 

ಓಂ ಶಾಂತಿ ಅಮ್ಮನವರು ಭಾಗವಹಿಸುವರು, ಎಂ.ಬಿ.ಬಿರಾದಾರ ತಮ್ಮ ತಾಯಿ ರಾಚಮ್ಮ ಸ್ಮರಣಾರ್ಥ ಅನ್ನಪ್ರಸಾದ ಮಾಡುವರು.ಮಹಾರಾಷ್ಟ್ರದ ನಾಂದೇಡದಿಂದಲೂ ಸಹ ಭಕ್ತರು ಪ್ರತಿ ವರ್ಷ ಆಗಮಿಸುತ್ತಿರುವುದು ವಿಶೇಷ. 

ಡಾ.ಯು.ಎಸ್‌.ಸ್ವಾಮಿ ಹಿರೇಮಠ, ಶ್ರೀಶೈಲ ಬಳ್ಳೊಳ್ಳಿ, ಎಂ.ಎಂ.ಮುತ್ತೂರ, ಡಾ.ಸಂಗಮೇಶ ಹಿಡಕಲ್, ಬಿ.ಕೆ.ಜಾನಕ್ಕಿ,ಚನ್ನಬಸು ಯರಗಟ್ಟಿ, ಬಸಪ್ಪ ಕೊಪ್ಪದ, ಗುರುಸಿದ್ಧಪ್ಪ ಅಂಬಿ, ಬಸಪ್ಪ ತಾಳಿಕೋಟಿ, ಬಸವರಾಜ ಪಾಶ್ಚಾಪುರ, ಆನಂದ ಘಟ್ನಟ್ಟಿ, ಮಹಾಲಿಂಗ ಶಿವಣಗಿ, ಶಿವಾನಂದ ಕಂಪು, ವಿರೂಪಾಕ್ಷಯ್ಯ ಮಠದ, ಎಸ್‌.ಬಿ.ಮೆಣಸಿನಕಾಯಿ, ಬಿ.ಎಂ.ಡೋಂಗ್ರೆ, ಎಂ.ಸಿ, ಚಿಲ್ಲಾಳಶೆಟ್ಟಿ, ನಾಗಲಿಂಗ ಬಡಿಗೇರ, ವಿನೋದ ಕಡಪಟ್ಟಿ, ಮಹಾಲಿಂಗ ರಂಗಾಪುರ ಇತರರಿದ್ದರು. 


ಸುದ್ದಿ ಓದಿ