ಸಿಂಧಗಿ

ಜಗದ್ಗುರು ರೇಣುಕಾಚಾರ್ಯರ ಜಯಂತಿ: ಪೂರ್ವಭಾವಿ ಸಭೆ

ಜಗದ್ಗುರು ರೇಣುಕಾಚಾರ್ಯರ ಜಯಂತಿ: ಪೂರ್ವಭಾವಿ ಸಭೆ

ಸಿಂದಗಿ 15: ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಮಾ. 23 ರಂದು ಆಚರಿಸುವ ಕುರಿತು ತಾಲೂಕು ಜಂಗಮ ಸಂಘದ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. 

ಸಮಾಜದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಮಾತನಾಡಿ, ಅಂದು ಬೆಳಿಗ್ಗೆ 8ಗೆ ಸಂಘದ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಂತರ ಮೆರವಣಿಗೆ ಮುಖಾಂತರ ತಾಲೂಕು ಆಡಳಿತ ಹಮ್ಮಿಕೊಳ್ಳಲಾಗುತ್ತಿರುವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಚೇರಿಗೆ ಹೋಗುವದು  ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವರು ಹಾಗೂ ಸಮಾಜದ ಬಂಧುಗಳು  ಭಕ್ತ ವೃಂದವು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವರು ಕಾರಣ ತಾಲೂಕಿನ ಜಂಗಮ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣಿಭೂತರಾಗುವಂತೆ ಕರೆ ನೀಡಿದರು. 

ಸಭೆಯಲ್ಲಿ ಉಪಾಧ್ಯಕ್ಷ ಶ್ರೀಶೈಲ್ ನಂದಿಕೋಲ, ಕಾರ್ಯದರ್ಶಿ ಎಂ ಎಂ ಹಿರೇಮಠ, ಸಮಾಜದ ಮಹಿಳಾ ಅಧ್ಯಕ್ಷೆ ಶೈಲಜಾ ಸ್ಥಾವರಮಠ, ವೀರಮೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶರಣಯ್ಯ ಮಠ, ಬಸಯ್ಯ ವಸ್ತ್ರದ, ಬಸಯ್ಯ ಹಿರೇಮಠ ಬಂದಾಳ, ಚೆನ್ನಯ್ಯ ಮಠ ಉಮೇಶ್ ಮಯೂರ್‌ಮಠ ಕುಲೇಕುಮಟ್‌ಗಿ, ಮಹಾಂತಯ್ಯ ಹಿರೇಮಠ ಬಗಲೂರ್, ಬಿ ಜಿ ಮಠ. ಸಂತೋಷ ನಂದಿಕೊಲ್, ಗುರುಬಸಯ್ಯ ಕರ​‍್ೂರಮಠ, ಮಲ್ಲಯ್ಯ ಹಿರೇಮಠ ಹಾಗೂ ವಿಶ್ವರಾಧ್ಯ ಮಲ್ಲಯ್ಯ ಮಠ ಮಲ್ಲಯ ಮಠ ಗೋಲಗೇರಿ ಹಾಗೂ ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯ ಅಧ್ಯಕ್ಷೆ ಮಹಾದೇವಿ ಹಿರೇಮಠ ಉಪಸ್ಥಿತರಿದ್ದರು. 


ಸುದ್ದಿ ಓದಿ